ಹಾಸನ: ಆಹಾರದ ಚೀಲಗಳನ್ನು ...
ಹಾಸನ: ಸುಖಾ ಸುಮ್ಮನೆ ನಮ್ಮೂರಿನ
Hassan: ಜನತಾ ಕರ್ಪ್ಯೂ ಇಂದ ...
ಬೆಂಗಳೂರು: ಕೊರೊನಾ ಪ್ರಕರಣದ ...
ಬೆಂಗಳೂರು : ಕೋವಿಡ್ -19 ಪ್ರಕರಣದ
ದಕ್ಷಿಣ ಕನ್ನಡ:
ನವದೆಹಲಿ: ಹೆಮ್ಮಾರಿ ಕೊರೊನಾ ...
ಹಾಸನ/ಶ್ರವಣಬೆಳಗೊಳ: ಚಾಲಕನ ...
ಹುಬ್ಬಳಿ: ಕೆಲವು ವಾಹಿನಿಗಳ ವರದಿ
ಹಾಸನ/ಅರಸೀಕೆರೆ: ನಾಡಿನ ...
ತುಮಕೂರು: ಈಜಲು ತೆರಳಿದ ವೇಳೆ ...
ಕೊಡಗು: ವಿದೇಶಿ ಮಹಿಳೆಯೊಬ್ಬರು ...
ತುಮಕೂರು: ಸಚಿವ ಬಿ.ಸಿ.ಪಾಟೀಲ್ ...
 ಹಾಸನ:ಬಸ್ ನಿಲ್ದಾಣದ ಸ್ಪೀಡ್ ...
ಕೋಲಾರ : ಮಾರಕಾಸ್ತ್ರಗಳಿಂದ ಯುವಕನ
ಹಾಸನ: ಜಮೀನಿನ ವಿಚಾರಕ್ಕೆ ...
ತುಮಕೂರು:ಪರಿಸರ ಸಂರಕ್ಷಣೆ ಬಗ್ಗೆ
ಚನ್ನರಾಯಪಟ್ಟಣ: ಪಟ್ಟಣದ ...
Rate this item
(0 votes)

ಹಾಸನ: ಆಹಾರದ ಚೀಲಗಳನ್ನು ಸಾಗಿಸುತ್ತಿದ್ದೇವೆ ಎಂದು ಕೂಲಿ ಕಾರ್ಮಿಕರನ್ನು ಲಾರಿಯಲ್ಲಿ ಬಚ್ಚಿಟ್ಟು ಹಾವೇರಿಗೆ ಕರೆದೊಯ್ಯುತ್ತಿದ್ದ ಲಾರಿಯನ್ನು  ವಶಕ್ಕೆ ಪಡೆದಿರುವ ಘಟನೆ ಹಾಸನ ಜಿಲ್ಲೆಯ ಗಡಿಭಾಗದ ಸಿದ್ದಾಪುರ ಗೇಟ್ ಬಳಿ ನಡೆದಿದೆ. 

ಹಾವೇರಿ ಮೂಲದ ಎನ್ನಲಾಗಿರುವ ಇವರುಗಳು ಕೂಲಿ ಕೆಲಸಕ್ಕೆಂದು ಮಡಿಕೇರಿಗೆ ಬಂದಿದ್ದರು  ಕರೋನವೈರಸ್ ಹಿನ್ನೆಲೆಯಲ್ಲಿ  ಗುತ್ತಿಗೆದಾರರು ಮೂವತ್ತಕ್ಕೂ ಅಧಿಕ ಕೂಲಿಕಾರ್ಮಿಕರ ಗಳನ್ನು ಲಾರಿಯಲ್ಲಿ ಬಚ್ಚಿಟ್ಟು ಮಡಿಕೇರಿಯಿಂದ ಹಾವೇರಿಗೆ ಕೊಣನೂರು ಹಾಸನ ಅರಸೀಕೆರೆ ಮಾರ್ಗವಾಗಿ ಕರೆಕರೆದು ಯತ್ನಿಸುತ್ತಿದ್ದರು. 

ಹಾಸನ ಮತ್ತು ಕೊಡಗು ಗಡಿ ಭಾಗವಾದ ಸಿದ್ದಾಪುರ ಗೇಟ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಅನುಮಾನಗೊಂಡ ಪೊಲೀಸರು ಲಾರಿ ತಪಾಸಣೆ ಮಾಡಿದಾಗ ಲಾರಿಯಲ್ಲಿ ಸುಮಾರು 30ಕ್ಕೂ ಅಧಿಕ ಮಂದಿ ಕೂಲಿಕಾರ್ಮಿಕರು ಇರುವುದು ಗೊತ್ತಾಗಿದೆ.  ಕೂಲಿ ಕಾರ್ಮಿಕರನ್ನು ಸಾಗಿಸುವ ವೇಳೆ ಲಾರಿಯ ಮೇಲ್ಭಾಗಕ್ಕೆ ಟಾರ್ಪಲ್ ಅನ್ನು ಹೊದಿಸಿ ಸಂಪೂರ್ಣವಾಗಿ ಮುಚ್ಚಲಾಗಿತ್ತು. 

ಲಾರಿ ಚಾಲಕ ಸಮೇತ ಲಾರಿಯನ್ನ ಹಾಗೂ ಕೂಲಿ ಕಾರ್ಮಿಕರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದು ಇನ್ನು ಈ ಪ್ರಕರಣ ಕೊಣನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Rate this item
(0 votes)

ಹಾಸನ: ಸುಖಾ ಸುಮ್ಮನೆ ನಮ್ಮೂರಿನ ಕಡೆ ಓಡುವುದು ಕಂಡು ಬಂದರೇ ಗ್ರಾಮದವರು ಕಲ್ಲು ತೂರಾಟ ಮಾಡ್ತಾರೆ ಎಚ್ಚರಿಕೆ ಅಂತ ನಾಮಫಲಕವನ್ನ ಹಾಕಿ ರಸ್ತೆ ಬಂದಿ ಮಾಡಿರೋ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಭಂಗಿ ತಿಮ್ಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಕೊರೋನಾ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರುಗಳು ಗ್ರಾಮದ ಪ್ರವೇಶದ ದ್ವಾರಕ್ಕೆ ಕಲ್ಲು ಮತ್ತು ಮರದ ದಿಮ್ಮಿಗಳನ್ನ ಹಾಕಿ ರಸ್ತೆ ಬಂದ್ ಮಾಡಿದ್ದು, ಹಲಗೆಯ ಮೇಲೆ ಗ್ರಾಮಕ್ಕೆ ಯಾವ ವಾಹನಗಳು ಬಾರದಂತೆ ನಿಷೇಧಾಜ್ಞೆ ಹೇರಿದ್ದಾರೆ. ಇನ್ನು ಇದನ್ನ ಮೀರಿ ಹೊರಗಿನಿಂದ ಬರುವಂತಹ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ. ಅಲ್ಲದೇ ಪೊಲೀಸರಿಗೆ, ಆರೋಗ್ಯ ಇಲಾಖೆಗೆ ಮಾಹಿತಿಯನ್ನ ನೀಡಿ ಅವರ ವಶಕ್ಕೆ ಒಪ್ಪಿಸಲಾಗುತ್ತದೆ. ಇದಕ್ಕೂ ಮೀರಿ ಆ ವ್ಯಕ್ತಿಗಳು ಗಲಾಟೆ ಮಾಡಿ ಗ್ರಾಮ ಪ್ರವೇಶ ಮಾಡಲು ಮುಂದಾದ್ರೆ, ಗ್ರಾಮಸ್ಥರು ಕಲ್ಲು ತೂರಾಟ ಮಾಡುತ್ತಾರೆ. ಇದ್ರಿಂದ ಯಾವುದೇ ಪ್ರಾಣಹಾನಿಯಾದ್ರೆ ಗ್ರಾಮಸ್ಥರುಗಳು ಹೊಣೆಗಾರರಲ್ಲ ಎಂಬ ಎಚ್ಚರಿಕೆಯನ್ನ ಕೂಡಾ ನೀಡಿದ್ದಾರೆ.

ಇನ್ನು ಕೊರೋನಾ ಪ್ರಕರಣದ ಹಿನ್ನಲೆಯಲ್ಲಿ ಏ.14ರ ತನಕ ಗ್ರಾಮಕ್ಕೆ ಬೇಕಾದ ಅಗತ್ಯ ವಸ್ತುಗಳನ್ನ ಕೊಂಡುಕೊಳ್ಳಲು ಮತ್ತು ಗ್ರಾಮದಲ್ಲಿ ಮಾರಾಟ ಮಾಡಲು ಬರುವವರಿಗೆ ಸಮಯ ನಿಗಧಿ ಮಾಡಿದ್ದು, ಗ್ರಾಮದ ಮುಖಂಡರುಗಳ ಅನುಮತಿಯ ಮೇರೆಗೆ ಅವಕಾಶ ನೀಡಲಾಗುತ್ತದೆ. ಹಾಗಾಗಿ ಗ್ರಾಮದೊಳಗೆ ಅತಿಕ್ರಮ ಪ್ರವೇಶ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ ಎಂದು ನಾಮಫಲಕದಲ್ಲಿ ಬರೆದು ಎಚ್ಚರಿಕೆ ನೀಡಿದ್ದಾರೆ.

Rate this item
(0 votes)

Hassan: ಜನತಾ ಕರ್ಪ್ಯೂ ಇಂದ ಹಿಡಿದು ಭಾರತ್ ಲಾಕ್ ಪ್ರಾರಂಭವಾಗಿ ಇಂದಿಗೆ 6ನೇ ದಿನ. ದೇಶದಲ್ಲಷ್ಟೇ ಅಲ್ಲ ರಾಜ್ಯದಲ್ಲಿಯೂ ಕೂಡ ಜನಸಂದಣಿಯ ಕಡಿಮೆಯಾಗಿದೆ. ಇದಕ್ಕೆ ಅರಕಲಗೂಡು ಕೂಡ ಹೊರತಾಗಿಲ್ಲ, ಪ್ರತಿಯೊಬ್ಬರೂ ಅನ್ನಕ್ಕಾಗಿ ಹಾಹಾಕಾರ ಪಡುತ್ತಿದ್ದಾರೆ.

ಹೊರಗೆ ಬಾರದಂತೆ ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಹಸಿವಿನಿಂದ ಬೀದಿಬದಿಯ ಬಿಕ್ಷುಕರುಗಳು ಹೈರಾಣಾಗಿದ್ದಾರೆ, ಅಂತಹ ಹಸಿದ ಹೊಟ್ಟೆಗೆ ಮಧ್ಯಮಾರಾಟ ಸಂಘದವರು ಅನ್ನದಾತರಾಗಿದ್ದರೆ, ಅವರು ಮಾಡಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..

ವಿಶ್ವವನ್ನೆ ಕಾಡುತ್ತಿರುವ ಮಹಾಮಾರಿ ಕೋರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಈಗಾಗಲೇ ಮೂರು ಸಾವು ಸಂಭವಿಸಿದ್ದು, ಇದು ಕಾರಣದಿಂದಲೇ ಎಂಬುದು ದೃಢಪಟ್ಟಿದೆ. ಹೀಗಾಗಿ ಮನೆಯಲ್ಲೇ ಇದ್ದು ಮಹಾಮಾರಿ ಕೊರೋನಾ ಓಡಿಸಿ ಅಂತ ಕರೆಕೊಟ್ಟಿದ್ದು, ಇಡೀ ಭಾರತವೇ ಸಾಕಾಗಿ ಹೋಗಿದೆ ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರತಿನಿತ್ಯ ಭಿಕ್ಷೆ ಬೇಡುವ ಮಂದಿ ಆಹಾರಕ್ಕಾಗಿ ಅಂಗಲಾಚುತ್ತಿದ್ದಾರೆ.ಇಂತಹ ದೃಶ್ಯಗಳನ್ನು ಕಂಡ ಅರಕಲಗೂಡು ಮಧ್ಯಮಾರಾಟ ಸಂಘದವರು ಹಸಿದವರಿಗೆ ಆಹಾರದ ಪೊಟ್ಟಣಗಳನ್ನು ನೀಡಿ ಮಾನವೀಯತೆ ಮರೆಯುತ್ತಿದ್ದಾರೆ, ಬೀದಿ ಬದಿ ಮಲಗಿರುವವರಿಗೆ, ಹಕ್ಕಿಪಿಕ್ಕಿ ಜನಾಂಗದವರಿಗೆ ಹಲವಾರು ಕಡೆ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿರುವ ನೂರಾರು ಮಂದಿಗೆ ಆಹಾರದ ಪೊಟ್ಟಣ, ನೀರಿನ ಬಾಟಲ್ ಮೊಟ್ಟೆ ಅನ್ನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಹಾಮಾರಿ ಕೋರೋನಾ ಪ್ರಕರಣ ಇಡೀ ದೇಶವನ್ನೇ ಸ್ತಬ್ದವಾಗಿಸಿದೆ. ಆರ್ಥಿಕ ಸ್ಥಿತಿಗತಿ ವ್ಯಾಪಾರ-ವಹಿವಾಟು ಸ್ತಬ್ದಗೊಂಡಿದೆ. ಪ್ರತಿನಿತ್ಯ ಆಹಾರ ಸಾಮಗ್ರಿಗಳನ್ನು ದಿನಬಳಕೆ ಪದಾರ್ಥಗಳನ್ನ ಕೊಳ್ಳಲು ಕೂಡ ಜನರು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಕಾರ್ಮಿಕರಿಂದ ಹಿಡಿದು ಭಿಕ್ಷುಕರ ತನಕ ಹಸಿವಿಗಾಗಿ ಪಡುತ್ತಿರುವ ಹಾಹಾಕಾರ ಹೇಳತೀರದಾಗಿದೆ. ಇಂತಹ ಪರಿಸ್ಥಿತಿಯನ್ನು ಮನಗಂಡು ನೀಡುತ್ತಿರುವ ಸಂಘದವರ ಬದುಕು ಬಂಗಾರವಾಗಲಿ ಎಂಬುದೇ ನಮ್ಮ ಆಶಯ

Last modified on Sunday, 29 March 2020 19:20
Rate this item
(0 votes)

ಬೆಂಗಳೂರು: ಕೊರೊನಾ ಪ್ರಕರಣದ ಹಿನ್ನಲೆಯಲ್ಲಿ ಜನತೆಗೆ ಇಎಂಐನಿಂದ ತಾತ್ಕಾಲಿಕ ರಿಲೀಫ್ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ ಸ್ವಾಗತರ್ಹ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗಿರುವ ಬಡವರು, ಮಧ್ಯಮ ವರ್ಗದವರು, ಕೂಲಿಕಾರರು, ಕಾರ್ಮಿಕರ ನೆರವಿಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಂಕುಗಳಿಗೆ ಕಟ್ಟಬೇಕಿರುವ ಇಎಂಐಗೆ ಮೂರು ತಿಂಗಳ ಕಾಲಾವಕಾಶ ನೀಡಿರುವ ರಿಸರ್ವ್ ಬ್ಯಾಂಕಿನ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ.

ಈ ಜನಪರ ಕ್ರಮ ಕೈಗೊಂಡಿದ್ದಕ್ಕಾಗಿ ರಿಸರ್ವ್ ಬ್ಯಾಂಕಿನ ಗವರ್ನರ್, ಪ್ರಧಾನಮಂತ್ರಿಗಳಿಗೆ ಮತ್ತು ಕೇಂದ್ರದ ಆರ್ಥಿಕ ಮಂತ್ರಿಯವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

Rate this item
(0 votes)

ಬೆಂಗಳೂರು : ಕೋವಿಡ್ -19 ಪ್ರಕರಣದ ಹಿನ್ನಲೆಯಲ್ಲಿ ಬೆಂಗಳೂರು ಬೀಕೋ ಎನ್ನುತ್ತಿದ್ದು. ನಗರವೇ ಮೌನ ಹೊದ್ದು ಮಲಗಿದೆ. 

ದೇಶದ ಪ್ರಧಾನಿ ಕರೆಗೆ ಸಿಲಿಕಾನ್​ ಸಿಟಿ ಜನರಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು,  ನಗರದ ಎಲ್ಲಾ ರಸ್ತೆಗಳು, ಶಾಪ್​ಗಳು, ಕಚೇರಿಗಳು, ಸರ್ಕಾರಿ ಇಲಾಖೆಗಳು, ಹೋಟೆಲ್​, ಶಾಪಿಂಗ್​ ಮಾಲ್​ಗಳು ಸೇರಿದಂತೆ ಎಲ್ಲವೂ ಸ್ತಬ್ಧವಾಗಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಸದಾ ಜನರಿಂದ ಕಂಗೊಳಿಸುತ್ತಿದ್ದ ಲಾಲ್​ಬಾಗ್​ ಕೂಡ ಖಾಲಿ ಖಾಲಿಯಾಗಿದೆ. 

ಜನರಿಲ್ಲದೆ ಸಂಪೂರ್ಣ ನೀರಸವಾದ ಮಹಾತ್ಮ ಗಾಂಧಿ ರಸ್ತೆ , ಜನಸಂದಣಿಯಿಂದ ತುಂಬಿರುತ್ತಿದ್ದ ಲಾಲ್​ಬಾಗ್​ ರಸ್ತೆ ಕೂಡ ಸೈಲೆಂಟಾಗಿದೆ.ಪ್ರಯಾಣಿಕರಿಲ್ಲದ ಕಾರಣ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್​ ಸಂಚಾರವೂ ಇಲ್ಲ. ರಸ್ತೆಗಳೆಲ್ಲ ಖಾಲಿ ಖಾಲಿಯಾಗಿವೆ.

Saturday, 28 March 2020 00:00
Rate this item
(0 votes)

ದಕ್ಷಿಣ ಕನ್ನಡ:  ಜಿಲ್ಲೆಯ 6ನೇ ಪ್ರಕರಣವಾದ ಗ್ರಾಮದ 10 ತಿಂಗಳ ಮಗುವಿಕೆ ಕೋವಿಡ್​​​-19 ಇರುವುದು ದೃಢಪಟ್ಟ ಹಿನ್ನೆಲೆ ಸದ್ಯ ಈಡೀ ಗ್ರಾಮವನ್ನೇ ಕ್ವಾರಂಟೈನ್​ ಮಾಡಬೇಕಾದ ಪ್ರಸಂಗ ಎದುರಾಗಿದೆ. ಅದಕ್ಕಾಗಿ ಸದ್ಯ ಯಾವುದೇ ವ್ಯಕ್ತಿಗಳು ಗ್ರಾಮದಿಂದ ಹೊರಗೆ ಹಾಗೂ ಗ್ರಾಮದ ಒಳಗೆ ಪ್ರವೇಶಿಸುವಂತಿಲ್ಲ. ಇದನ್ನು ನಿಭಾಯಿಸಲು ಸ್ಥಳೀಯಾಡಳಿತ ಸಕಲ ಕ್ರಮಗಳನ್ನು ಕೈಗೊಂಡಿದೆ. 

ಈಗಾಗಲೇ ಸಜೀಪನಡು ಗ್ರಾಮದ ಮೂಲಕ ಹಾದು ಹೋಗುವ ಎಲ್ಲಾ ವಾಹನಗಳನ್ನು ನಿರ್ಬಂಧಿಸಲಾಗಿದೆ. ಬಂಟ್ವಾಳ ತಾಲೂಕಿನ ಮೇಲ್ಕಾರ್ ಮೂಲಕ ಕೊಣಾಜೆಗೆ ತೆರಳುವ ಮುಖ್ಯ ದಾರಿ ಇದಾಗಿದ್ದು, ಪ್ರತಿಯೊಂದು ಮನೆಗಳ ಆರೋಗ್ಯ ಸುರಕ್ಷತೆಯ ನಿಗಾವನ್ನು ಸ್ಥಳೀಯ ಆಶಾ ಕಾರ್ಯಕರ್ತೆಯರ ನೆರವಿನಿಂದ ಬಂಟ್ವಾಳ ಆರೋಗ್ಯ ಇಲಾಖೆ ಇರಿಸಲಿದೆ. 

ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಯು.ಟಿ.ಖಾದರ್ ತುರ್ತು ಸಭೆಯೊಂದನ್ನು ಸಜೀಪನಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆಸಿದರು. ಕೊರೊನಾ ಸೋಂಕು ಸಜೀಪನಡು ಗ್ರಾಮದ ಮಗುವಿಗೆ ತಗುಲಿದ ಹಿನ್ನೆಲೆಯಲ್ಲಿ ಆಸುಪಾಸಿನ ಗ್ರಾಮಗಳಲ್ಲೂ ಕಟ್ಟೆಚ್ಚರ ವಿಧಿಸಲಾಗಿದ್ದು, ಗ್ರಾಮದಿಂದ ತುಂಬೆ ಡ್ಯಾಂ ಪ್ರವೇಶಿಸುವ ಜಾಗದಲ್ಲಿ ತಡೆ ಗೇಟನ್ನು ಶುಕ್ರವಾರ ರಾತ್ರಿ ಹಾಕಲಾಯಿತು. 

ಈಗಾಗಲೇ ಸಜೀಪನಡು ಗ್ರಾಮದ ಎಲ್ಲಾ ಸಂಪರ್ಕಗಳನ್ನು ಬಂದ್ ಮಾಡಲಾಗಿದ್ದು, ಆಸುಪಾಸಿನ ಗ್ರಾಮಗಳಲ್ಲೂ ಜಾಗ್ರತಿ ಮೂಡಿಸಲಾಗುತ್ತಿದೆ.

ನವದೆಹಲಿ: ಹೆಮ್ಮಾರಿ ಕೊರೊನಾ ವಿಶ್ವದಾದ್ಯಂತ ರೌದ್ರನರ್ತನ ತೋರುತ್ತಿದ್ದು, ಜನರು ಅದರಿಂದ ಹೊರಬರಲು ಹರಸಾಹಸ ನಡೆಸುತ್ತಿದ್ದಾರೆ. ಹೀಗಾಗಿ ಕೆಲವೊಂದು ದೇಶಗಳು ಸಂಪೂರ್ಣವಾಗಿ ಲಾಕ್​ಡೌನ್​ ಆಗಿವೆ. ಈ ವೇಳೆ ಜನರು ಬಳಕೆ ಮಾಡುವ ಮಾಸ್ಕ್​, ಸ್ಯಾನಿಟೈಸರ್​ ಕೊರತೆ ನೀಗಿಸುವುದರ ಮಧ್ಯೆ ಕಾಂಡೋಮ್​ ಗೂ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಬಂದಿದೆ. 

ಭಾರತ, ಇಂಗ್ಲೆಂಡ್​,ಫ್ರಾನ್ಸ್​,ಇಟಲಿ, ಇರಾನ್​ ಸೇರಿದಂತೆ ಅನೇಕ ದೇಶಗಳಲ್ಲಿ ಲಾಕ್​ಡೌನ್​ ಆದೇಶ ಜಾರಿಯಲ್ಲಿರುವುದು ಹಾಗೂ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವ ಕಾರಣ ಕಾಂಡೋಮ್​ಗಳಿಗೆ ಇನ್ನಿಲ್ಲದ ಬೇಡಿಕೆ ಉಂಟಾಗಿದ್ದು, ಮಾರುಕಟ್ಟೆಗಳಲ್ಲಿ ಮಾರಾಟ ಹೆಚ್ಚಾಗಿರುವ ಕಾರಣ ಅವುಗಳ ಕೊರತೆ ಉಂಟಾಗಿದೆ. 

ಜಾಗತಿಕವಾಗಿ 100 ಮಿಲಿಯನ್​​ ಕಾಂಡೋಮ್​ಗಳ ಕೊರತೆ ಉಂಟಾಗಿದ್ದು, ಕಳೆದ 10 ದಿನಗಳಿಂದ ಈ ಸಮಸ್ಯೆ ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.ಕೆಲಸದ ಒತ್ತಡ, ಮನೆಯಲ್ಲಿ ಹೆಚ್ಚಿನ ಸಮಯ ಕಳೆಯಲು ಅಸಾಧ್ಯವಾಗದಂತಹ ಸ್ಥಿತಿ ಈ ಹಿಂದಿನ ಸಮಯದಲ್ಲಿ ನಿರ್ಮಾಣಗೊಂಡಿತ್ತು. ಆದರೆ ಇದೀಗ ಸಂಗಾತಿಗಳು, ಪತ್ನಿ ಜತೆ ಹೆಚ್ಚು ಹೆಚ್ಚು ಸಮಯ ಕಳೆಯುತ್ತಿರುವ ಕಾರಣ ಸೇರುವಿಕೆ ಹೆಚ್ಚಾಗಿದೆ. 

ಇನ್ನು ಕಾಂಡೋಮ್​ ಉತ್ಪಾದನೆ ಮಾಡುವ ಕೆಲವೊಂದು ಕಾರ್ಖಾನೆಗಳು ಬಂದ್​ ಆಗಿರುವ ಕಾರಣ ಮಾರುಕಟ್ಟೆಯಲ್ಲಿ ಇವುಗಳ ಕೊರತೆ ಎದು ಕಾಣುತ್ತಿದೆ.ಮಹಾಮಾರಿ ಕೊರೊನಾದಿಂದಾಗಿ ದೇಶದಲ್ಲಿನ ಜಿಮ್​, ಪಾರ್ಕ್​, ಸಿನಿಮಾ ಚಿತ್ರಮಂದಿರ ಸೇರಿದಂತೆ ಎಲ್ಲವೂ ಬಂದ್ ಆಗಿವೆ.ಅನೇಕ ಕಾರ್ಪೋರೇಟ್​ ಕಂಪನಿ, ಸರ್ಕಾರಿ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. 

ಹೀಗಾಗಿ ಜನರು ಆಹಾರ, ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದರ ಜೊತೆಗೆ ಕಾಂಡೋಮ್ ಖರೀದಿ ಮಾಡಲು ಮುಗಿಬಿದ್ದಿದ್ದು, ಕಳೆದ ಒಂದು ವಾರದಲ್ಲಿ ಕಾಂಡೋಮ್ ಮಾರಾಟವು ಶೇ.25 ರಿಂದ ಶೇ.50 ರಷ್ಟು ಏರಿಕೆಯಾಗಿದೆ.

Rate this item
(0 votes)

ಹಾಸನ/ಶ್ರವಣಬೆಳಗೊಳ: ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕಾರೊಂದು ನಾಲೆಗೆ ಬಿದ್ದು, ಚಾಲಕ ಸೇರಿದಂತೆ ಮತ್ತೊಂಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪ ನಡೆದಿದೆ. 

ಶ್ರವಣಬೆಳಗೊಳ ಸಮೀಪದ ಎನ್.ಜಿ.ಕೊಪ್ಪಲು ಗ್ರಾಮದ ಸುದರ್ಶನ್ (29), ಮಂಡ್ಯ ಜಿಲ್ಲೆಯ ಕಿಕ್ಕೇರಿ ಸಮೀಪದ ದೇವರಹಳ್ಳಿ ಕುಮಾರ್ (3) ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಗುರಿಗಾರನಹಳ್ಳಿ-ಆಲದಹಳ್ಳಿ ಮಧ್ಯೆಯಿರುವ ಹೇಮಾವತಿ ನಾಲೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳಿ ಬಿದ್ದಿದ್ದು, ನೀರಿಲ್ಲದಿದ್ದರಿಂದ ಕಾರು ನುಜ್ಜು ಗುಜ್ಜಾಗಿದೆ. 

ಶ್ರವಣಬೆಳಗೊಳ ಮಾರ್ಗವಾಗಿ ಕಿಕ್ಕೇರಿ ಕಡೆಗೆ ಹೊರಟಿದ್ದರು. ಅತೀವೇಗ ಮತ್ತು ಚಾಲಕನ ನಿರ್ಲಕ್ಷ್ಯದಿಂದ ಕಾರು ನಿಯಂತ್ರಣ ತಪ್ಪಿದೆ ಎನ್ನುವುದು ಸ್ಥಳಿಯರ ಮಾತು. ಇನ್ನು ಸ್ಥಳಕ್ಕೆ ತುರ್ತು ವಾಹನ ಆಗಮಿಸಿದ್ದು, ಸ್ಥಳೀಯರ ಸಹಾಯದಿಂದ ಶ್ರವಣಬೆಳಗೊಳ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಿದ್ದು, ಪೊಲೀಸ್ರು ಸ್ಥಳ ಪರಿಶೀಲನೆ ಮಾಡುತ್ತಿದ್ದು, ಶ್ರವಣಬೆಳಗೊಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  

ವರದಿ: ಗೀತಾ ಪ್ರದೀಪ್, ಶ್ರವಣಬೆಳಗೊಳ.

Last modified on Wednesday, 18 March 2020 20:53
Tuesday, 17 March 2020 00:00
Rate this item
(1 Vote)

ಹುಬ್ಬಳಿ: ಕೆಲವು ವಾಹಿನಿಗಳ ವರದಿ ನೋಡುತ್ತಿದ್ದೆ. ನಮ್ಮ ಕೆಲವು ಪತ್ರಕರ್ತರಿಗೆ ಗೊತ್ತಿಲ್ಲ ಪಾಟೀಲ್ ಪುಟ್ಟಪ್ಪ ಕೇವಲ ಒಬ್ಬ ಪತ್ರಕರ್ತ ಒಬ್ಬ ಸಾಹಿತಿ ಮಾತ್ರವಲ್ಲ. ಕರ್ನಾಟಕ ಪತ್ರಿಕಾ ರಂಗದ ಭೀಷ್ಮ. ಕರ್ನಾಟಕ ಏಕೀಕರಣ ಚಳುವಳಿಯ ಸೂತ್ರಧಾರ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕೆ ಆಗ್ರಹಿಸಿ ನಡೆದ ಗೋಕಾಕ್ ಚಳುವಳಿಯ ಹರಿಕಾರ. ಇನ್ ಫ್ಯಾಕ್ಟ್ ಗೋಕಾಕ್ ಚಳುವಳಿಗೆ ಡಾ. ರಾಜ್ ಕುಮಾರ್ ಅವರನ್ನು ಕರೆತಂದಿದ್ದೇ ಪಾಪು. ಮಹದಾಯಿ ಕಳಸಾ ಬಂಡೂರಿ ಹೋರಾಟ ಶುರು ಮಾಡಿದವರು ಪಾಪು.

ಮಧ್ಯಪಾನ ನಿರೋಧ ಆಗ್ರಹಿಸಿ ಧರಣಿ ಹೂಡಿದವರು ಪಾಪು. ರೈಲ್ವೇ ಹೋರಾಟ, ಸಾರಿಗೆ ಹೋರಾಟ ಇತ್ಯಾದಿಗಳನ್ನು ಸಂಘಟಿಸಿದವರು ಪಾಪು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗ್ತಿದೆ ಎಂದಾಗ ಪಾಪು ಇದ್ದಾರಲ್ಲ ಅನ್ನೋದು ಆ ಭಾಗದ ಮಂದಿಗೆ ದೊಡ್ಡ ಸಮಾಧಾನ ಆಗಿತ್ತು. ಎರಡು ಬಾರಿ ರಾಜ್ಯ ಸಭಾ ಸದಸ್ಯರಾಗಿದ್ದ ಪಾಟೀಲ್ ಪುಟ್ಟಪ್ಪನವರು ಯಾರೇ ಮುಖ್ಯಮಂತ್ರಿಯಾಗಿದ್ದರೂ ನೇರವಾಗಿ ಸರ್ಕಾರವನ್ನು ಗದರುವ ಗಟ್ಟಿಮುಟ್ಟಿನ ನೇರ ಧ್ವನಿಯಾಗಿದ್ದವರು. ನಾಡು ನುಡಿ ನೆಲ ಜಲದ ವಿಚಾರ ಬಂದರೆ ಪಾಪುರದ್ದು ಸಿಂಹ ಘರ್ಜನೆ. 

'ತಮ್ಮಾ ಇದು ಗಾಂಧಿ ತಟ್ಟಿದ ಬೆನ್ನು' ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದ ಹಿರಿಯ ಗಾಂಧಿವಾದಿ ಅವರು. ಚಲೇಜಾವ್ ಚಳುವಳಿಯಲ್ಲಿ ಸ್ವತಂತ್ರ್ಯ ಹೋರಾಟ ಭೂಮಿಕೆಯಲ್ಲಿ ನೇರವಾಗಿ ಪಾಲ್ಗೊಂಡವರು ಅವರು. ಅವರು ಬರೆದಿದ್ದು 50 ಚಿಲ್ರೆ ಕೃತಿಗಳಾಗಿದ್ದರೂ ಆ ಎಲ್ಲಾ ಕೃತಿಗಳೂ ಗಟ್ಟಿಯೇ. ಜೊಳ್ಳು ಅವರ ರಕ್ತದಲ್ಲೇ ಇರಲಿಲ್ಲ. 70 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾಗ ಸಾಹಿತ್ಯ ಸಮ್ಮೇಳನದ ಬಹಿರಂಗ ವೇದಿಕೆಯಲ್ಲೇ ಉತ್ತರ ಕರ್ನಾಟಕಕ್ಕೆ ಸಮಾನತೆ ಒದಗಿಸಿಕೊಡಿ ಎಂದು ಆಗ್ರಹಿಸಿದವರು ಪಾಪು. ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂದು ಪಟ್ಟು ಹಿಡಿದ ಹಠವಾದಿ ಅವರು. ಧಾರವಾಡದ ವಿದ್ಯಾವರ್ಧಕ ಸಂಘಕ್ಕೆ 1967ರಿಂದ ಸುದೀರ್ಘ 50 ವರ್ಷ ಅವರು ಅಧ್ಯಕ್ಷರಾಗಿದ್ದು ದಾಖಲೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರೂ ಆಗಿದ್ದವರು ಪಾಪು. 

ಪಾಪು ಅಂದ್ರೆ ಪ್ರಪಂಚ, ನವಯುಗ ಮತ್ತು ವಿಶ್ವವಾಣಿ ಮಾತ್ರವಲ್ಲ. ಅದೆಲ್ಲದರ ಆಚೆಗೆ ಅವರು ಕನ್ನಡದ ಸಾಕ್ಷಿ ಪ್ರಜ್ಞೆಯಾಗಿದ್ದವರು. ಇಷ್ಟು ಮಾತ್ರ ಮಾಹಿತಿ ಇಲ್ಲದಿದ್ದರೆ ಪತ್ರಿಕೋದ್ಯಮದಲ್ಲಿದ್ದು ಪ್ರಯೋಜನವೇನು?

ಒಂದು ಸುದೀರ್ಘ ಅಧ್ಯಾಯ ಮುಕ್ತಾಯಗೊಂಡಿದೆ. ಪಾಪು ಯುಗಾಂತ್ಯ! ಅವರಿಗೊಂದು ಪದ್ಮಶ್ರೀಯೋ ಕರ್ನಾಟಕ ರತ್ನವೋ ಕೊಡಬಹುದಿತ್ತು, ಕೊಡಬೇಕಿತ್ತು. ಕರೋನಾ ವರಾತ ಇಲ್ಲದಿದ್ದರೇ ಸರ್ಕಾರ ಮೂರು ದಿನಗಳ ಶೋಕಾಚರಣೆ ಒಂದು ದಿನ ರಜೆ ಕೊಡಿಸಬಹುದಾಗಿದ್ದ ಸಾಧನೆ ಅವರದ್ದು. ನಿಮ್ಮಾತ್ಮಕ್ಕೆ ಚಿರಶಾಂತಿ ಸಿಗಲಿ ಪಾಪು. ನಿಮ್ಮ ಚಳುವಳಿಗಳ ನೆರಳಲ್ಲಿ ನಿಮ್ಮ ವಿಚಾರಧಾರೆಯನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಸರ್ವಶಕ್ತ ಪ್ರಕೃತಿ ಸ್ವರೂಪಿಣಿ ಜಗನ್ಮಾತೆ ಸದ್ಗತಿ ನೀಡಲಿ. ಓಂ ಶಾಂತಿ. 

 

- ವಿಭಾ. 

Rate this item
(0 votes)

ಹಾಸನ/ಅರಸೀಕೆರೆ: ನಾಡಿನ ಪ್ರೇಕ್ಷಕರ ಮನಸ್ಥಿತಿಯನ್ನು ಅರ್ಥೈಸಿಕೊಂಡು ಮುನ್ನೆಡೆಯುತ್ತಿರುವ ಜೀ ಕನ್ನಡ ವಾಹಿನಿ , ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ನಂಬರ್ ಒನ್ ಸ್ಥಾನ ಗಳಿಸಿ ಮುನ್ನೆಡೆದಿದೆ. 

ಹಲವು ವಿಶೇಷತೆಗಳ ಆಗರ ಹೊಂದಿರುವ ಕಾಮಿಡಿ ಕಿಲಾಡಿಗಳು ಸೀಸನ್ - 3 ಗ್ರಾಂಡ್ ಫಿನಾಲೆ ಇದೇ ತಿಂಗಳ 23 ರಂದು ಭಾನುವಾರ ಸಂಜೆ 5  ಕ್ಕೆ ಹಾಸನ ಜಿಲ್ಲೆಯ ಅರಸೀಕೆರೆಯ ಜೇನುಕಲ್ ಸಿದ್ದೇಶ್ವರ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಸೀಸನ್ ವಿಜೇತರು ಯಾರು ಎನ್ನುವುದು ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ. ಈ ಸೀಸನ್ ಈ ಹಿಂದಿನ ಎರಡು ಸೀಸನ್ ಗಿಂತ ಹೆಚ್ಚು ಜನಪ್ರಿಯತೆ ಪಡೆದಿದೆ . ಜೊತೆಗೆ ಮನರಂಜನೆಯ ಮಹಾಪೂರವನ್ನೇ ಉಣ ಬಡಿಸಿ ಹಾಸ್ಯಕ್ಕೊಂದು ಉತ್ತಮ ವೇದಿಕೆ ಕಲ್ಪಿಸುವ ಜೊತೆಗೆ ದಣಿದ ಮನಸ್ಸುಗಳಿಗೆ ಸಾಂತ್ವನದ ಸಂಜೀವಿನಿಯಂತೆ ವರದಾನವಾಗಿದೆ. 

ಕನ್ನಡ ಚಿತ್ರರಂದಲ್ಲಿ ಹಾಸ್ಯ ಕಲಾವಿದರ ಕೊರತೆ ಎದ್ದು ಕಾಣುತ್ತಿದೆ ಎನ್ನುವ ಕೊರಗಿಗೆ ಕಡಿವಾಣ ಹಾಕುವಂತೆ ಕಳೆದ ಮೂರು ಸೀಸನ್ ಗಳಿಂದ ಹತ್ತಾರು ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಗೆ ಜೀ ಕನ್ನಡ ವಾಹಿಯದ್ದು. ವಾರಾಂತ್ಯ ಬಂದರೆ ಕಾಮಿಡಿ ಕಿಲಾಡಿಗಳು ನೋಡದೆ ವಾರಕ್ಕೆ ಮುಕ್ತಾಯವಿಲ್ಲ ಎನ್ನುವ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳಿಗೂ ಸಾಕ್ಷಿಯಾಗಿದೆ. ಹಾಸ್ಯವಲ್ಲದೆ ಸಾಮಾಜಿಕ ಸಂದೇಶಗಳು ಹಾಗು ಪ್ರಯೋಗಾತ್ಮಕ ನಾಟಕಗಳು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. 

15 ಸ್ಪರ್ಧಿಗಳು, 25 ವಾರಗಳು,ನೂರಾರು ಗೆಟಪ್ ಗಳು,180ಕ್ಕೂ ಹೆಚ್ಚು ನಾಟಕಗಳ‌ ಮೂಲಕ ನಾಡನ್ನು ನಗೆಗಡಲ್ಲಿ ತೇಲಿಸಿದ ಸೀಸನ್ ಎನ್ನುವ ಹೆಗ್ಗಲಿಕೆಗೆ ಕಾಮಿಡಿ ಕಿಲಾಡಿಗಳು ಸೀಸನ್ - 3 ಪಾತ್ರವಾಗಿದೆ. ಈ ಸೀಸನ್ ನ ವಿಜೇತರು ಯಾರಾಗಲಿದ್ದಾರೆ ಎನ್ನುವ ಕುತೂಹಲದ ನಡುವೆ 23 ರಂದು ಫಿನಾಲೆ ನಡೆಯಲಿದೆ. ಫಿನಾಲೆಯಲ್ಲಿ ತೀರ್ಪುಗಾರರಾದ ನವರಸ ನಾಯಕ ಜಗ್ಗೇಶ್, ಯೋಗರಾಜ್ ಭಟ್, ರಕ್ಷಿತಾ ಭಾಗಿಯಾಗಲಿದ್ದಾರೆ. ಮಾತಿನ ‌ಮೂಲಕ ನಗೆ ಚಟಾಕಿ ಹಾರಿಸುವ ಮಾಸ್ಟರ್ ಆನಂದ್ ನಿರೂಪಣೆ ಇರಲಿದೆ.

  • Pavan Kumar, Kondinews, Bangaluru.
Last modified on Tuesday, 17 March 2020 02:12
Page 1 of 19

Media News

  • Latest
  • Most popular
  • Trending
  • Most commented
Post by Kondi News
- Mar 29, 2020
ಹಾಸನ: ಆಹಾರದ ಚೀಲಗಳನ್ನು ಸಾಗಿಸುತ್ತಿದ್ದೇವೆ ಎಂದು ಕೂಲಿ ...
Post by Kondi News
- Dec 20, 2019
ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ...
Post by Kondi News
- Nov 01, 2019
ಹಾಸನ: ಪೈಪ್ಲೈನ್ ಅಳವಡಿಕೆ ಕಾಮಗಾರಿ ಸಂಧರ್ಭದಲ್ಲಿ ಮಣ್ಣು ...
Has no content to show!

About Us

ಕನ್ನಡ ಪತ್ರಿಕೋದ್ಯಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಿಂದೆ ಗೋಡೆ ಬರಹದ ಮೇಲೆ, ಕೈ ಬರಹದ ಮೂಲಕ, ನಂತರ ಅಚ್ಚುಮೊಳೆ ಜೋಡಿಸಿ ಪತ್ರಿಕೆ ಮುದ್ರಣ ಮಾಡುತ್ತಿದ್ದ ಕಾಲ ಸರಿದು, ಗಣಕೀಕೃತ ಪತ್ರಿಕೆ ದಶಕಗಳ ಕಾಲ ಆಕ್ರಮಣ ಮಾಡಿಕೊಂಡಿತ್ತು. ತಂತ್ರಜ್ಞಾನ ಬದಲಾವಣೆಯಾದಂತೆ ಮಾಧ್ಯಮಗಳು ಬದಲಾವಣೆಯಾಗುತ್ತಾ ಮುದ್ರಣ ಮಾಧ್ಯಮವನ್ನ ಹಿಂದಿಕ್ಕೂವ ಭರದಲ್ಲಿ ದೃಶ್ಯ ಮಾಧ್ಯಮ ಕಾಲಿಟ್ಟರೂ ಅದಕ್ಕೂ ಮೀರಿದ ತಂತ್ರಜ್ಞಾನ ಬದಲಾಗಿ ಮುದ್ರಣ ಮಾಧ್ಯಮ ಮತ್ತು ದೃಶ್ಯಮಾಧ್ಯಮಗಳನ್ನ ಸರಿಸುತ್ತ ಮತ್ತೊಂದು ಮಾಧ್ಯಮ ಸಾಗಿದೆ. ಮಾಧ್ಯಮದ ತಂತ್ರಜ್ಞಾನ ಬದಲಾದಂತೆ, ಅದೇ ರೀತಿ ಜನರ ಸುದ್ದಿ ಓದುವ ವಿಧಾನವೂ ಕೂಡ ಬದಲಾಗಿದೆ. ಇಂದು ಲಕ್ಷಾಂತರ ಜನ ತಮ್ಮ ಅಂಗೈಯಲ್ಲೇ ಸುದ್ದಿ ಓದುತ್ತಿದ್ದಾರೆ. ಹಾಗಂತ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿದೆ ಎಂದಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಾರಣ ಬದಲಾವಣೆ ಜಗದ ನಿಯಮ. ಇದಕ್ಕೆ ಸಾಕ್ಷಿಯೆಂಬಂತೆ ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಕೊಂಡಿನ್ಯೂಸ್ 6 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೊರೆಗೊಂಡಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. 5ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ "ಹಾಸನಾಂಬ ವಿಶೇಷಾಂಕ" ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನ ಹೊರತಂದು ಮೆಚ್ಚುಗೆಗೆ ಪಾತ್ರವಾಗಿದ್ದನ್ನ ತಮಗೆ ಹೇಳಬೇಕಿಲ್ಲ ಎಂದುಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ಜನರ ಅಭಿಲಾಷೆಯಂತೆ ಕೊಂಡಿ ನ್ಯೂಸ್ ಹಾಸನ ಮಾತ್ರವಲ್ಲದೇ ಇಂದಿನಿಂದ ತುಮಕೂರು, ಬೆಂಗಳೂರು ಚಾಮರಾಜನಗರ, ಕೋಲಾರ, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಅಂತರ್ಜಾಲ ವಾಹಿನಿಯಾಗಿ ಹೊರಹೊಮ್ಮುತ್ತಿದೆ. ವಿವಿಧ ಜಿಲ್ಲೆಗಳ ಪತ್ರಕರ್ತರೇ ಕಟ್ಟಿರುವ ಸುದ್ದಿ ವಾಹಿನಿಯು ತಮಗೆ ಖಂಡಿತ ಸನಿಹವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನಿಮ್ಮ ನಂಬಿಕೆಯನ್ನ ನಾವು ಉಳಿಸಿಕೊಂಡು ತಮ್ಮ ಅಭಿರುಚಿಗೆ ತಕ್ಕ ಸುದ್ದಿಗಳನ್ನ ಕೊಡುವಲ್ಲಿ ಖಂಡಿತ ಸಫಲತೆ ಕಾಣುತ್ತೇವೆ. ತಮ್ಮ ಬೆಂಬಲ, ಸಹಕಾರ ಸದಾ ಹೀಗೆ ಇರಲಿ....ಎಂಬ ಆಶಯ ನಮ್ಮದು.   www.kondinews.com 

  • ಸಂಪಾದಕ, ಕೊಂಡಿನ್ಯೂಸ್. 

Newsletter

Subscribe with us your email
Top