ಹಾಸನ: ಅಂತೂ ಇಂತು ಕೊನೆಗೂ ಸಚಿವ ಸಂಪುಟ ರಚನೆಯಾಯ್ತು. ಕಳೆದ ಮೂರು ವಾರಗಳಿಂದ ಕಗ್ಗಂಟಾಗಿಯೇ ಉಳಿದಿದ್ದ ಸಚಿವ ಸಂಪುಟದಲ್ಲಿ ಇಂದು 17 ಮಂದಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿದ್ದು, ಮೊದಲ ಸವಾಲನ್ನ ಯಾವುದೇ ತಂಟೆ ತಕರಾರಿಲ್ಲದೇ ಮುಗಿಸಿದ್ದಾರೆ.
ಹಾಸನ ಮೊದಲಿನಿಂದಲೂ ಜೆಡಿಎಸ್ ಭದ್ರಕೋಟೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ರೆ ಈ ಬಾರಿ ಬಿಜೆಪಿ ಕೇಂದ್ರ ಸ್ಥಾನವನ್ನ ತನ್ನದಾಗಿಸಿಕೊಂಡಿದ್ದು, ಜೆಡಿಎಸ್ ಗೆ ನುಂಗಲಾರದ ತುಪ್ಪವಾಗಿತ್ತು. ಅದ್ರ ಮಧ್ಯಯೂ ಹೇಗಾದ್ರೂ ಮಾಡಿ ಹಾಸನದ ಶಾಸಕನನ್ನ ಜೆಡಿಎಸ್ ತೆಕ್ಕೆಗೆ ಎಳೆದುಕೊಳ್ಳಲು ಹಿಂದೆಯೇ ಸಾಕಷ್ಟು ಪ್ರಯತ್ನ ಮಾಡಿದ್ರು, ಫಲಿಸಲಿಲ್ಲ.
ಜೊತೆಗೆ ಆದ್ರೆ ನಗರಸಭೆಯ ಚುನಾವಣೆಯಲ್ಲಿ ಮಾತ್ರ ಜೆಡಿಎಸ್ ಗೆ ಎಲ್ಲೋ ಒಂದುಕಡೆ ಬಿಜೆಪಿ ಬಹುದೊಡ್ಡ ಶಾಕ್ ಕೊಟ್ಟಿದ್ದು, ನಿದ್ರಾವಸ್ಥೆಯಲ್ಲಿದ್ದ ರೇವಣ್ಣ ಗಲ್ಲಿ ಗಲ್ಲಿಗಲ್ಲಿ ಓಡಾಡಿ ಕಾರ್ಯಕರ್ತರನ್ನ ಒಂದುಗೂಡಿಸಿ ಪಕ್ಷ ಭದ್ರಪಡಿಸಲು ಮುಂದಾದ್ರು. ಲೋಕಸಭಾ ಚುನಾವಣೆ ಬಂದಿದ್ದರಿಂದ ಜಿಲ್ಲೆಯಲ್ಲಿ ನೇರವಾಗಿ ಬಿಜೆಪಿ ಮತ್ತು ಜೆಡಿಎಸ್ ಗೆ ಹಣಾಹಣಿ ನಡೆದು ಪ್ರಬಲ ಪೈಪೋಟಿಯನ್ನ ನೀಡಿದ್ರು ಕೊನೆಯಲ್ಲಿ ಬಿಜೆಪಿ ವಿಫಲವಾಯ್ತು.
ದೇವೇಗೌಡರ ಕುಟುಂಬವನ್ನ ನೇರವಾಗಿ ಟಾರ್ಗೇಟ್ ಮಾಡಿದ ಅತೀ ಚಿಕ್ಕ ವಯಸ್ಸಿನ ಶಾಸಕ ಎಂದ್ರೆ ಅದು ಪ್ರೀತಂಗೌಡ. ಅಪರೇಷನ್ ಕಮಲದ ಸಂದರ್ಭದಲ್ಲಿಯೂ ಸಿಟಿ ರವಿ ಮತ್ತು ಯಡಿಯೂರಪ್ಪನವರ ನಡುವೆ ಓಡಾಡಿಕೊಂಡು ಪಕ್ಷ ಬಲವರ್ಧನೆ ಮಾಡುವಲ್ಲಿ ಶ್ರಮವಹಿಸಿದ್ರು. ಹಾಗಾಗಿ ಪ್ರೀತಂ ಹೆಸರು ರಾಜ್ಯವಷ್ಟೆಯಲ್ಲದೇ ರಾಷ್ಟ್ರಮಟ್ಟದಲ್ಲಿಯೂ ಚಿರಪರಿಚಿತವಾಯ್ತು. ಮಂದೆ ಬರುವ ಸ್ಥಳೀಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಯನ್ನ ಮಾಡಬೇಕಾದ್ರೆ ಒಂದು ಸಚಿವ ಸ್ಥಾನವನ್ನ ನಮ್ಮ ಜಿಲ್ಲೆಗೆ ನೀಡಿದ್ರೆ ಹೆಚ್ಚು ಅನುಕೂಲ.
ಆದ್ರೆ 14 ತಿಂಗಳ ಬಳಿಕ ಮೈತ್ರಿ ಸರ್ಕಾರ ಪತನವಾದ ಹಿನ್ನಲೆಯಲ್ಲಿ ಕಳೆದ 20ದಿನಗಳಿಂದ ಸಚಿವ ಸಂಪುಟ ರಚನೆಯ ಹಗ್ಗ ಜಗ್ಗಾಟದ ನಡುವೆ ಹಾಸನದ ಶಾಸಕ ಪ್ರೀತಂಗೌಡ ಹೆಸರು ಕೇಳಿಬರುತ್ತಿತ್ತು. ಎಲ್ಲೋ ಒಂದು ಕಡೆ ಕಾರ್ಯಕರ್ತರಲ್ಲಿಯೂ ಉತ್ಸಾಹ ಮನೆ ಮಾಡಿತ್ತು. ಜೆಡಿಎಸ್ ಭದ್ರಕೋಟೆಯನ್ನ ನಡುಗಿಸಲು ಇಂತಹನೊಬ್ಬ ನಾಯಕನಿಗೆ ಮಂತ್ರಿಗಿರಿಯ ಜೊತೆಗೆ ಜಿಲ್ಲಾ ಉಸ್ತುವಾರಿ ಕೊಟ್ಟರೇ ದೇವೇಗೌಡರ ಕೋಟೆಯನ್ನ ಭೇದಿಸಿ ಕೆಸರಿಕರಣ ಮಾಡಬಹುದೆಂಬ ನಿರೀಕ್ಷೆಯಲ್ಲಿಯೇ ಕಾರ್ಯಕರ್ತರಿದ್ರು. ಮೇಲ್ಮಟ್ಟದ ನಾಯಕರಿಗೂ ಮನವಿ, ಆಗ್ರಹವನ್ನ ಕಾರ್ಯಕರ್ತರು ಮಾಡಿದ್ರು.
ಆದ್ರೆ 20 ದಿನಗಳ ಅತಿಯಾದ ಭರವಸೆ ಎಲ್ಲೋ ಒಂದು ಕಡೆ ಹುಸಿಯಾಗಿದೆ. ಕೇವಲ 17 ಮಂದಿಗೆ ಮಾತ್ರ ಇಂದು ರಚನೆಯಾದ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಹಾಗಾಗಿ ಕೆಸರಿಪಡೆಯ ಕಾರ್ಯಕರ್ತರಲ್ಲಿ ನಿರಾಸೆ ಭಾವನೆ ಮೂಡಿದೆ. ರೇವಣ್ಣನವರನ್ನ ಮಾತಿನಿಂದ ಕಟ್ಟಿಹಾಕಲಿಕ್ಕಾದ್ರು ಜಿಲ್ಲೆಯ ಓರ್ವ ಶಾಸಕನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬಹುದಿತ್ತು. ಆದ್ರೆ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದರಾಗಿ ನಡೆಯಬೇಕು. ಹಾಗಾಗಿ ಮುಂದಿನ ದಿನದಲ್ಲಿ ಗುರುತಿಸುತ್ತಾರೆ ಎಂಬ ಭಾವನೆಯಲ್ಲಿದ್ದೇವೆ. ಖಂಡಿತ ನಮ್ಮ ಶಾಸಕರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಭಾವನೆ ಇನ್ನು ಕಾರ್ಯಕರ್ತರಲ್ಲಿ ಇದೆ.
ಒಟ್ಟಾರೆ, ಅರ್ಧಭಾಗ ಸಚಿವ ಸಂಪುಟ ರಚನೆಯಾಗಿದ್ದು, ಮುಂದಿನ ದಿನದಲ್ಲಿ ಪೂರ್ಣಪ್ರಮಾಣದಲ್ಲಿ ರಚನೆಯಾಗುವ ಸಚಿವ ಸಂಪುಟದಲ್ಲಿ ಪ್ರೀತಂಗೌಡರಿಗೆ ಮಂತ್ರಿಗಿರಿ ಸಿಗುತ್ತಾ ಕಾದುನೋಡಬೇಕಿದೆ. ಆದ್ರೆ ಅತಿಯಾಗಿ ಇಟ್ಟುಕೊಂಡಿದ್ದ ಭರವಸೆ ಮಾತ್ರ ಹುಸಿಯಾಗಿದ್ದು, ಜಿಲ್ಲೆಯ ಕೆಸರಿ ನಾಯಕರಿಗೆ ಮಂಕುಕವಿದಂತಾಗಿದೆ.
News Desk, Kondi News....