ಕೋಲಾರ : ಮಾರಕಾಸ್ತ್ರಗಳಿಂದ ಯುವಕನ
ಹಾಸನ: ಜಮೀನಿನ ವಿಚಾರಕ್ಕೆ ...
ತುಮಕೂರು:ಪರಿಸರ ಸಂರಕ್ಷಣೆ ಬಗ್ಗೆ
ಚನ್ನರಾಯಪಟ್ಟಣ: ಪಟ್ಟಣದ ...
ಹಾಸನ: ವಿದ್ಯುತ್ ತಂತಿ ತಗಲಿ ...
ಕೋಲಾರ: ಸಾಲಭಾದೆ ತಾಳಲಾರದೆ ...
ಹಾಸನ: ಚಿರತೆಯೊಂದು ಕರುವಿನ ಮೇಲೆ
ಕೊಡಗು: ಈಗ ಬೇಸಿಗೆ ಕಾಲ ಎಲ್ಲರೂ
ಹಾಸನ: ಪುಲ್ವಾಮಾದಲ್ಲಿ ಭಾರತೀಯ ...
ಸಕಲೇಶಪುರ: ಗ್ಯಾಸ್ ಸಿಲಿಂಡರ್ ...
ಕೊಡಗು: ಜಿಲ್ಲೆಯಲ್ಲಿ ಹುಲಿ ದಾಳಿ
ಕೊಡಗು: ಅಪರೂಪದ ಎರಡು ತಲೆಯ ...
ತುಮಕೂರು: ಹಲವು ದಿನಗಳಿಂದ ...
ತುಮಕೂರು/ಗುಬ್ಬಿ: ಚಿರತೆ ದಾಳಿಗೆ
ತುಮಕೂರು/ಹೆಬ್ಬೂರು:
ಹಾಸನ: ಅಪಘಾತ ಪ್ರಕರಣಗಳು ...
ಕೋಲಾರ: ಖಚಿತ ‌ಮಾಹಿತಿ ಮೇರೆಗೆ ...
ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ

ರಾಜ್ಯ ಸುದ್ದಿ

ಮಕ್ಕಳ ಸಾಹಿತ್ಯ ಸಮ್ಮೇಳನದ ರಥಕ್ಕೆ ಬಿಜಿಎಸ್ ಶ್ರೀಗಳಿಂದ ಚಾಲನೆ

ಬೆಂಗಳೂರು: ಯಾವುದೇ ಉತ್ಸವ ಆರಂಭಿಸುವುದು ಸುಲಭ. ಆದರೆ ಅದನ್ನು ನಿತ್ಯ ವಸಂತದಂತೆ ಮುಂದುವರಿಸಿಕೊಂಡು ಹೋಗುವುದು ತುಸು ಸವಾಲಿನ ಮಾತೇ ಸರಿ ಎಂದು ಶ್ರೀ ಆದಿಚುಂಚನಗಿರಿ ಹಾಸನ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮಿಜೀ ಅಭಿಪ್ರಾಯಪಟ್ಟಿದ್ದಾರೆ.

ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಪೋಷಣೆ, ಶುಭಾಶೀರ್ವಾದದ ತರುವಾಯ, ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಕರ್ಮಯೋಗಿ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಇಂದಿಗೂ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗಲಾಗುತ್ತಿದೆ  ಎಂದಿದ್ದಾರೆ. 

ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರು, 1988 ರಲ್ಲಿ ಆದಿಚುಂಚನಗಿರಿ ಶ್ರೀ ಕ್ಷೇತ್ರದಲ್ಲಿ ನಡೆದ 3 ನೇ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ರೀತಿಯ ಕೃಪಾಶೀರ್ವಾದ ನೀಡಿದ್ದರು. ಒಟ್ಟು ಮೂರು ದಿನಗಳ ಕಾಲ ನಡೆದಿದ್ದ ಅಂದಿನ ಸಮ್ಮೇಳನಕ್ಕೆ ಆಗಿನ ಮುಖ್ಯಮಂತ್ರಿಗಳು ಹಾಗೂ ಹಲವು ಸಚಿವರು ಹಾಜರಾಗಿ ಪ್ರೋತ್ಸಾಹ ನೀಡಿದ್ದರು ಎಂದು ಹಿಂದಿನ ಮಕ್ಕಳ ಸಮ್ಮೇಳನಗಳು ಘಟಿಸಿದ ಬಗೆಯನ್ನು ನೆನೆದಿದ್ದಾರೆ. 

ಹಿರಿಯರ ಆಶಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮಕ್ಕಳ ಸಾಹಿತ್ಯೋತ್ಸವವ ರಥವನ್ನು ಹಿರಿಯರು ಹಾಕಿಕೊಟ್ಟ ಹಾದಿಯಲ್ಲೆ ಎಳೆಯಲಾಗುತ್ತಿದೆ ಎಂದರು. ಕರ್ನಾಟಕದ ಇತಿಹಾಸದಲ್ಲೇ ಹಾಗೂ ದೇಶದಲ್ಲೇ ಮೊದಲ ಬಾರಿಗೆ ಪ್ರಥಮ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಹಲವು ವಿಶೇಷಗಳ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ತಿಂಗಳ ನವೆಂಬರ್ 29, 30 ರಂದು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. 

ಈಗಾಗಲೇ ಸಮ್ಮೇಳಾಧ್ಯಕ್ಷರು, ಸಹ ಅಧ್ಯಕ್ಷರು ಹಾಗೂ ವಿವಿಧ ಗೋಷ್ಠಿಗಳ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ಪೂರ್ವ ಸಿದ್ಧತಾ ಕಾರ್ಯವೂ ಭರದಿಂದ ಸಾಗಿದೆ. ಮಕ್ಕಳಲ್ಲಿ ವಿಶ್ವ ಮಾನವತ್ವದ ಸಂದೇಶ ಬಿತ್ತುವ ಸದುದ್ದೇಶದೊಂದಿಗೆ ನಡೆಯುವ ಮಕ್ಕಳ ಕನ್ನಡಮ್ಮನ ಜಾತ್ರೆಯ ಜಾಗೃತಿ ರಥಯಾತ್ರೆಗೆ ನ.23 ರಂದು ಪರಮಪೂಜ್ಯ ಜಗದ್ಗುರು ಶ್ರೀ  ಶ್ರೀ ಶ್ರೀ  ಡಾ.ನಿರ್ಮಲಾನಂದ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶ ಭವಿಷ್ಯ ಆಸ್ತಿಯಾಗಿರುವ ಮಕ್ಕಳಲ್ಲಿ ಕನ್ನಡ ಪ್ರೀತಿಯ ಜೊತೆ ಜೊತೆಗೆ ಸಾಮಾಜಿಕ ಸಾಮರಸ್ಯ, ಸಹಬಾಳ್ವೆ, ಸತ್ಪಥದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸುವುದಾಗಿದೆ. ಇದಕ್ಕೆ ನಾಡಿನ ಎಲ್ಲಾ ವರ್ಗಗಳ ಜನರು ಸಹಕಾರ ನೀಡುವ ಮೂಲಕ ಶ್ರೀ ಮಠದ, ಗುರು ಹಿರಿಯರ ಸದಾಶಯ ಸಾಕಾರಕ್ಕೆ ಕೈ ಜೋಡಿಸುವಂತೆ ಸ್ವಾಮೀಜಿ ಮನವಿ ಮಾಡಿದರು. 

ಬೆಂಗಳೂರಿನಲ್ಲಿ ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನ ಜಾಗೃತಿ ರಥಯಾತ್ರೆಗೆ ಶನಿವಾರ ಚಾಲನೆ ನೀಡುವ ಸಂದರ್ಭದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಚ.ನಂ. ಅಶೋಕ್, ಮೊದಲಾದವರಿದ್ದರು.

Kondinews, Bangalore

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Feb 17, 2020
ಕೋಲಾರ : ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ...
Post by Kondi News
- Dec 20, 2019
ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ...
Post by Kondi News
- Sep 09, 2019
ಹಾಸನ: ಕೋಮುವಾದಿ ಪಕ್ಷದ ವಿಷಜಂತುವಾಗಿರುವ ...
Has no content to show!

About Us

ಕನ್ನಡ ಪತ್ರಿಕೋದ್ಯಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಿಂದೆ ಗೋಡೆ ಬರಹದ ಮೇಲೆ, ಕೈ ಬರಹದ ಪತ್ರಿಕೆ, ಅಚ್ಚುಮೊಳೆ ಜೋಡಿಸಿ ಮುದ್ರಣ, ಗಣಕೀಕೃತ ಪತ್ರಿಕೆ, ಮುದ್ರಣ ಮಾಧ್ಯಮ ಬದಲಾದಂತೆ, ಅದೇ ರೀತಿ ಜನರ ಸುದ್ದಿ ಓದುವ ವಿಧಾನವೂ ಕೂಡ ಬದಲಾಗಿದೆ. ಇಂದು ಲಕ್ಷಾಂತರ ಜನ ತಮ್ಮ ಅಂಗೈಯಲ್ಲೇ ಸುದ್ದಿ ಓದುತ್ತಿದ್ದಾರೆ. ಹಾಗಂತ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿದೆ ಎಂಬಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಾರಣ ಬದಲಾವಣೆ ಜಗದ ನಿಯಮ. ಇದಕ್ಕೆ ಸಾಕ್ಷಿಯೆಂಬಂತೆ ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಕೊಂಡಿನ್ಯೂಸ್ 6 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೊರೆಗೊಂಡಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. 5ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ "ಹಾಸನಾಂಬ ವಿಶೇಷಾಂಕ" ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನ ಹೊರತಂದು ಮೆಚ್ಚುಗೆಗೆ ಪಾತ್ರವಾಗಿದ್ದನ್ನ ತಮಗೆ ಹೇಳಬೇಕಿಲ್ಲ ಎಂದುಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ಜನರ ಅಭಿಲಾಷೆಯಂತೆ ಕೊಂಡಿ ನ್ಯೂಸ್ ಹಾಸನ ಮಾತ್ರವಲ್ಲದೇ ಇಂದಿನಿಂದ ತುಮಕೂರು, ಬೆಂಗಳೂರು ಚಾಮರಾಜನಗರ, ಕೋಲಾರ, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಅಂತರ್ಜಾಲ ವಾಹಿನಿಯಾಗಿ ಹೊರಹೊಮ್ಮುತ್ತಿದೆ. ಪತ್ರಕರ್ತರೇ ಕಟ್ಟಿರುವ ಈ ಸುದ್ದಿ ವಾಹಿನಿಯನ್ನು ತಾವು ಬೆಳೆಸುತ್ತಿರಾ. . ? ಹರಸುತ್ತಿರಾ. . . ? ಕೈ ಹಿಡಿಯುತ್ತೀರಾ. . ? ಎಂಬ ನಂಬಿಕೆ ನಮ್ಮದು. www.kondinews.com ಕ್ಲಿಕ್ ಮಾಡಿ, ಲೈಕ್ ಮಾಡಿ. . .  ಶೇರ್ ಮಾಡಿ. . . ಸಬ್ಸ್ಕ್ರೈಬ್ ಮಾಡಿರಿ.. . 

ಸಂಪಾದಕ, ಕೊಂಡಿನ್ಯೂಸ್.

Newsletter

Subscribe with us your email
Top