ಕೋಲಾರ : ಮಾರಕಾಸ್ತ್ರಗಳಿಂದ ಯುವಕನ
ಹಾಸನ: ಜಮೀನಿನ ವಿಚಾರಕ್ಕೆ ...
ತುಮಕೂರು:ಪರಿಸರ ಸಂರಕ್ಷಣೆ ಬಗ್ಗೆ
ಚನ್ನರಾಯಪಟ್ಟಣ: ಪಟ್ಟಣದ ...
ಹಾಸನ: ವಿದ್ಯುತ್ ತಂತಿ ತಗಲಿ ...
ಕೋಲಾರ: ಸಾಲಭಾದೆ ತಾಳಲಾರದೆ ...
ಹಾಸನ: ಚಿರತೆಯೊಂದು ಕರುವಿನ ಮೇಲೆ
ಕೊಡಗು: ಈಗ ಬೇಸಿಗೆ ಕಾಲ ಎಲ್ಲರೂ
ಹಾಸನ: ಪುಲ್ವಾಮಾದಲ್ಲಿ ಭಾರತೀಯ ...
ಸಕಲೇಶಪುರ: ಗ್ಯಾಸ್ ಸಿಲಿಂಡರ್ ...
ಕೊಡಗು: ಜಿಲ್ಲೆಯಲ್ಲಿ ಹುಲಿ ದಾಳಿ
ಕೊಡಗು: ಅಪರೂಪದ ಎರಡು ತಲೆಯ ...
ತುಮಕೂರು: ಹಲವು ದಿನಗಳಿಂದ ...
ತುಮಕೂರು/ಗುಬ್ಬಿ: ಚಿರತೆ ದಾಳಿಗೆ
ತುಮಕೂರು/ಹೆಬ್ಬೂರು:
ಹಾಸನ: ಅಪಘಾತ ಪ್ರಕರಣಗಳು ...
ಕೋಲಾರ: ಖಚಿತ ‌ಮಾಹಿತಿ ಮೇರೆಗೆ ...
ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ

ಸಿನಿಮಾ ಸುದ್ದಿ

ಹಾಸನ: ಒಂದು ಫಿಚ್ಚರ್ ತೆರೆಕಂಡರೆ ನಿರ್ಮಾಪಕರು ಮರುದಿನದ ಗಲ್ಲಪೆಟ್ಟಿಗೆ ಎಷ್ಟಾಯ್ತು ಎಂಬುದನ್ನ ಲೆಕ್ಕಾ ಹಾಕ್ತಾರೆ. ಆದ್ರೆ ಈ ಚಿತ್ರದ ನಿರ್ಮಾಪಕರು ಮತ್ತು ಚಿತ್ರತಂಡ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಚಿತ್ರ ಬಿಡುಗಡೆಗೆ ಸಿದ್ದವಾಕ್ತಿದ್ದಾರೆ. ಇವತ್ತು ಹಾಸನದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಸಮಾಜಿಕ ಕಳಕಳಿಯನ್ನ ಮೆರೆದ್ರು. ಆ ಚಿತ್ರವಾದ್ರು ಯವ್ದು...? ಆ ಚಿತ್ರತಂಡ ಮಾಡಿದ ಸಾಮಾಜಿಕ ಕೆಲಸವಾದ್ರು ಏನು..? ಅಂತೀರಾ..ಈ ಸ್ಟೋರಿ ನೋಡಿ...

ಈಗಾಲೇ "10th ಕ್ಲಾಸ್", "ಪಿಯುಸಿ" (ಪ್ಲೀಸ್ ಯೂ ಸಿ),ಎಂಬ ಚಿತ್ರಗಳು ಪಡ್ಡೆಹುಡುಗ್ರ ನಿದ್ದೆಗೆಡಿಸಿದ್ದ ಸಿನಿಮಾಗಳ ಜೊತೆಗೆ ಅದೇ ರೀತಿ ಇಲ್ಲೊಂದು ಹೊಸಬರ ತಂಡ "3rd ಕ್ಲಾಸ್" ಎಂಬ ವಿಚಿತ್ರ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಿದ್ದು, ಸದ್ಯ ಇಂದು ಹಾಸನದಲ್ಲಿ ಚಿತ್ರದ ಆಡಿಯೋ ಮತ್ತು ಟ್ರೇಲರ್ ಲಾಂಚ್ ಮಾಡಿದ್ರು. ಲಾಂಚ ಮಾಡುವ ವೇಳೆ ಹಾಸನ ನಗರದ ಆಟೋ ಚಾಲಕರಿಗೆ 1 ಲಕ್ಷದ ವಿಮೆ ಮತ್ತು ಮೊದಲ ದಿನದ ಗಲ್ಲಪೆಟ್ಟಿಗೆಯ ಲಾಭವನ್ನ ನಗರದ ಅಂಧಮಕ್ಕಳ ಶಾಲೆಗೆ ಹಾಗೂ ನವಜಾತ ಮಕ್ಕಳ ಪೋಷಣಾ ಕೇಂದ್ರವಾದ ಮಮತೆಯ ಮಡಿಲು ಸಂಸ್ಥೆಗೆ ಕೊಡುವುದಾಗಿ ಘೋಷಣೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದ್ರು.

ಇನ್ನು ಈ ಚಿತ್ರದಲ್ಲಿ ಕಾರ್ ಗ್ಯಾರೇಜ್ ಮಾಲೀಕನೋರ್ವ ಪ್ರೀತಿಯಿಂದ ನಾಯಕ ಮತ್ತು ಅವನ ಮೂವರು ಸ್ನೇಹಿತರನ್ನು ಸಾಕಿರುತ್ತಾನೆ. ಗ್ಯಾರೇಜ್ನಲ್ಲಿ ವರ್ಕ್ ಮಾಡುವ ನಾಯಕ ಹಾಗು ಹೋಮ್ ಮಿನಿಸ್ಟರ್ ಮಗಳ ನಡುವಿನ ಪ್ರೇಮ ಕಥೆ. ನಾಯಕಿ ಗ್ಯಾರೇಜ್ ಹುಡುಗನ ಬಾಳಲ್ಲಿ ಪ್ರವೇಶಿಸಿದ ಬಳಿಕ ಮೂರು ಸಂಸಾರಗಳ ನಡುವೆ, ಮೂರು ವರ್ಗಗಳ ನಡುವೆ ನಡೆಯುವ ಒಂದು ತ್ರಿಕೋನ ಪ್ರೇಮಕಥೆಯೇ 3rd ಕ್ಲಾಸ್ ಚಿತ್ರದ ಕಥಾ ಹಂದರ. ಇನ್ನು ಹೆಸರು 3rd ಕ್ಲಾಸ್ ಆಗಿದ್ರು ಸಿನಿಮಾ ಮಾತ್ರ ಫಸ್ಟ್ ಕ್ಲಾಸ್ ಆಗಿದೆ ಎನ್ನುತ್ತಾರೆ ರೂಪಿಕಾ.

ನಾವು ಆಟೋ ಚಾಲಕರಾಗಿದ್ದು, ಸರ್ಕಾರ ನಮಗೆ ಪ್ರತಿ ಬಜೆಟ್ ನಲ್ಲಿ ನಮ್ಮನ್ನ ಕಡೆಗಣಿಸುತ್ತಲೇ ಬಂದಿದೆ. ಹೊಸ ಹೊಸ ಚಿತ್ರಗಳು ಬಂದ್ರೆ ಸಾಕು ಆಟೋಗಳ ಹಿಂದೆ ಮುಂದೆ ಚಿತ್ರನಟ-ನಟಿಯರ ಪೋಟೋಗಳು, ಅವರ ಡೈಲಾಗ್ ಗಳು ರಾರಾಜಿಸುತ್ತಿರುತ್ತವೆ. ಆದ್ರೆ ನಮಗೆ ಈ ರೀತಿಯ ಜೀವವಿಮೆಯನ್ನ ಯಾರು ಮಾಡಿಸಿಕೊಟ್ಟಿರಲಿಲ್ಲ. ನಮ್ಮ ಬಾಳಿಗೆ ಬೆಳಕಾಗುತ್ತಿರೋ ಇವರ ಭವಿಷ್ಯ ಉಜ್ವಲವಾಗಲಿ. ಚಿತ್ರವೂ ಕೂಡಾ ನೂರುದಿನ ಪೂರೈಸಲಿ ಎನ್ನುತ್ತಾರೆ ಆಟೋ ಸಂಘದ ಅಧ್ಯಕ್ಷ.

ಇನ್ನು ಯುವ ನಿರ್ದೇಶಕ ಅಶೋಕ್ದೇವ್ ಚಿತ್ರವನ್ನು ನಿರ್ದೇಶಿಸಿದ್ದು, ಕಾಮಿಡಿ ಮೂಲಕ ಕಿರುತೆರೆಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಕ್ಯೂಟ್ ಆ್ಯಂಡ್ ಹಾಟ್ ಸುಂದರಿ ರೂಪಿಕಾ ಚಿತ್ರದ ನಾಯಕಿ. ಮೊದಲ ಬಾರಿಗೆ ನಾಯಕನಟನಾಗಿ ನಮ್ ಜಗದೀಶ್ ಬಣ್ಣ ಹಚ್ಚಿದ್ದು, ಪಕ್ಕಾ ಕಮರ್ಷಿಯಲ್ ಪ್ಯಾಮಿಲಿ ಮೂವಿಯಾಗಿದೆಯಂತೆ. ಶಾಮ್ರಾಜ್ ಅವರ ಛಾಯಾಗ್ರಹಣವಿದ್ದು, ಶ್ರೀಕಾಂತ್ ಸಂಕಲನ ಕಾರ್ಯನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ.

Kondinews, Hassan.

Media News

  • Latest
  • Most popular
  • Trending
  • Most commented
Post by Kondi News
- Feb 17, 2020
ಕೋಲಾರ : ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ...
Post by Kondi News
- Dec 20, 2019
ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ...
Post by Kondi News
- Sep 09, 2019
ಹಾಸನ: ಕೋಮುವಾದಿ ಪಕ್ಷದ ವಿಷಜಂತುವಾಗಿರುವ ...
Has no content to show!

About Us

ಕನ್ನಡ ಪತ್ರಿಕೋದ್ಯಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಿಂದೆ ಗೋಡೆ ಬರಹದ ಮೇಲೆ, ಕೈ ಬರಹದ ಪತ್ರಿಕೆ, ಅಚ್ಚುಮೊಳೆ ಜೋಡಿಸಿ ಮುದ್ರಣ, ಗಣಕೀಕೃತ ಪತ್ರಿಕೆ, ಮುದ್ರಣ ಮಾಧ್ಯಮ ಬದಲಾದಂತೆ, ಅದೇ ರೀತಿ ಜನರ ಸುದ್ದಿ ಓದುವ ವಿಧಾನವೂ ಕೂಡ ಬದಲಾಗಿದೆ. ಇಂದು ಲಕ್ಷಾಂತರ ಜನ ತಮ್ಮ ಅಂಗೈಯಲ್ಲೇ ಸುದ್ದಿ ಓದುತ್ತಿದ್ದಾರೆ. ಹಾಗಂತ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿದೆ ಎಂಬಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಾರಣ ಬದಲಾವಣೆ ಜಗದ ನಿಯಮ. ಇದಕ್ಕೆ ಸಾಕ್ಷಿಯೆಂಬಂತೆ ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಕೊಂಡಿನ್ಯೂಸ್ 6 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೊರೆಗೊಂಡಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. 5ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ "ಹಾಸನಾಂಬ ವಿಶೇಷಾಂಕ" ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನ ಹೊರತಂದು ಮೆಚ್ಚುಗೆಗೆ ಪಾತ್ರವಾಗಿದ್ದನ್ನ ತಮಗೆ ಹೇಳಬೇಕಿಲ್ಲ ಎಂದುಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ಜನರ ಅಭಿಲಾಷೆಯಂತೆ ಕೊಂಡಿ ನ್ಯೂಸ್ ಹಾಸನ ಮಾತ್ರವಲ್ಲದೇ ಇಂದಿನಿಂದ ತುಮಕೂರು, ಬೆಂಗಳೂರು ಚಾಮರಾಜನಗರ, ಕೋಲಾರ, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಅಂತರ್ಜಾಲ ವಾಹಿನಿಯಾಗಿ ಹೊರಹೊಮ್ಮುತ್ತಿದೆ. ಪತ್ರಕರ್ತರೇ ಕಟ್ಟಿರುವ ಈ ಸುದ್ದಿ ವಾಹಿನಿಯನ್ನು ತಾವು ಬೆಳೆಸುತ್ತಿರಾ. . ? ಹರಸುತ್ತಿರಾ. . . ? ಕೈ ಹಿಡಿಯುತ್ತೀರಾ. . ? ಎಂಬ ನಂಬಿಕೆ ನಮ್ಮದು. www.kondinews.com ಕ್ಲಿಕ್ ಮಾಡಿ, ಲೈಕ್ ಮಾಡಿ. . .  ಶೇರ್ ಮಾಡಿ. . . ಸಬ್ಸ್ಕ್ರೈಬ್ ಮಾಡಿರಿ.. . 

ಸಂಪಾದಕ, ಕೊಂಡಿನ್ಯೂಸ್.

Newsletter

Subscribe with us your email
Top