ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ಹಾಸನ: ಜೆಡಿಎಸ್ ನವರಿಗೆ ರಾಜಕೀಯ
ಹಾಸನ:ಚನ್ನರಾಯಪಟ್ಟಣ ತಾಲೂಕು ...
ಹಾಸನ:ನಮ್ಮ ಮಕ್ಕಳು ಓದಿ ...
ಹಾಸನ:ಅ.27ರಂದು ಅಮೃತ್ ಮಹಲ್ ರಾಸು
ಇವರ್ಯಾರು ಇವರಿಗೆ ಹೆತ್ತವರಲ್ಲ.
ಆಹಾರ ಅರಸಿ ಅವುಗಳು ಅಲ್ಲಿಗೆ ...
ಹೆಣ್ಣು-ಹೊನ್ನು-ಮಣ್ಣು ಪುರುಷನನ್ನ
ಹಾಸನ:ಸಾರ್ವಜನಿಕರ ದೂರಿನ ...
ಹಾಸನ: ಹಣ, ಚಿನ್ನ ಎಲ್ಲವನ್ನ ...
ಹಾಸನ:ಕನ್ನಡಿಗರಿಗೆ ಉದ್ಯೋಗವನ್ನು
ಹಾಸನ: ಹಾಸನದಲ್ಲಿ ಮಾಜಿ ಸಚಿವ ಎ
ಹಾಸನ: ಮನೆ ಕಟ್ಟುವ ವಿಚಾರಕ್ಕೆ ...
ಹಾಸನ: ಕುಡಿದ ಅಮಲಿನಲ್ಲಿ ತಂದೆಯೇ
ಹಾಸನ:ಸರ್ಕಾರ ರಚನೆಯಾಗಿ ನೂರುದಿನದ
ಹಾಸನ:ಹೇಮಾವತಿ ಕಾಲುವೆಯಲ್ಲಿ ...

ಸ್ಥಳೀಯ ಸುದ್ದಿ

ಪ್ಲಕ್ಸ್ ತೆರವುಗೊಳಿಸುವಲ್ಲಿ ತಾರತಮ್ಯ: ಸಾರ್ವಜನಿಕರ ಆಕ್ರೋಶ

 

ಪ್ಲಕ್ಸ್ ತೆರವುಗೊಳಿಸುವಲ್ಲಿ ತಾರತಮ್ಯ: ಸಾರ್ವಜನಿಕರ ಆಕ್ರೋಶ

ಅರಸೀಕೆರೆ: ನಗರದ ಸ್ವಚ್ಛತೆ ಹಾಗೂ ಸೌಂದರ್ಯಕ್ಕೆ ಒತ್ತು ನೀಡಬೇಕಾದ ನಗರಸಭೆ ಫ್ಲೆಕ್ಸ್ ಪೋಸ್ಟರ್‌ಗಳನ್ನು ತೆರವು ಮಾಡುವಲ್ಲಿ ತಾರತಮ್ಯ ಮಡುತ್ತಿದೆ ಎಂದು ವಂದೇ ಮಾತರಂ ಟ್ರಸ್ಟ್‌ನ ಅಧ್ಯಕ್ಷ ಧೀರೆಂದ್ರ ಆರೋಪಿಸಿದ್ದಾರೆ.

ದೇಶದ ಪ್ರಧಾನಿಯವರ ಸ್ವಚ್ಛ ಭಾರತ್ ಅಭಿಯಾನಕ್ಕೆ ಹೆಚ್ಚಿನ ಮಹತ್ವ ನೀಡಿ ರಾಜಕಾರಣಿಗಳು ಸೇರಿದಂತೆ ಅಧಿಕಾರಿಗಳು ಸಹ ಇದನ್ನು ಕಾರ್ಯಗತ ಮಾಡುವಲ್ಲಿ ಸಾಕಷ್ಟು ಪರಿಶ್ರಮಪಡುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ಅಭಿಯಾನದ ಮಹತ್ವವನ್ನು ಸ್ವಾಮ್ಯದ ರೈಲ್ವೆ ಇಲಾಖೆ ಗಾಳಿಗೆ ತೂರಿ ರೈಲು ನಿಲ್ದಾಣದ ಕಟ್ಟಡ ಸೇರಿ ಸುತ್ತಮುತ್ತ ಹಾಕಿರುವ ಫ್ಲೆಕ್ಸ್ ತೆರವು ಮಾಡದೆ ಜಾಣ ಕುರುಡು ತೋರಿ ಎಲ್ಲೋ ಒಂದು ಕಡೆ ಕೇಂದ್ರ ಸ್ವಚ್ಚಭಾರತಕ್ಕೆ ಅವಮಾನ ತೋರುತ್ತಿದೆ ಎಂದು ಆರೋಪಿಸಿದ್ರು.

ಫ್ಲೆಕ್ಸ್‌ಗಳನ್ನು ತೆರವು ಮಾಡುವಲ್ಲಿ ನಗರಸಭೆ ತಾರತಮ್ಯ ತೋರುತ್ತಿದ್ದು, ತಮಗೆ ಬೇಕಾದವರಿಗೊಂದು ಬೇಡದವರಿಗೊಂದು ಕಾನೂನು ಮಾಡುತ್ತದೆ, ನಿಷೇಧಿತ ಪ್ಲಾಸ್ಟಿಕ್ ಬ್ಯಾನರ್‌ಗಳನ್ನು ಉಪಯೋಗಿಸದಂತೆ ಕಠಿಣ ಕ್ರಮ ಕೈಗೊಳ್ಳುವ ಅರಸೀಕೆರೆ ನಗರಸಭೆ ರೈಲ್ವೆ ನಿಲ್ದಾಣದಲ್ಲಿರುವ ಪ್ಲೆಕ್ಸ್‌ಗಳನ್ನು ನಗರಸಭೆ ಏಕೆ ತೆಗೆಸುತ್ತಿಲ್ಲ ಎಂದರು.

ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿ ಅರಸೀಕೆರೆ ನಗರಸಭೆ ಕೂಡ ಕಾರ್ಯಪ್ರವೃತ್ತವಾಗಿ ನಗರದ ಯಾವ ಮೂಲೆಯಲ್ಲಿ ಪ್ಲಾಸ್ಟಿಕ್ ಬ್ಯಾನರ್, ಫ್ಲೆಕ್ಸ್ , ಪೋಸ್ಟಿಂಗ್‌ಗಳು ಕಂಡು ಬಂದರೆ ಅದನ್ನು ತೆಗೆದುಹಾಕಿ ಕಸದ ಆಟೋ ಟ್ಯ್ಟ್ರಾಕ್ಟರ್ ಗಳಲ್ಲಿ ತುಂಬಿಕೊಂಡು ಹೋಗುತ್ತಾರೆ ಆದರೆ ಕಳೆದ ಒಂದೆರಡು ವಾರದಿಂದ ರೈಲು ನಿಲ್ದಾಣ ಆವರಣದಲ್ಲಿ ರಾರಾಜಿಸುತ್ತಿರುವ ದೊಡ್ಡ ದೊಡ್ಡ ಪ್ಲಾಸ್ಟಿಕ್ ಪೋಸ್ಟರ್‌ಗಳೂ ನಗರಸಭೆ ಕಾಣುತ್ತಿಲ್ಲವೆ, ಅಥವಾ ಕಂಡು ಕಾಣದಂತೆ ಕೇಂದ್ರ ಸರ್ಕಾರ ಇಲಾಖೆ ತಂಟೆಗೆ ಯಾಕೆ ಹೋಗಬೇಕೆಂಬ ಭಯದಿಂದೇನಾದರೂ ನಗರಸಭೆ ತನಗೆ ಗೊತ್ತೇ ಇಲ್ಲ ಎಂಬಂತೆ ಕೂತಿದಿಯೋ ಗೊತ್ತಿಲ್ಲ. ಆದ್ರೆ ಮುಂದಿನ ದಿನದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುವರು ಎಂಬುದನ್ನ ಕಾದುನೋಡಬೇಕಿದೆ.

- ಪ್ರಸಾದ್ ಮೂರುಂಡಿ, ಅರಸೀಕೆರೆ

Last modified on Friday, 16 August 2019 14:37
Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Nov 11, 2019
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ಹೆಚ್ಚು ಜನರು ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Aug 31, 2019
ಹಾಸನ: ಅನೈತಿಕ ಸಂಬಂಧ ಮತ್ತು ಹಣದ ವಿಚಾರಕ್ಕಾಗಿ ಮಗಳೇ ...
Has no content to show!

Visitors Counter

00552034
Today
This Month
Last Month
All days
9
1142
2268
552034
Your IP: 35.171.45.91
2019-11-15 09:06

About

Newsletter

Subscribe with us your email
Top