ಹಾಸನ: ಸುರಕ್ಷಿತ ವಾಹನ ಚಾಲನೆ ...
ಹಾಸನ: ಒಬ್ಬ ಮನುಷ್ಯ ಎಷ್ಟು ...
ಶ್ರವಣಬೆಳಗೊಳ: ಜನವರಿ ತಿಂಗಳಲ್ಲಿ
ತುಮಕೂರು : ಪ್ರತಿಯೊಬ್ಬರು ...
ಶ್ರವಣಬೆಳಗೊಳ: ಯುವ ಜನತೆ ...
ಹಾಸನ: ದೇಶದಲ್ಲಿ ಕೆಲ ನಾಯಕರನ್ನು
ಬೆಂಗಳೂರು: ಯಾವುದೇ ಉತ್ಸವ ...
ಹಾಸನ: ಒಂದು ಫಿಚ್ಚರ್ ತೆರೆಕಂಡರೆ
ಹಾಸನ: ಕೇವಲ ಕಾಮಗಾರಿ ಮಾಡುವ ಮೂಲಕ
ಹಾಸನ/ಬೇಲೂರು: ನೋಟಿಸ್ ಜಾರಿ ...
ಅರಸಿಕೆರೆ: ಶ್ರೀ ಸಚಿದಾನಂದ ...
ಹಾಸನ: ಹಾಸನ ತಾಲೂಕಿನ ಗ್ರಾಮೀಣ ...
ಹಾಸನ: ಎಲ್ಲರನ್ನೂ ಮಂತ್ರಿ ...
ಹಾಸನ: ಅಂತೂ ಇಂತೂ ಕೊನೆಗೂ ಜನರ ...
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...

ಸ್ಥಳೀಯ ಸುದ್ದಿ

ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ

ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ನಡೆದಿದೆ.

ದ್ರಾಕ್ಷಾಯಿಣಿ (33) ಆತ್ಮಹತ್ಯೆ ಮಾಡಿಕೊಂಡ ಗೃಹಣಿ. ರಾಮನಾಥಪುರದ ಮಡಕೆ ಹೊಸಹಳ್ಳಿಯ ದ್ರಾಕ್ಷಾಯಣಿ ಯನ್ನ ಮಂಡ್ಯದ ಕಲ್ಲಹಳ್ಳಿ ನಿವಾಸಿ ಪ್ರದೀಪನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾದ ಮೂರ್ನಾಲ್ಕು ವರ್ಷ ಸಂತೋಷವಾಗಿ ಸಂಸಾರ ಮಾಡಿಕೊಂಡಿದ್ದ ಇಬ್ಬರು ನಂತರದ ದಿನಗಳಲ್ಲಿ ಸಣ್ಣಪುಟ್ಟ ಜಗಳ ಮಾಡಿಕೊಂಡು ರಂಪ ರಾದ್ಧಾಂತ ಮಾಡಿಕೊಳ್ಳುತ್ತಿದ್ದರು.

ದುಡಿದ ಹಣವನ್ನೆಲ್ಲಾ ಕುಡಿದು ಹಾಡು ಮಾಡುತ್ತಿದ್ದ ಪ್ರದೀಪ್ ಹಲವರ ಬಳಿ ಕೈಸಾಲ ಮಾಡಿಕೊಂಡಿದ್ದ. ಹೀಗಾಗಿ ಮಂಡ್ಯದಿಂದ ವಾಪಸ್ ರಾಮನಾಥಪುರಕ್ಕೆ ಬಂದು ದ್ವಿಚಕ್ರ ವಾಹನ ರಿಪೇರಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಕುಡಿತದ ಚಟ ಬಿಡದ ಪ್ರದೀಪ್ ಮತ್ತೆ ಹೆಂಡತಿಗೆ ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಇದೇ ವಿಚಾರವಾಗಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಎಂಟತ್ತು ಬಾರಿ ಗ್ರಾಮಸ್ಥರು ನ್ಯಾಯ ಪಂಚಾಯಿತಿ ಮಾಡಿ ಬುದ್ಧಿವಾದ ಹೇಳಿದರು.

ಆದರೆ ಇವತ್ತು ಮತ್ತೆ ಗಂಡ-ಹೆಂಡತಿಯರ ನಡುವೆ ಜಗಳವಾಗಿದ್ದು ಜಗಳದ ಮಧ್ಯೆ ಮನನೊಂದು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಗಂಡನ ಮಾತಾದರೇ, ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಮಕ್ಕಳಿಗಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದು, ಗಂಡನೇ ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ನಂಬಿಸಲು ಹೊರಟಿದ್ದಾನೆ ಎಂಬುದು ಮೃತ ದ್ರಾಕ್ಷಾಯಿಣಿ ಕುಟುಂಬದ ಸದಸ್ಯರ ಆರೋಪ.

ದ್ರಾಕ್ಷಾಯಿಣಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕ ಗೊತ್ತಾಗಲಿಲ್ಲ ಸತ್ಯ ಮೃತದೇಹವನ್ನು ರಾಮನಾಥಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸದ್ಯ ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Jan 13, 2020
ಹಾಸನ: ಸುರಕ್ಷಿತ ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Nov 05, 2019
ಹಾಸನ: ಮನೆ ಕಟ್ಟುವ ವಿಚಾರಕ್ಕೆ ಅಣ್ಣ ನೀಡುತ್ತಿದ್ದ ...
Has no content to show!

About

Newsletter

Subscribe with us your email
Top