ಹಾಸನ.ಮೇ.30.(ಕರ್ನಾಟಕ ವಾರ್ತೆ):-
ಹಾಸನ: ಉದ್ಯೋಗ ಖಾತರಿ ಯೋಜನೆಯಡಿ
ಹಾಸನ: ಮುಂಬೈನಿಂದ ಹಾಸನಕ್ಕೆ ...
ಹಾಸನ: ಈಯಮ್ಮನ ಹತ್ರ ಮತ್ತು ...
ಸೋಮವಾರಪೇಟೆ: ತಾಲ್ಲೂಕಿನ ಯಡವನಾಡು
ಹಾಸನ: ಹೊರಗಡೆಯಿಂದ ಬಂದವರನ್ನು ...
ಹಾಸವ: ಹಾಸನದಲ್ಲಿ ದಿನದಿಂದ ...
ಹಾಸನ: ಹಾಸನದಲ್ಲಿ ಬೆಳಗ್ಗೆ ...
ಹಾಸನ: ಒಂದು ಕಡೆ ಲಾಕ್ಡೌನ್ ಓಪನ್
ಮಂಡ್ಯ:ರಾತ್ರಿ ವೇಳೆ ದಿಢೀರ್ ...
ತುಮಕೂರು : ಸಾರ್ವಜನಿಕರಿಗೆ ಭೀತಿ
ಕೋಲಾರ: ಜಿಲ್ಲೆಯ ...
ಕೋಲಾರ :ಸಚಿವರಿಂದ ಹುಳು ಬಿದ್ದ ...
ಹಾಸನ: ಈ ಕೊರೋನ ಬಂದು ವಕ್ಕರಿಸಿದ
ಹಾಸನ :ಹಾಸನ ಜಿಲ್ಲೆಯಲ್ಲಿ ...
ಹಾಸನ: ಹಾಸನದಿಂದ ಕಾರ್ಮಿಕರನ್ನು
ಹಾಸನ: ಎಸ್.ಎಸ್.ಎಲ್.ಸಿ ...
ಹಾಸನ: ಎಸ್.ಎಸ್.ಎಲ್.ಸಿ ...

ಸ್ಥಳೀಯ ಸುದ್ದಿ

ಗ್ರಾಮೀಣ ಬದುಕು ಹೆಚ್ಚಾಗಿ ಕೃಷಿ ಕ್ಷೇತ್ರವನ್ನು ಅವಲಂಬಿಸಿದೆ: ಸಿ.ಎನ್ ಬಾಲಕೃಷ್ಣ

ಶ್ರವಣಬೆಳಗೊಳ: ನಮ್ಮ ಗ್ರಾಮೀಣ ಬದುಕು ಹೆಚ್ಚಾಗಿ ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದು, ಕೃಷಿಯ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇದಕ್ಕೆ ಪೂರಕವಾದಂತೆ ಕೃಷಿ ವಿಶ್ವವಿದ್ಯಾಲಯವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಸಿ.ಎನ್ ಬಾಲಕೃಷ್ಣ ಕರೆ ನೀಡಿದರು.

ಹೋಬಳಿಯ ವಡ್ಡರಹಳ್ಳಿ ಗ್ರಾiದಲ್ಲಿ ಹಾಸನ ಕೃಷಿ ಮಹಾ ವಿಶ್ವವಿದ್ಯಾಲಯ ಆಯೋಜಿಸಿರುವ ಗ್ರಾಮೀಣ ಅರಿವು ಕಾರ್ಯಾನುಭವ ಶಿಬಿರದ ಕೃಷಿ ಮಾಹಿತಿ ಕೇಂದ್ರ ಉದ್ಘಾಟಿಸಿ ಮಾತಾನಾಡಿದ ಅವರು, ವಿದ್ಯಾರ್ಥಿಗಳು ಕೃಷಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಪ್ರತಿಕೃತಿಗಳ ಮೂಲಕ ಅರಿವು ಮೂಡಿಸುತ್ತಿದ್ದು, ಗ್ರಾಮೀಣ ಭಾಗದ ರೈತರಿಗೆ ಸಹಕಾರಿಯಾಗಿದೆ ಎಂದರು.

ಜಾಗತಿಕ ತಾಪಮಾನ ಹೆಚ್ಚುತ್ತಿರುವ ಪ್ರಸ್ತುತ ದಿನದಲ್ಲಿ ಪರಿಸರ ಸಂರಕ್ಷಣೆಯಲ್ಲಿ ಕೃಷಿ ಬಹು ಮುಖ್ಯವಾಗಿದ್ದು, ಆರ್ಥಿಕ ಪ್ರಗತಿಗೆ ಪೂರಕವಾಗಿದೆ. ದೇಶದ ಅಭಿವೃದ್ದಿಯಲ್ಲಿ ಕೃಷಿ ತಜ್ಞರು ಮಹತ್ವದ ಪಾತ್ರ ವಹಿಸುವುದರ ಜತೆಗೆ ವೈಜ್ಞಾನಿಕ ಕೃಷಿ ಪದ್ದತಿಗೆ ಕಾರಣಕರ್ತರಾಗಿದ್ದು, ಸರ್ಕಾರಗಳು ಇವರಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಮಾಹಿತಿ ಕೇಂದ್ರದಲ್ಲಿ ವಿವಿಧ ತಳಿಗಳು ಮತ್ತು ಅದರ ಸೂಕ್ತ ನಿರ್ವಹಣೆ, ಸಾವಯುವ ಕೃಷಿಯ ಕುರಿತು ಮಾಹಿತಿ, ಜೀವಾಮೃತ, ಬೀಜಾಮೃತ, ಪಂಚಗವ್ಯ ತಯಾರಿಸುವ ವಿಧಾನ, ಕೃಷಿಯಲ್ಲಿ ಆದಾಯ ಹೆಚ್ಚಿಸಲು ಕೈಗೊಳ್ಳಬೇಕಾದ ವೆಚ್ಚರಹಿತ ಹಾಗೂ ಕಡಿಮೆ ವೆಚ್ಚದ ವಿಧಾನಗಳು, ಸಮಗ್ರ ಪೋಷಕಾಂಶ ನಿರ್ವಹಣೆ, ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಚಲಿತವಿರುವ ಮೇಕೆ ಹಾಗೂ ಎಮ್ಮೆಗಳ ಸುಧಾರಿತ ತಳಿಗಳ ಮಾಹಿತಿ, ಅಜೋಲಾ ಉತ್ಪಾದನೆ, ಜೇನು ಮತ್ತು ರೇಷ್ಮೆ ಹುಳು ಸಾಕಾಣಿಕೆ. ತೆಂಗಿನ ರೋಗಗಳು, ಕೀಟಗಳ ಬಾಧೆ ಮತ್ತು ಅದರ ನಿರ್ವಹಣೆ, ಅಣಬೆ ಬೇಸಾಯದ ಮಾಹಿತಿ, ತೆಂಗಿನ ಬೇಸಾಯ ಕ್ರಮ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕುರಿತು ಮಾಹಿತಿ ನೀಡಲಾಗಿದೆ. ಇದಲ್ಲದೆ ಸಮಗ್ರ ಬೇಸಾಯ ಪದ್ಧತಿ, ಕೊಳವೆ ಬಾವಿ ಜಲ ಮರುಪೂರಣ,ಸಮಗ್ರ ಪೀಡೆ ನಿರ್ವಹಣೆ, ಪೋಷಕಾಂಶಗಳ ಕೊರೆತೆಯ ಲಕ್ಷಣಗಳ ಬಗ್ಗೆಗಿನ ಪ್ರತಿಕೃತಿ ತಯಾರಿಸಿ ರೈತರಿಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಹಾಸನ ಕೃಷಿ ಮಹಾವಿದ್ಯಾಲಯ ಶೈಕ್ಷಣಿಕ ಅಧಿಕಾರಿ ಡಾ. ಎನ್.ದೇವಕುಮಾರ್, ತಾ.ಪಂ ಮಾಜಿ ಅಧ್ಯಕ್ಷ ರಾಜಣ್ಣ, ನಿವೃತ್ತ ಪ್ರಾಂಶುಪಾಲ ಡಿ.ಮಂಜಪ್ಪ, ಗ್ರಾಮ ಪಂಚಾಯತಿ ಸದಸ್ಯ ಸುಧಾಕರ್, ಮುಖಂಡರಾದ ಗಣೇಶ್‌ಗೌಡ, ಸುರೇಶ್, ಮಧುಸೂದನ್, ಸಂಪತ್ ಕುಮಾರ್, ಶಿಬಿರದ ಸಂಯೋಜಕ ಡಾ. ವಿನಯ್ ಕುಮಾರ್, ಸಹ ಸಂಯೋಜಕ ಡಾ. ನಾಗರಾಜ್ ಹುಲ್ಲೂರ್, ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಜಂiiರಾಮಯ್ಯ, ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ್ ಭಾಗವಹಿಸಿದ್ದರು.

Last modified on Tuesday, 20 August 2019 15:12
Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- May 30, 2020
ಹಾಸನ.ಮೇ.30.(ಕರ್ನಾಟಕ ವಾರ್ತೆ):- ಕಸ್ತೂರಬಾ ...
Post by Kondi News
- Dec 20, 2019
ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ...
Post by Kondi News
- May 21, 2020
ಹಾಸನ/ಚನ್ನರಾಯಪಟ್ಟಣ: ಕೊರೋನಾ ಎಂಬ ಮಹಾಮಾರಿ ಭಾರತಕ್ಕೆ ...
Has no content to show!

About Us

ಕನ್ನಡ ಪತ್ರಿಕೋದ್ಯಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಿಂದೆ ಗೋಡೆ ಬರಹದ ಮೇಲೆ, ಕೈ ಬರಹದ ಮೂಲಕ, ನಂತರ ಅಚ್ಚುಮೊಳೆ ಜೋಡಿಸಿ ಪತ್ರಿಕೆ ಮುದ್ರಣ ಮಾಡುತ್ತಿದ್ದ ಕಾಲ ಸರಿದು, ಗಣಕೀಕೃತ ಪತ್ರಿಕೆ ದಶಕಗಳ ಕಾಲ ಆಕ್ರಮಣ ಮಾಡಿಕೊಂಡಿತ್ತು. ತಂತ್ರಜ್ಞಾನ ಬದಲಾವಣೆಯಾದಂತೆ ಮಾಧ್ಯಮಗಳು ಬದಲಾವಣೆಯಾಗುತ್ತಾ ಮುದ್ರಣ ಮಾಧ್ಯಮವನ್ನ ಹಿಂದಿಕ್ಕೂವ ಭರದಲ್ಲಿ ದೃಶ್ಯ ಮಾಧ್ಯಮ ಕಾಲಿಟ್ಟರೂ ಅದಕ್ಕೂ ಮೀರಿದ ತಂತ್ರಜ್ಞಾನ ಬದಲಾಗಿ ಮುದ್ರಣ ಮಾಧ್ಯಮ ಮತ್ತು ದೃಶ್ಯಮಾಧ್ಯಮಗಳನ್ನ ಸರಿಸುತ್ತ ಮತ್ತೊಂದು ಮಾಧ್ಯಮ ಸಾಗಿದೆ. ಮಾಧ್ಯಮದ ತಂತ್ರಜ್ಞಾನ ಬದಲಾದಂತೆ, ಅದೇ ರೀತಿ ಜನರ ಸುದ್ದಿ ಓದುವ ವಿಧಾನವೂ ಕೂಡ ಬದಲಾಗಿದೆ. ಇಂದು ಲಕ್ಷಾಂತರ ಜನ ತಮ್ಮ ಅಂಗೈಯಲ್ಲೇ ಸುದ್ದಿ ಓದುತ್ತಿದ್ದಾರೆ. ಹಾಗಂತ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿದೆ ಎಂದಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಾರಣ ಬದಲಾವಣೆ ಜಗದ ನಿಯಮ. ಇದಕ್ಕೆ ಸಾಕ್ಷಿಯೆಂಬಂತೆ ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಕೊಂಡಿನ್ಯೂಸ್ 6 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೊರೆಗೊಂಡಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. 5ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ "ಹಾಸನಾಂಬ ವಿಶೇಷಾಂಕ" ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನ ಹೊರತಂದು ಮೆಚ್ಚುಗೆಗೆ ಪಾತ್ರವಾಗಿದ್ದನ್ನ ತಮಗೆ ಹೇಳಬೇಕಿಲ್ಲ ಎಂದುಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ಜನರ ಅಭಿಲಾಷೆಯಂತೆ ಕೊಂಡಿ ನ್ಯೂಸ್ ಹಾಸನ ಮಾತ್ರವಲ್ಲದೇ ಇಂದಿನಿಂದ ತುಮಕೂರು, ಬೆಂಗಳೂರು ಚಾಮರಾಜನಗರ, ಕೋಲಾರ, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಅಂತರ್ಜಾಲ ವಾಹಿನಿಯಾಗಿ ಹೊರಹೊಮ್ಮುತ್ತಿದೆ. ವಿವಿಧ ಜಿಲ್ಲೆಗಳ ಪತ್ರಕರ್ತರೇ ಕಟ್ಟಿರುವ ಸುದ್ದಿ ವಾಹಿನಿಯು ತಮಗೆ ಖಂಡಿತ ಸನಿಹವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನಿಮ್ಮ ನಂಬಿಕೆಯನ್ನ ನಾವು ಉಳಿಸಿಕೊಂಡು ತಮ್ಮ ಅಭಿರುಚಿಗೆ ತಕ್ಕ ಸುದ್ದಿಗಳನ್ನ ಕೊಡುವಲ್ಲಿ ಖಂಡಿತ ಸಫಲತೆ ಕಾಣುತ್ತೇವೆ. ತಮ್ಮ ಬೆಂಬಲ, ಸಹಕಾರ ಸದಾ ಹೀಗೆ ಇರಲಿ....ಎಂಬ ಆಶಯ ನಮ್ಮದು.   www.kondinews.com 

  • ಸಂಪಾದಕ, ಕೊಂಡಿನ್ಯೂಸ್. 

Visitors Counter

01054743
Today
This Month
Last Month
All days
64
64
2198
1054743
Your IP: 46.229.168.140
2020-06-01 09:27

Newsletter

Subscribe with us your email
Top