ಹಾಸನ: ಆಹಾರದ ಚೀಲಗಳನ್ನು ...
ಹಾಸನ: ಸುಖಾ ಸುಮ್ಮನೆ ನಮ್ಮೂರಿನ
Hassan: ಜನತಾ ಕರ್ಪ್ಯೂ ಇಂದ ...
ಬೆಂಗಳೂರು: ಕೊರೊನಾ ಪ್ರಕರಣದ ...
ಬೆಂಗಳೂರು : ಕೋವಿಡ್ -19 ಪ್ರಕರಣದ
ದಕ್ಷಿಣ ಕನ್ನಡ:
ನವದೆಹಲಿ: ಹೆಮ್ಮಾರಿ ಕೊರೊನಾ ...
ಹಾಸನ/ಶ್ರವಣಬೆಳಗೊಳ: ಚಾಲಕನ ...
ಹುಬ್ಬಳಿ: ಕೆಲವು ವಾಹಿನಿಗಳ ವರದಿ
ಹಾಸನ/ಅರಸೀಕೆರೆ: ನಾಡಿನ ...
ತುಮಕೂರು: ಈಜಲು ತೆರಳಿದ ವೇಳೆ ...
ಕೊಡಗು: ವಿದೇಶಿ ಮಹಿಳೆಯೊಬ್ಬರು ...
ತುಮಕೂರು: ಸಚಿವ ಬಿ.ಸಿ.ಪಾಟೀಲ್ ...
 ಹಾಸನ:ಬಸ್ ನಿಲ್ದಾಣದ ಸ್ಪೀಡ್ ...
ಕೋಲಾರ : ಮಾರಕಾಸ್ತ್ರಗಳಿಂದ ಯುವಕನ
ಹಾಸನ: ಜಮೀನಿನ ವಿಚಾರಕ್ಕೆ ...
ತುಮಕೂರು:ಪರಿಸರ ಸಂರಕ್ಷಣೆ ಬಗ್ಗೆ
ಚನ್ನರಾಯಪಟ್ಟಣ: ಪಟ್ಟಣದ ...

ಸ್ಥಳೀಯ ಸುದ್ದಿ

ಇವತ್ತು ನೀವೇನಾದ್ರೂ ಸೋತ್ತಿದ್ದೀರಾ ಅಂದ್ರೆ ಅದು ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಂದ:ಮಾಜಿ ಶಾಸಕ ಪುಟ್ಟೇಗೌಡ

ಹಾಸನ: ಇವತ್ತು ನೀವೇನಾದ್ರೂ ಸೋತ್ತಿದ್ದೀರಾ ಅಂದ್ರೆ ಅದು ನಿಮ್ಮ ಮನೆಯ ಮಕ್ಕಳು ಮತ್ತು ಮೊಮ್ಮಕ್ಕಳಿಂದ ಅಂತ ಮೊದಲ ಬಾರಿಗೆ ಪುಟ್ಟೇಗೌಡ ದೇವೇಗೌಡರ ಪರ ಬ್ಯಾಟಿಂಗ್ ಮಾಡಿದರು.

ಮೈತ್ರಿ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರವನ್ನು ವಿರೋಧಿಸಿ ಇಂದು ಹಾಸನದಲ್ಲಿ ಚನ್ನರಾಯಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಬಳಿಕ ತನ್ನ ಭಾಷಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳ ಹಾಗೂ ಮೊಮ್ಮಕ್ಕಳ ವಿರುದ್ಧ ಗುಡುಗಿದರು.

ಜಿಲ್ಲೆಯ ಜನರು ಜಾತಿ ಮತ ಪಂಥ ಎನ್ನದೇ ತಮ್ಮನ್ನು ಕೆಂಪುಕೋಟೆಗೇರಿಸಿದ್ರು. ಆದ್ರೆ ಮತ್ತೆ ನಿಮ್ಮನ್ನ ಎಂಪಿಯಾಗದ ಹಾಗೆ ಮಾಡಿದ್ದು ನಿಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರು ಅಂತ ರೇವಣ್ಣ ಕುಟುಂಬದ ವಿರುದ್ಧ ಮಾತಿನ ಮೂಲಕ ಹರಿಹಾಯ್ದು, ನಿಮ್ಮ ತಾಳ್ಮೆ ನಿಮ್ಮ ಮಕ್ಕಳಿಗಿಲ್ಲ. ಅವರ ಮಾತನ್ನು ಕೇಳಿ ನಿರ್ಧಾರ ಕೈಗೊಳ್ಳಬೇಡಿ ಎಂದು ಎಚ್.ಡಿ.ದೇವೇಗೌಡರಿಗೆ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಸಲಹೆ ನೀಡಿದ್ರು.

ದೇವೇಗೌಡ್ರೇ ನೀವು ನೋಡಿದ ಹಿಂದಿನ ರಾಜಕೀಯ ಈಗಿಲ್ಲ. ವಿನಾಕಾರಣ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಬೆರಳು ಮಾಡಿ ತೋರಿಸಬೇಡಿ. ಕುಟುಂಬ ರಾಜಕಾರಣದಿಂದ ನೀವು ಎಂಪಿ ಆಗಲಿಲ್ಲ, ಆದ್ರೆ ನಿಮ್ಮ ಕುಡಿಗಳೇ ನಿಮ್ಮನ್ನು ಎಂಪಿ ಹಾಗೋದಿಕ್ಕೆ ಬಿಡಲಿಲ್ಲ. ಹಾಗಾಗಿ ಕುಟುಂಬ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ಲಾಲೂ ಪ್ರಸಾದ್ ಆದಿಯಾಗಿ ಈವರೆಗೆ ಕುಟುಂಬ ರಾಜಕಾರಣ ಮಾಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ. ನಿಮ್ಮ ಪಕ್ಷದ ಜಾತಕವನ್ನು ಗುಬ್ಬಿ ಶ್ರೀನಿವಾಸ, ಜಿಟಿ ದೇವೇಗೌಡ ಬಿಚ್ಚಿಡುತ್ತಿದ್ದಾರೆ. ಈಗಲಾದರೂ ಮನವರಿಕೆ ಮಾಡಿಕೊಳ್ಳಬೇಕು. ಕುಟುಂಬ ರಾಜಕಾರಣ ಒಳ್ಳೆಯದಲ್ಲ. ಪ್ರಜಾಪ್ರಭುತ್ವಕ್ಕೆ ಬೆಲೆ ನೀಡಿ ಕುಟುಂಬ ರಾಜಕಾರಣ ಮಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನು ಡಿ.ಕೆ.ಶಿವಕುಮಾರ್ ವಿರುದ್ಧ ಕೇವಲ 8 ಕೋಟಿಗಾಗಿ
ತನಿಖೆ ನಡೆಯುತ್ತಿದೆ ಆದರೆ ನಮ್ಮ ತಾಲ್ಲೂಕಿನ ಸಹಕಾರ ಸಂಘಗಳ ಸೊಸೈಟಿಯಲ್ಲಿ 800 ಕೋಟಿ ರೂ. ದರೋಡೆ ಮಾಡಿದ್ದಾರೆ. ಅವರ ವಿರುದ್ದ ಯಾವುದೇ ತನಿಖೆಯಿಲ್ಲ. ಮೈತ್ರಿ ಇದ್ದಾಗ ನಮ್ಮ ನಾಯಕರು ಏನೂ ಮಾತನಾಡಬೇಡಿ ಸುಮ್ಮನಿರಿ ಎಂದಿದ್ದರು. ಹೀಗಾಗಿ ಸುಮ್ಮನಿದ್ದೆ. ಈಗ ಮೈತ್ರಿ ಸರ್ಕಾರ ಬಿದ್ದು, ಹೋಗಿದೆ ನಾವು ಬೇರೆಯಾಗಿದ್ದೇವೆ, ಮಾತನಾಡುವ ಸಂದರ್ಭ. ನಿಮಗಿದ್ದ ಸಹನಾ ಶಕ್ತಿ ನಿಮ್ಮ ಮಕ್ಕಳಿಗಿಲ್ಲ. ಡಿ.ಕೆ.ಶಿವಕುಮಾರ್ ನಿಮಗಾಗಿ ಎಷ್ಟು ಹೊಡೆದಾಡಿದ್ರು. ಆದ್ರೆ ಕುಮಾರಸ್ವಾಮಿ ಅವರು ಹೋರಾಟಕ್ಕೆ ಬರಲಿಲ್ಲ ಎಂದು ಪರೋಕ್ಷವಾಗಿ ರೇವಣ್ಣ, ಭವಾನಿ ಮತ್ತು ಪ್ರಜ್ವಲ್ ವಿರುದ್ದ ವಾಕ್ಪ್ರಾಹರ ನಡೆಸಿದರು.

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Mar 29, 2020
ಹಾಸನ: ಆಹಾರದ ಚೀಲಗಳನ್ನು ಸಾಗಿಸುತ್ತಿದ್ದೇವೆ ಎಂದು ಕೂಲಿ ...
Post by Kondi News
- Dec 20, 2019
ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ...
Post by shashi
- Aug 14, 2019
  ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ...
Has no content to show!

About Us

ಕನ್ನಡ ಪತ್ರಿಕೋದ್ಯಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಿಂದೆ ಗೋಡೆ ಬರಹದ ಮೇಲೆ, ಕೈ ಬರಹದ ಮೂಲಕ, ನಂತರ ಅಚ್ಚುಮೊಳೆ ಜೋಡಿಸಿ ಪತ್ರಿಕೆ ಮುದ್ರಣ ಮಾಡುತ್ತಿದ್ದ ಕಾಲ ಸರಿದು, ಗಣಕೀಕೃತ ಪತ್ರಿಕೆ ದಶಕಗಳ ಕಾಲ ಆಕ್ರಮಣ ಮಾಡಿಕೊಂಡಿತ್ತು. ತಂತ್ರಜ್ಞಾನ ಬದಲಾವಣೆಯಾದಂತೆ ಮಾಧ್ಯಮಗಳು ಬದಲಾವಣೆಯಾಗುತ್ತಾ ಮುದ್ರಣ ಮಾಧ್ಯಮವನ್ನ ಹಿಂದಿಕ್ಕೂವ ಭರದಲ್ಲಿ ದೃಶ್ಯ ಮಾಧ್ಯಮ ಕಾಲಿಟ್ಟರೂ ಅದಕ್ಕೂ ಮೀರಿದ ತಂತ್ರಜ್ಞಾನ ಬದಲಾಗಿ ಮುದ್ರಣ ಮಾಧ್ಯಮ ಮತ್ತು ದೃಶ್ಯಮಾಧ್ಯಮಗಳನ್ನ ಸರಿಸುತ್ತ ಮತ್ತೊಂದು ಮಾಧ್ಯಮ ಸಾಗಿದೆ. ಮಾಧ್ಯಮದ ತಂತ್ರಜ್ಞಾನ ಬದಲಾದಂತೆ, ಅದೇ ರೀತಿ ಜನರ ಸುದ್ದಿ ಓದುವ ವಿಧಾನವೂ ಕೂಡ ಬದಲಾಗಿದೆ. ಇಂದು ಲಕ್ಷಾಂತರ ಜನ ತಮ್ಮ ಅಂಗೈಯಲ್ಲೇ ಸುದ್ದಿ ಓದುತ್ತಿದ್ದಾರೆ. ಹಾಗಂತ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿದೆ ಎಂದಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಾರಣ ಬದಲಾವಣೆ ಜಗದ ನಿಯಮ. ಇದಕ್ಕೆ ಸಾಕ್ಷಿಯೆಂಬಂತೆ ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಕೊಂಡಿನ್ಯೂಸ್ 6 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೊರೆಗೊಂಡಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. 5ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ "ಹಾಸನಾಂಬ ವಿಶೇಷಾಂಕ" ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನ ಹೊರತಂದು ಮೆಚ್ಚುಗೆಗೆ ಪಾತ್ರವಾಗಿದ್ದನ್ನ ತಮಗೆ ಹೇಳಬೇಕಿಲ್ಲ ಎಂದುಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ಜನರ ಅಭಿಲಾಷೆಯಂತೆ ಕೊಂಡಿ ನ್ಯೂಸ್ ಹಾಸನ ಮಾತ್ರವಲ್ಲದೇ ಇಂದಿನಿಂದ ತುಮಕೂರು, ಬೆಂಗಳೂರು ಚಾಮರಾಜನಗರ, ಕೋಲಾರ, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಅಂತರ್ಜಾಲ ವಾಹಿನಿಯಾಗಿ ಹೊರಹೊಮ್ಮುತ್ತಿದೆ. ವಿವಿಧ ಜಿಲ್ಲೆಗಳ ಪತ್ರಕರ್ತರೇ ಕಟ್ಟಿರುವ ಸುದ್ದಿ ವಾಹಿನಿಯು ತಮಗೆ ಖಂಡಿತ ಸನಿಹವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನಿಮ್ಮ ನಂಬಿಕೆಯನ್ನ ನಾವು ಉಳಿಸಿಕೊಂಡು ತಮ್ಮ ಅಭಿರುಚಿಗೆ ತಕ್ಕ ಸುದ್ದಿಗಳನ್ನ ಕೊಡುವಲ್ಲಿ ಖಂಡಿತ ಸಫಲತೆ ಕಾಣುತ್ತೇವೆ. ತಮ್ಮ ಬೆಂಬಲ, ಸಹಕಾರ ಸದಾ ಹೀಗೆ ಇರಲಿ....ಎಂಬ ಆಶಯ ನಮ್ಮದು.   www.kondinews.com 

  • ಸಂಪಾದಕ, ಕೊಂಡಿನ್ಯೂಸ್. 

Newsletter

Subscribe with us your email
Top