ಕೋಲಾರ : ಮಾರಕಾಸ್ತ್ರಗಳಿಂದ ಯುವಕನ
ಹಾಸನ: ಜಮೀನಿನ ವಿಚಾರಕ್ಕೆ ...
ತುಮಕೂರು:ಪರಿಸರ ಸಂರಕ್ಷಣೆ ಬಗ್ಗೆ
ಚನ್ನರಾಯಪಟ್ಟಣ: ಪಟ್ಟಣದ ...
ಹಾಸನ: ವಿದ್ಯುತ್ ತಂತಿ ತಗಲಿ ...
ಕೋಲಾರ: ಸಾಲಭಾದೆ ತಾಳಲಾರದೆ ...
ಹಾಸನ: ಚಿರತೆಯೊಂದು ಕರುವಿನ ಮೇಲೆ
ಕೊಡಗು: ಈಗ ಬೇಸಿಗೆ ಕಾಲ ಎಲ್ಲರೂ
ಹಾಸನ: ಪುಲ್ವಾಮಾದಲ್ಲಿ ಭಾರತೀಯ ...
ಸಕಲೇಶಪುರ: ಗ್ಯಾಸ್ ಸಿಲಿಂಡರ್ ...
ಕೊಡಗು: ಜಿಲ್ಲೆಯಲ್ಲಿ ಹುಲಿ ದಾಳಿ
ಕೊಡಗು: ಅಪರೂಪದ ಎರಡು ತಲೆಯ ...
ತುಮಕೂರು: ಹಲವು ದಿನಗಳಿಂದ ...
ತುಮಕೂರು/ಗುಬ್ಬಿ: ಚಿರತೆ ದಾಳಿಗೆ
ತುಮಕೂರು/ಹೆಬ್ಬೂರು:
ಹಾಸನ: ಅಪಘಾತ ಪ್ರಕರಣಗಳು ...
ಕೋಲಾರ: ಖಚಿತ ‌ಮಾಹಿತಿ ಮೇರೆಗೆ ...
ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ

ಸ್ಥಳೀಯ ಸುದ್ದಿ

ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಎಎಸ್ಪಿ ನಂದಿನಿ ಚಾಲನೆ

ಹಾಸನ: ಸುರಕ್ಷಿತ ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಎನ್. ನಂದಿನಿ ತಿಳಿಸಿದ್ರು. 

ಹಾಸನ ನಗರದ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಜ.11 ರಿಂದ 17 ರವರಗೆ ಆಯೋಜಿಸಿರುವ 31 ನೇ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಜಾಥಾಕ್ಕೆ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ್ರು. 

ಅಫಘಾತಗಳು ದಿನೇ-ದಿನೇ ಹೆಚ್ಚಾಗುತ್ತಿದ್ದು ಯುವಕರು ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದ ಸವಾರರಿಗೆ ದಂಡ ವಿಧಿಸುವುದರ ಬದಲಾಗಿ ಗುಲಾಬಿ ಹೂ ಕೊಡುವುದರ ಮೂಲಕ ಹೆಲ್ಮೆಟ್ ಧರಿಸಿ ಸುರಕ್ಷತೆಯಿಂದ ವಾಹನ ಚಾಲನೆ ಮಾಡುವಂತೆ ಸೂಚಿಸಿದ ಅವರು 2019 ನೇ ಸಾಲಿನಲ್ಲಿ ರಸ್ತೆ ಸುರಕ್ಷತೆಯನ್ನು ಪಾಲಿಸದೆ 1500 ಮಂದಿ ಅಪಘಾತದಲ್ಲಿ ಗಾಯಗೊಂಡರೆ 451 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 

ಇನ್ನು ಚಾಲಕರ ಬೇಜವಾಬ್ದಾರಿಯಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿರೋ ಉದಾಹರಣೆಗಳನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಹಾಗಾಗಿ ಚಾಲಕರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಿವುದರ ಜೊತೆಗೆ ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು ಎಂದರು. 

ಪೊಲೀಸ್ ವೃತ್ತ ನಿರೀಕ್ಷಕರಾದ ಕೃಷ್ಣರಾಜು ಅವರು ಮಾತನಾಡಿ ರಸ್ತೆ ಸುರಕ್ಷಾ ಸಪ್ತಾಹವು ಒಂದು ವಾರಗಳ ಕಾಲ ನಡೆಯಲಿದ್ದು ವಾಹನ ಚಾಲಕರಿಗೆ ಅಪಘಾತಗಳು ತಡೆಗಳ ಬಗ್ಗೆ ಅರಿವನ್ನು ಮೂಡಿಸಲಾಗುವುದು. ಕ್ಷಣಿಕವಾದ ನಿರ್ಲಕ್ಷೆತೆಯಿಂದ ತಮ್ಮ ಜೀವನವನ್ನು ಬಲಿಕೊಟ್ಟು ಜೊತೆಗೆ ತಮ್ಮ ಅವಲಂಬಿತರನ್ನೂ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಟುಂಬದವರನ್ನ ತೊಂದರೆಗೀಡು ಮಾಡುತ್ತಿರುವುದರ ಹಿನ್ನಲೆಯಲ್ಲಿ ಜಾಗೃತಿಯ ಮೂಲಕ ಅಪಘಾತ ತಪ್ಪಿಸುವ ಕಾರ್ಯವಾಗಬೇಕಿದೆ ಎಂದ್ರು.  

ರಸ್ತೆ ಸುರಕ್ಷತೆ ಜೀವನ ರಕ್ಷೆ ಎಂಬ ಘೋಷಣೆಯೊಂದಿಗೆ ಪೊಲೀಸರು ನೀಡಿದ ಕೆಲವು ಸೂಚನೆಗಳು:

 • ವಾಹನ ಚಾಲನೆ ಮಾಡುವಾಗ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ವಾಹನ ಚಲಾಯಿಸಬೇಕು.
 • ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ.
 • ಕಾರು, ಜೀಪಿನಂತಹ ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಿ.
 • ಚಾಲನೆ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಸಬೇಡಿ.
 • ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಅಫಘಾತಗಳನ್ನು ತಪ್ಪಿಸಿ.
 • ಸಂಚಾರದ ವೇಳೆ ಪಥ ನಿಯಮಗಳ ಪಾಲಿಸಿ.
 • ಸಿಗ್ನಲ್‍ಗಳಲ್ಲಿ ಜೀಬ್ರಾ ಕ್ರಾಸಿಂಗ್ ಮೇಲೆ ವಾಹನಗಳನ್ನು ನಿಲ್ಲಿಸಬೇಡಿ.
 • ವಾಹನಗಳ ನಡುವೆ ಸುರಕ್ಷಿತ ಅಂತರವಿರಲಿ. ರಾತ್ರಿ ವೇಳೆ ಪ್ರಖರ ದೀಪಗಳನ್ನು ಬಳಸಬೇಡಿ.
 • ಸಂಚಾರ ದೀಪಗಳನ್ನು ಉಲ್ಲಂಘಿಸಬೇಡಿ.
 • ಹಳದಿ ದೀಪ ದಾಟಬೇಡಿ-ಎಡಭಾಗದಿಂದ ಮುನ್ನುಗ್ಗಬೇಡಿ.
 • ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಕೊಡಬೇಡಿ.
 • ವಾಹನ ಚಲಾಯಿಸುವವರು ಚಾಲನಾ ಪರವಾನಗಿ, ವಾಹನ ವಿಮೆ, ವಾಹನದ ದಾಖಲಾತಿಗಳನ್ನು ಹೊಂದಿರಬೇಕು.
 • ವಾಹನದ ನೊಂದಣಿ ಫಲಕದ ಮೇಲೆ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಸಂಘ, ಸಂಸ್ಥೆಗಳಂತಹ ಹೆಸರನ್ನ ವಾರದೊಳಗೆ ತೆಗೆಯಬೇಕು.

ಎಂಬ ಸೂಚನೆಗಳ ಫಲಕಗಳನ್ನ ಹಿಡಿದು ನಗರದ ಹೇಮಾವತಿ ಪ್ರತಿಮೆಯಿಂದ ಹೊರಟು ಆರ್.ಸಿ.ರಸ್ತೆ, ಬಿಗ್ ಬಜಾರ್, ಬಿ.ಎಂ.ರಸ್ತೆ ಮೂಲಕ ಎನ್.ಆರ್.ವೃತ್ತದಲ್ಲಿ ಜಾಥಾ ಅಂತ್ಯಗೊಂಡಿತು. ಐ.ಪಿ.ಎಸ್. ಅಧಿಕಾರಿ ಅಂಶುಕುಮಾರ್, ನಗರ ಸಂಚಾರಿ ಸಹಾಯಕ ಆರಕ್ಷಕರಾದ ಪ್ರಮೋದ್ ಕುಮಾರ್, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಕೊಂಡಿನ್ಯೂಸ್, ಹಾಸನ.

Share this article

Leave a comment

Make sure you enter the (*) required information where indicated. HTML code is not allowed.

Media News

 • Latest
 • Most popular
 • Trending
 • Most commented
Post by Kondi News
- Feb 17, 2020
ಕೋಲಾರ : ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ...
Post by Kondi News
- Dec 20, 2019
ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ...
Post by Kondi News
- Sep 09, 2019
ಹಾಸನ: ಕೋಮುವಾದಿ ಪಕ್ಷದ ವಿಷಜಂತುವಾಗಿರುವ ...
Has no content to show!

About Us

ಕನ್ನಡ ಪತ್ರಿಕೋದ್ಯಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಿಂದೆ ಗೋಡೆ ಬರಹದ ಮೇಲೆ, ಕೈ ಬರಹದ ಪತ್ರಿಕೆ, ಅಚ್ಚುಮೊಳೆ ಜೋಡಿಸಿ ಮುದ್ರಣ, ಗಣಕೀಕೃತ ಪತ್ರಿಕೆ, ಮುದ್ರಣ ಮಾಧ್ಯಮ ಬದಲಾದಂತೆ, ಅದೇ ರೀತಿ ಜನರ ಸುದ್ದಿ ಓದುವ ವಿಧಾನವೂ ಕೂಡ ಬದಲಾಗಿದೆ. ಇಂದು ಲಕ್ಷಾಂತರ ಜನ ತಮ್ಮ ಅಂಗೈಯಲ್ಲೇ ಸುದ್ದಿ ಓದುತ್ತಿದ್ದಾರೆ. ಹಾಗಂತ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿದೆ ಎಂಬಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಾರಣ ಬದಲಾವಣೆ ಜಗದ ನಿಯಮ. ಇದಕ್ಕೆ ಸಾಕ್ಷಿಯೆಂಬಂತೆ ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಕೊಂಡಿನ್ಯೂಸ್ 6 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೊರೆಗೊಂಡಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. 5ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ "ಹಾಸನಾಂಬ ವಿಶೇಷಾಂಕ" ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನ ಹೊರತಂದು ಮೆಚ್ಚುಗೆಗೆ ಪಾತ್ರವಾಗಿದ್ದನ್ನ ತಮಗೆ ಹೇಳಬೇಕಿಲ್ಲ ಎಂದುಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ಜನರ ಅಭಿಲಾಷೆಯಂತೆ ಕೊಂಡಿ ನ್ಯೂಸ್ ಹಾಸನ ಮಾತ್ರವಲ್ಲದೇ ಇಂದಿನಿಂದ ತುಮಕೂರು, ಬೆಂಗಳೂರು ಚಾಮರಾಜನಗರ, ಕೋಲಾರ, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಅಂತರ್ಜಾಲ ವಾಹಿನಿಯಾಗಿ ಹೊರಹೊಮ್ಮುತ್ತಿದೆ. ಪತ್ರಕರ್ತರೇ ಕಟ್ಟಿರುವ ಈ ಸುದ್ದಿ ವಾಹಿನಿಯನ್ನು ತಾವು ಬೆಳೆಸುತ್ತಿರಾ. . ? ಹರಸುತ್ತಿರಾ. . . ? ಕೈ ಹಿಡಿಯುತ್ತೀರಾ. . ? ಎಂಬ ನಂಬಿಕೆ ನಮ್ಮದು. www.kondinews.com ಕ್ಲಿಕ್ ಮಾಡಿ, ಲೈಕ್ ಮಾಡಿ. . .  ಶೇರ್ ಮಾಡಿ. . . ಸಬ್ಸ್ಕ್ರೈಬ್ ಮಾಡಿರಿ.. . 

ಸಂಪಾದಕ, ಕೊಂಡಿನ್ಯೂಸ್.

Newsletter

Subscribe with us your email
Top