ಹಾಸನ: ಸುರಕ್ಷಿತ ವಾಹನ ಚಾಲನೆ ...
ಹಾಸನ: ಒಬ್ಬ ಮನುಷ್ಯ ಎಷ್ಟು ...
ಶ್ರವಣಬೆಳಗೊಳ: ಜನವರಿ ತಿಂಗಳಲ್ಲಿ
ತುಮಕೂರು : ಪ್ರತಿಯೊಬ್ಬರು ...
ಶ್ರವಣಬೆಳಗೊಳ: ಯುವ ಜನತೆ ...
ಹಾಸನ: ದೇಶದಲ್ಲಿ ಕೆಲ ನಾಯಕರನ್ನು
ಬೆಂಗಳೂರು: ಯಾವುದೇ ಉತ್ಸವ ...
ಹಾಸನ: ಒಂದು ಫಿಚ್ಚರ್ ತೆರೆಕಂಡರೆ
ಹಾಸನ: ಕೇವಲ ಕಾಮಗಾರಿ ಮಾಡುವ ಮೂಲಕ
ಹಾಸನ/ಬೇಲೂರು: ನೋಟಿಸ್ ಜಾರಿ ...
ಅರಸಿಕೆರೆ: ಶ್ರೀ ಸಚಿದಾನಂದ ...
ಹಾಸನ: ಹಾಸನ ತಾಲೂಕಿನ ಗ್ರಾಮೀಣ ...
ಹಾಸನ: ಎಲ್ಲರನ್ನೂ ಮಂತ್ರಿ ...
ಹಾಸನ: ಅಂತೂ ಇಂತೂ ಕೊನೆಗೂ ಜನರ ...
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ವಿದ್ಯಾರ್ಥಿಗಳು ಗಟ್ಟಿ ಇಟ್ಟಿಗೆಯಂತಾಗಬೇಕು.

ಹಾಸನ: ವಿದ್ಯಾರ್ಥಿಗಳು ಗಟ್ಟಿ ಇಟ್ಟಿಗೆಯಾದಾಗ ಆಗ ಮಾತ್ರ ಒಂದು ಅಮೂಲ್ಯವಾದ ಕಟ್ಟಡ ನಿರ್ಮಾಣವಾಗಲು ಸಾಧ್ಯ ಎಂದು ಎನ್‌ಡಿಆರ್‌ಕೆ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕ ಹಾಗೂ ರಾಸೇಯೋ ಅಧಿಕಾರಿಯಾದ ಡಾ.ನೀಲಕಂಠ ಮನ್ವಚಾರ್ ಅವರು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ(ಸ್ವಾಯತ್ತ) ಸಭಾಂಗಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ (ಸುವರ್ಣ ಮಹೋತ್ಸವ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಸೇಯೋ ವಿದ್ಯಾರ್ಥಿಗಳು ಎಲ್ಲರಿಗಾಗಿ ನಾನು ನನಗಾಗಿ ನಾನಲ್ಲ ಎಂಬ ಅಭಿಲಾಷೆ ಉಳ್ಳವರಾಗಿರಬೇಕು. ರಾಸೇಯೋ ಒಂದು ತರಬೇತಿಯಾಗಿದ್ದು, ಜೇನನ್ನು ತಾವುಗಳು ಸವಿಯುವುದರ ಜತೆಗೆ ಇತರರಿಗೂ ಅದರ ಸಿಹಿಯನ್ನು ಹಂಚುವ ಮನೋಭಾವ ಉಳ್ಳವರಾಗಿರಬೇಕು ಎಂದು ಅವರು ಹೇಳಿದರು.

ರಾಸೇಯೋ ಕಾರ್ಯಕ್ರಮ ಘಟಕ ಒಂದರ ಅಧಿಕಾರಿ ಪ್ರೊ.ಕೆ.ವಿ.ಪಾರ್ಥೇಶ್ ಅವರು, ಎನ್‌ಎಸ್‌ಎಸ್‌ನಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅಂತೆಯೇ ಎನ್‌ಎಸ್‌ಎಸ್ ಬ್ಯಾಡ್ಜ್ ತೊಟ್ಟಾಕ್ಷಣ ಸಮಾಜದ ಒಳಿತಿಗಾಗಿ ಶ್ರಮಿಸುತ್ತೇನೆಂದು ಸಂಕಲ್ಪ ಮಾಡಬೇಕು. ಸಂಕುಚಿತ ಮನೋಭಾವ ತೊಡೆದು ಹಾಕಿ ಎಲ್ಲರೊಟ್ಟಿಗೂ ವಿಶಾಲ ಮನೋಭಾವದಿಂದ ತೊಡಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುವುದರ ಜೊತೆಗೆ, ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಸಿ.ರಾಜಪ್ಪ ಅಧ್ಯಕ್ಷತೆ ವಹಿಸಿದ್ದು, ರಾಸೇಯೋ ಕಾರ್ಯಕ್ರಮ ಘಟಕ ೨ರ ಅಧಿಕಾರಿ ಪ್ರೊ.ಎಚ್.ಎಸ್.ಶೇಖರ್ ಹೊಡೆನೂರು ಪ್ರಾಸ್ತಾವಿಕ ನುಡಿಯನ್ನಾಡಿದರು. ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಉದಯಕುಮಾರ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಎ.ವಿ.ರಶ್ಮಿ ಅರಕಲಗೂಡು ಹಾಗೂ ಜಯಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

kondinews, Hassan

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Jan 13, 2020
ಹಾಸನ: ಸುರಕ್ಷಿತ ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Nov 05, 2019
ಹಾಸನ: ಮನೆ ಕಟ್ಟುವ ವಿಚಾರಕ್ಕೆ ಅಣ್ಣ ನೀಡುತ್ತಿದ್ದ ...
Has no content to show!

About

Newsletter

Subscribe with us your email
Top