ಹಾಸನ: ನಗರದ ಪೊದಾರ್ ಜಂಬೋ ಕಿಡ್ಸ್ ಶಾಲೆಯಲ್ಲಿ ಅ.2 ರಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನು "ಬನ್ನಿ ಮಕ್ಕಳೇ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಬಗ್ಗೆ ಸ್ವಲ್ಪ ತಿಳಿಯೋಣ" ಎಂಬ ವಿಷಯದ ಮೇಲೆ ಆಯೋಜಿಸಲಾಗಿತ್ತು.
ಬೀಜದಿಂದ ಗಿಡ ಮೊಳಕೆ ಒಡೆಯುವ ಪ್ರಕ್ರಿಯೆ, ಜೈ ಜವಾನ್ ಜೈ ಕಿಸಾನ್ ಕಾರ್ನರ್, ಉಪ್ಪಿನ ಸತ್ಯಾಗ್ರಹ ,ಖಾದಿ ಉಡುಪುಗಳನ್ನು ಧರಿಸಿ ರಾಂಪ್ ವಾಕ್ ,ಗಾಂಧೀಜಿಯ ಮೂರು ಬುದ್ಧಿವಂತ ಕೋತಿಗಳು,ಸ್ವಚ್ಛ ಭಾರತ್ ಅಭಿಯಾನ ಹೀಗೆ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಶಾಲಾ ಮಕ್ಕಳು ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ವೇಷಭೂಷಣವನ್ನು ಧರಿಸಿ ಕಾರ್ಯಕ್ರಮವನ್ನು ಇನ್ನಷ್ಟು ಮೆರುಗುಗೊಳಿಸಿದರು.ಜತೆಗೆ ಪೆನ್ಸಿಲನ್ನು ಹೇಗೆ ಸುರಕ್ಷಿತವಾಗಿ ಉಪಯೋಗಿಸಬೇಕೆಂದು ಕೈಗೊಂಬೆ ಪ್ರದರ್ಶನವನ್ನು ನಡೆಸಲಾಗಿತ್ತು.