ಕೋಲಾರ: ಜಿಲ್ಲೆಯಲ್ಲಿ ಕೋವಿಡ್ ...
ಕೋಲಾರ : ಇಡೀ ಜಗತ್ತನ್ನೇ ...
ಹಾಸನ: ಕೋವಿಡ್-19 ತಡೆಗಟ್ಟುವ ...
ಹಾಸನ: ಕೋವಿಡ್-19 ಬಗ್ಗೆ ಯಾವುದೇ
ಅರಸೀಕೆರೆ: ಸಂಕಷ್ಟದಲ್ಲಿರುವ ...
ಹಾಸನ:ಜಿಲ್ಲೆಯಲ್ಲಿ ಹೊಸದಾಗಿ 15
ಹಾಸನ: ಕೋವಿಡ್-19 ಸೋಂಕು ...
ಹಾಸನ.ಮೇ.30.(ಕರ್ನಾಟಕ ವಾರ್ತೆ):-
ಹಾಸನ: ಉದ್ಯೋಗ ಖಾತರಿ ಯೋಜನೆಯಡಿ
ಹಾಸನ: ಮುಂಬೈನಿಂದ ಹಾಸನಕ್ಕೆ ...
ಹಾಸನ: ಈಯಮ್ಮನ ಹತ್ರ ಮತ್ತು ...
ಸೋಮವಾರಪೇಟೆ: ತಾಲ್ಲೂಕಿನ ಯಡವನಾಡು
ಹಾಸನ: ಹೊರಗಡೆಯಿಂದ ಬಂದವರನ್ನು ...
ಹಾಸವ: ಹಾಸನದಲ್ಲಿ ದಿನದಿಂದ ...
ಹಾಸನ: ಹಾಸನದಲ್ಲಿ ಬೆಳಗ್ಗೆ ...
ಹಾಸನ: ಒಂದು ಕಡೆ ಲಾಕ್ಡೌನ್ ಓಪನ್
ಮಂಡ್ಯ:ರಾತ್ರಿ ವೇಳೆ ದಿಢೀರ್ ...
ತುಮಕೂರು : ಸಾರ್ವಜನಿಕರಿಗೆ ಭೀತಿ
ಪ್ರಾಕೃತ ಭಾಷೆಯು ಸಂಸ್ಕೃತ, ಗ್ರೀಕ್, ಲ್ಯಾಟಿನ್ನಷ್ಟು ಹಳೆಯದಾಗಿದೆ: ಪದ್ಮಾಶೇಖರ್

ಶ್ರವಣಬೆಳಗೊಳ/ಹಾಸನ: ಪ್ರಾಕೃತ ಭಾಷೆಯು ಸಂಸ್ಕೃತ, ಗ್ರೀಕ್, ಲ್ಯಾಟಿನ್‌ನಷ್ಟು ಹಳೆಯದಾಗಿದೆ: ಪದ್ಮಾಶೇಖರ್ ದ್ದು, ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್ ಹೇಳಿದರು.

ಶ್ರೀ ಧವಲತೀರ್ಥಂನ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯಲ್ಲಿ ಆಯೋಜಿಸಿದ್ದ 14ನೇ ಘಟಿಕೋತ್ಸವ ಭಾಷಣದಲ್ಲಿ ಮಾತನಾಡಿದ ಅವರು, ಪ್ರಾಕೃತ ಭಾಷೆಯು ಸಂಸ್ಕೃತದಿಂದ ಹುಟ್ಟಿದ್ದಲ್ಲ. ಅದೊಂದು ಸ್ವತಂತ್ರ ಭಾಷೆಯಾಗಿದ್ದು, ಆರ್ಯರು ಭಾರತಕ್ಕೆ ಬರುವ ಮೊದಲೇ ಇಲ್ಲಿನ ಮೂಲ ನಿವಾಸಿಗಳ ಆಡುಭಾಷೆಯಾಗಿತ್ತು. ಯಾವುದೇ ಒಂದು ಭಾಷೆಯು ಆಡುಭಾಷೆಯಿಂದ ಶಿಷ್ಟರೂಪ ಪಡೆಯುತ್ತದೆಯೇ ಹೊರತು ಶಿಷ್ಟರೂಪದಿಂದ ಆಡುಭಾಷೆಯಾಗುವುದಿಲ್ಲ ಎಂಬುದನ್ನು ವಿಶ್ವದ ಭಾಷಾ ತಜ್ಞರೇ ಒಪ್ಪಿದ್ದಾರೆ ಎಂದರು.

ಭಾರತದಲ್ಲಿ ಸಂಸ್ಕೃತ ಭಾಷೆಗಾಗಿ 17 ವಿಶ್ವವಿದ್ಯಾನಿಲಯಗಳಿವೆ. ಆದರೆ ಸಂಸ್ಕೃತಕ್ಕಿಂತಲೂ ಹಳೆಯದಾದ ದೇಸಿ ಭಾಷೆ ಪ್ರಾಕೃತಕ್ಕೆ ಒಂದೇ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಇಲ್ಲದಿರುವುದು ಪರಂಪರೆ ಜ್ಞಾನಕ್ಕೆ ತಾರತಮ್ಯ, ಭಾಷಾಬೇಧತ್ವ, ಜನಾಂಗೀಯ ಮುಜುಗರ ಹಾಗೂ ರಾಜಕಾರಣ ಪ್ರಭಾವದ ದುರ್ಬಲತೆಯೇ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಣದ ದಾಹ ಹಾಗೂ ವಿದೇಶಿ ಸಂಸ್ಕೃತಿಯ ವ್ಯಾಮೋಹ ಇಂದಿನ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದೆ. ಇದರಿಂದ ಇತಿಹಾಸದ ಅರಿವು ಹಾಗೂ ಸಾಂಸ್ಕೃತಿಕ ಜ್ಞಾನ ಕಡಿಮೆಯಾಗುತ್ತಿದೆ. ಆದರೆ ಪಾಶ್ಚಿಮಾತ್ಯರು ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಒಪ್ಪಿ ಅಳವಡಿಸಿಕೊಳ್ಳುತ್ತಿದ್ದಾರೆ. ಜರ್ಮನಿ, ಅಮೇರಿಕಾ, ರಷ್ಯಾ, ಫ್ರಾನ್ಸ್, ಚೀನಾ, ನೈರೋಬಿ, ಆಫ್ರಿಕಾ, ಇಥಿಯೋಪಿಯಾದಂತ ಅನೇಕ ರಾಷ್ಟ್ರಗಳು ಪ್ರಾಕೃತ ಭಾಷೆ ಹಾಗೂ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚು ಮಹತ್ವ ಕೊಡುತ್ತಿವೆ ಎಂದು ತಿಳಿಸಿದರು. 

ಕನ್ನಡ ಪ್ರಾಕೃತ ಸಂಬಂಧವಾಗಿ ತಲಸ್ಪರ್ಶಿ ಅಧ್ಯಯನ, ಭಾರತೀಯ ಭಾಷೆಗಳ ಮೇಲೆ ಪ್ರಾಕೃತದ ಪ್ರಭಾವ ಗುರುತಿಸುವಿಕೆ, ಪ್ರಾಕೃತ ಭಾಷೆಯ ಮೂಲ ಕೃತಿಗಳನ್ನು ಕನ್ನಡ, ಇಂಗ್ಲೀಷ್ ಹಾಗೂ ಭಾರತೀಯ ಇತರೆ ಭಾಷೆಗಳಿಗೆ ಅನುವಾದಿಸುವ ಕೆಲಸ, ವೈದಿಕ ಭಾಷೆಯಲ್ಲಿ ಸಂಸ್ಕೃತೀಕರಣಗೊಂಡಿರುವ ಪ್ರಾಕೃತ ಪ್ರಭಾವದ ಹುಡುಕಾಟ, ಪ್ರಾಕೃತ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಹಾಗೂ ಪ್ರಾಕೃತ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಜೀವ ತುಂಬುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು. 

ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ ಪ್ರೊ. ಬಿ.ಎಸ್.ಸಣ್ಣಯ್ಯ ಮಾತನಾಡಿ, ಪ್ರಾಚೀನ ಜೈನ ಸಾಹಿತ್ಯವು ಸಮೃದ್ಧವಾಗಿರುವ ಪ್ರಾಕೃತ ಭಾಷೆಯನ್ನು ಸಾಮಾನ್ಯ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಈ ಸಂಶೋಧನಾ ಸಂಸ್ಥೆಯನ್ನು ನಿರ್ಮಾಣ ಮಾಡಿ ಶ್ರಮಿಸುತ್ತಿರುವುದು ಈ ದೇಶದ ಪ್ರಾಚೀನ ಭಾಷೆಗೆ ನೀಡಿದ ಬಹು ದೊಡ್ಡ ಗೌರವವಾಗಿದೆ ಎಂದು ಅಭಿಪ್ರಾಯಪಟ್ಟರು. 

ಶ್ರವಣಬೆಳಗೊಳದ ಶ್ರೀ ದಿಗಂಬರ ಜೈನ ಮಠದಲ್ಲಿ ಪ್ರಾಚೀನ ಕಾಲದಿಂದಲೂ ಸಂಗ್ರಹವಾಗಿದ್ದ ಓಲೆಗರಿ ಗ್ರಂಥ ಹಾಗೂ ಪ್ರಾಕೃತ, ಸಂಸ್ಕೃತ, ಕನ್ನಡ ಭಾಷೆಯ ಸುಮಾರು ಹತ್ತು ಸಾವಿರ ಹಸ್ತಪ್ರತಿಗಳ ಸಂರಕ್ಷಣೆ, ಪರಿಶೀಲನೆ, ಪರಿಷ್ಕರಣೆಯೊಂದಿಗೆ ವಿಸ್ತೃತ 7 ಸಂಪುಟಗಳು ಪ್ರಕಟಣೆಗೊಂಡು, ಈಗ 8 ನೇ ಸಂಪುಟ ಪ್ರಕಟಣೆ ಸಿದ್ದಗೊಂಡಿದೆ. ಜತೆಗೆ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂದ್ರಪ್ರದೇಶಗಳಲ್ಲಿ ದೊರೆತಿರುವ 22 ಸಾವಿರ ಜೈನಹಸ್ತಪ್ರತಿಗಳ ಮಾಹಿತಿ ಪಟ್ಟಿಕೆಗಳನ್ನು ತಯಾರಿಸಿ ಕೇಂದ್ರದ ರಾಷ್ಟ್ರೀಯ ಹಸ್ತಪ್ರತಿ ಅಭಿಯಾನಕ್ಕೆ ಒದಗಿಸಲಾಗಿದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎಂ.ಜೆ.ಇಂದ್ರಕುಮಾರ್, ಪ್ರಭಾರ ಕುಲಸಚಿವ ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ, ಮ್ಯಾನೇಜಿಂಗ್ ಟ್ರಸ್ಟಿ ದೇವೇಂದ್ರ ಬಿ.ಪಾಕಿ, ಕಾರ್ಯನಿರ್ವಹಣಾಧಿಕಾರಿ ಎಂ.ಉದಯರಾಜ್, ಎಲ್.ಎಸ್.ಜೀವೇಂದ್ರ ಕುಮಾರ್, ಮುಖ್ಯ ಕಾರ್ಯದರ್ಶಿ ದರ್ಶನ್ ಜೈನ್ ಮುಂತಾದವರಿದ್ದರು.

ಕೊಂಡಿನ್ಯೂಸ್, ಹಾಸನ.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Jun 02, 2020
ಕೋಲಾರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ...
Post by Kondi News
- Dec 20, 2019
ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ...
Post by Kondi News
- Aug 19, 2019
ಹಾಸನ: ಪೋನ್ ಟ್ಯಾಪಿಂಗ್ ಪ್ರಕರಣವನ್ನ ಸಿಬಿಐಗೆ ನೀಡಿರುವ ...
Has no content to show!

About Us

ಕನ್ನಡ ಪತ್ರಿಕೋದ್ಯಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಿಂದೆ ಗೋಡೆ ಬರಹದ ಮೇಲೆ, ಕೈ ಬರಹದ ಮೂಲಕ, ನಂತರ ಅಚ್ಚುಮೊಳೆ ಜೋಡಿಸಿ ಪತ್ರಿಕೆ ಮುದ್ರಣ ಮಾಡುತ್ತಿದ್ದ ಕಾಲ ಸರಿದು, ಗಣಕೀಕೃತ ಪತ್ರಿಕೆ ದಶಕಗಳ ಕಾಲ ಆಕ್ರಮಣ ಮಾಡಿಕೊಂಡಿತ್ತು. ತಂತ್ರಜ್ಞಾನ ಬದಲಾವಣೆಯಾದಂತೆ ಮಾಧ್ಯಮಗಳು ಬದಲಾವಣೆಯಾಗುತ್ತಾ ಮುದ್ರಣ ಮಾಧ್ಯಮವನ್ನ ಹಿಂದಿಕ್ಕೂವ ಭರದಲ್ಲಿ ದೃಶ್ಯ ಮಾಧ್ಯಮ ಕಾಲಿಟ್ಟರೂ ಅದಕ್ಕೂ ಮೀರಿದ ತಂತ್ರಜ್ಞಾನ ಬದಲಾಗಿ ಮುದ್ರಣ ಮಾಧ್ಯಮ ಮತ್ತು ದೃಶ್ಯಮಾಧ್ಯಮಗಳನ್ನ ಸರಿಸುತ್ತ ಮತ್ತೊಂದು ಮಾಧ್ಯಮ ಸಾಗಿದೆ. ಮಾಧ್ಯಮದ ತಂತ್ರಜ್ಞಾನ ಬದಲಾದಂತೆ, ಅದೇ ರೀತಿ ಜನರ ಸುದ್ದಿ ಓದುವ ವಿಧಾನವೂ ಕೂಡ ಬದಲಾಗಿದೆ. ಇಂದು ಲಕ್ಷಾಂತರ ಜನ ತಮ್ಮ ಅಂಗೈಯಲ್ಲೇ ಸುದ್ದಿ ಓದುತ್ತಿದ್ದಾರೆ. ಹಾಗಂತ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿದೆ ಎಂದಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಾರಣ ಬದಲಾವಣೆ ಜಗದ ನಿಯಮ. ಇದಕ್ಕೆ ಸಾಕ್ಷಿಯೆಂಬಂತೆ ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಕೊಂಡಿನ್ಯೂಸ್ 6 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೊರೆಗೊಂಡಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. 5ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ "ಹಾಸನಾಂಬ ವಿಶೇಷಾಂಕ" ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನ ಹೊರತಂದು ಮೆಚ್ಚುಗೆಗೆ ಪಾತ್ರವಾಗಿದ್ದನ್ನ ತಮಗೆ ಹೇಳಬೇಕಿಲ್ಲ ಎಂದುಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ಜನರ ಅಭಿಲಾಷೆಯಂತೆ ಕೊಂಡಿ ನ್ಯೂಸ್ ಹಾಸನ ಮಾತ್ರವಲ್ಲದೇ ಇಂದಿನಿಂದ ತುಮಕೂರು, ಬೆಂಗಳೂರು ಚಾಮರಾಜನಗರ, ಕೋಲಾರ, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಅಂತರ್ಜಾಲ ವಾಹಿನಿಯಾಗಿ ಹೊರಹೊಮ್ಮುತ್ತಿದೆ. ವಿವಿಧ ಜಿಲ್ಲೆಗಳ ಪತ್ರಕರ್ತರೇ ಕಟ್ಟಿರುವ ಸುದ್ದಿ ವಾಹಿನಿಯು ತಮಗೆ ಖಂಡಿತ ಸನಿಹವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನಿಮ್ಮ ನಂಬಿಕೆಯನ್ನ ನಾವು ಉಳಿಸಿಕೊಂಡು ತಮ್ಮ ಅಭಿರುಚಿಗೆ ತಕ್ಕ ಸುದ್ದಿಗಳನ್ನ ಕೊಡುವಲ್ಲಿ ಖಂಡಿತ ಸಫಲತೆ ಕಾಣುತ್ತೇವೆ. ತಮ್ಮ ಬೆಂಬಲ, ಸಹಕಾರ ಸದಾ ಹೀಗೆ ಇರಲಿ....ಎಂಬ ಆಶಯ ನಮ್ಮದು.   www.kondinews.com 

  • ಸಂಪಾದಕ, ಕೊಂಡಿನ್ಯೂಸ್. 

Visitors Counter

01055487
Today
This Month
Last Month
All days
169
808
2198
1055487
Your IP: 46.229.168.150
2020-06-04 17:25

Newsletter

Subscribe with us your email
Top