ಕೋಲಾರ: ಜಿಲ್ಲೆಯಲ್ಲಿ ಕೋವಿಡ್ ...
ಕೋಲಾರ : ಇಡೀ ಜಗತ್ತನ್ನೇ ...
ಹಾಸನ: ಕೋವಿಡ್-19 ತಡೆಗಟ್ಟುವ ...
ಹಾಸನ: ಕೋವಿಡ್-19 ಬಗ್ಗೆ ಯಾವುದೇ
ಅರಸೀಕೆರೆ: ಸಂಕಷ್ಟದಲ್ಲಿರುವ ...
ಹಾಸನ:ಜಿಲ್ಲೆಯಲ್ಲಿ ಹೊಸದಾಗಿ 15
ಹಾಸನ: ಕೋವಿಡ್-19 ಸೋಂಕು ...
ಹಾಸನ.ಮೇ.30.(ಕರ್ನಾಟಕ ವಾರ್ತೆ):-
ಹಾಸನ: ಉದ್ಯೋಗ ಖಾತರಿ ಯೋಜನೆಯಡಿ
ಹಾಸನ: ಮುಂಬೈನಿಂದ ಹಾಸನಕ್ಕೆ ...
ಹಾಸನ: ಈಯಮ್ಮನ ಹತ್ರ ಮತ್ತು ...
ಸೋಮವಾರಪೇಟೆ: ತಾಲ್ಲೂಕಿನ ಯಡವನಾಡು
ಹಾಸನ: ಹೊರಗಡೆಯಿಂದ ಬಂದವರನ್ನು ...
ಹಾಸವ: ಹಾಸನದಲ್ಲಿ ದಿನದಿಂದ ...
ಹಾಸನ: ಹಾಸನದಲ್ಲಿ ಬೆಳಗ್ಗೆ ...
ಹಾಸನ: ಒಂದು ಕಡೆ ಲಾಕ್ಡೌನ್ ಓಪನ್
ಮಂಡ್ಯ:ರಾತ್ರಿ ವೇಳೆ ದಿಢೀರ್ ...
ತುಮಕೂರು : ಸಾರ್ವಜನಿಕರಿಗೆ ಭೀತಿ
ಹಾಲು ತುಪ್ಪ ಬಿಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದ ಮಲೆನಾಡು ಜನ.

ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75 ರ ಹಾಸನ-ಸಕಲೇಶಪುರ ರಸ್ತೆ ಮರು ಡಾಂಬರಿಕರಣ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸಬೇಕೆಂದು ಒತ್ತಾಯಿಸಿ ವಿವಿದ ಸಂಘಟನೆಗಳು ಕಳೆದ ಮೂರು ದಿನದಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.

ಇಂದು ಕೂಡಾ ಪ್ರತಿಭಟನೆಯನ್ನ ಮುಂದುವರೆಸಿರುವ ಪ್ರತಿಭಟನಾನಿರತ ಮಲೆನಾಡು ಜನರು, ಗುಂಡಿ ಬಿದ್ದ ರಸ್ತೆಗೆ ಹಾಲುತುಪ್ಪ ಬಿಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದ್ರು. ರಾಷ್ಟ್ರೀಯ ಹೆದ್ದಾರಿ ಸಾವಿನ ರಹದಾರಿಯಾಗಿದೆ. ಮೂರು ವರ್ಷಗಳಿಂದ ರಸ್ತೆಯಲ್ಲಿ ಸಾವು ನೋವುಗಳ ಸಂಭವಿಸಿದ್ದು ಅವರ ಗೋಳುಗಳನ್ನ ಜನಪ್ರತಿನಿಧಿಗಳು ಕೇಳದಂತಾಗಿದ್ದಾರೆ. 3 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನ ಮರುಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿ ಅ.23 ರಿಂದ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಇಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಥಳಕ್ಕೆ ಆಗಮಿಸಿಬೇಕೆಂದು ಪಟ್ಟುಹಿಡಿದ್ರು.

ಪ್ರತಿಭಟನೆಯ ನೇತೃತ್ವವನ್ನ ಯಡೇಹಳ್ಳಿ ಮಂಜುನಾಥ್ ವಹಿಸಿಕೊಂಡಿದ್ದು, ಇವರೊಂದಿಗೆ ಕರಾವೇ ಸಂಘಟನೆ, ರೈತ ಪರ ಸಂಘಟನೆಗಳು ಸಾಥ್ ನೀಡಿವೆ. ಇನ್ನು ಮೂರನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆಯಿಂದ ಇಂದು ಕೂಡಾ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರ ಅಸ್ತವ್ಯವಸ್ತವಾಗಿತ್ತು. ಕಿಲೋ ಮೀಟರ್ ಗಟ್ಟಲೇ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದರಿಂದ ದೂರದ ಪ್ರಯಾಣಿಕರು ಒಂದುಕಡೆ ಪ್ರತಿಭಟನೆ ಮಾಡುವವರಿಗೆ ಅಷ್ಟೆಯಲ್ಲದೇ ನಿರ್ಲಕ್ಷ್ಯ ವಹಿಸಿದ್ದ ಅದಿಕಾರಿ ವರ್ಗ ಮತ್ತು ಸರ್ಕಾರದ ವಿರುದ್ದವೂ ಆಕ್ರೋಶವನ್ನ ವ್ಯಕ್ತಪಡಿಸಿದ್ರು.

ಇನ್ನು ಡಿಸೆಂಬರ್ ಅಂತ್ಯದಲ್ಲಿ ಮುಕ್ತಾಯವಾಗಬೇಕಿದ್ದ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ಓಡಾಡುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿ ಗುಂಡಿಗಳು ಬಿದ್ದಿವೆ. ಹೀಗಾಗಿ ಇಂದಿನ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ರಸ್ತೆಗೆ ಹಾಲು ಬಿಡುವ ಮೂಲಕ ಅಂತ್ಯಸಂಸ್ಕಾರದ ಕಾರ್ಯವನ್ನ ಮಾಡಿದ್ರು. ಇದಕ್ಕೂ ಮುನ್ನ ನಮ್ಮ ಪ್ರತಿಭಟನೆ ಕೇಳುವವರು ಬಹುತೇಕ ಸತ್ತುಹೋಗಿದ್ದಾರೆ. ಅವರಿಗೆ 2 ನಿಮಿಷದ ಮೌನಾಚರಣೆ ಮಾಡುವ ಮೂಲಕ ವಿಷಾದ ವ್ಯಕ್ತಪಡಿಸಿದ್ರು. ಜೊತೆಗೆ ಈ ಪ್ರತಿಭಟಯಿಂದಾದ್ರು ಉಳಿದವರು ಎಚ್ಚೆತ್ತು ರಸ್ತೆ ಮರುಡಾಂಬರಿಕರಣವನ್ನ ಕೂಡಲೆ ಕೈಗೆತ್ತಿಕೊಳ್ಳಬೇಕು. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತಕ್ಷಣ ಕಾಮಗಾರಿ ಪ್ರಾರಂಭಿಸಬೇಕು ಇಲ್ಲದಿದ್ದ ಮುಂದಿನ ಯಾವುದೇ ಅಹಿತಕರ ಘಟನೆ ನಡೆದ್ರು ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೆ ಹೊಣೆಗಾರರು ಎಂದು ಪ್ರತಿಭಟನಾ ಮುಖಂಡ ಎಚ್ಚರಿಕೆ ನೀಡಿದ್ರು.

Kondinews, Hassan

Last modified on Friday, 25 October 2019 21:07
Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Jun 02, 2020
ಕೋಲಾರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ...
Post by Kondi News
- Dec 20, 2019
ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ...
Post by
- Aug 15, 2019
ಹಾವು ಕಚ್ಚಿದ ಪರಿಣಾಮ ಜಾನುವಾರು ಸಾವು   ...
Has no content to show!

About Us

ಕನ್ನಡ ಪತ್ರಿಕೋದ್ಯಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಿಂದೆ ಗೋಡೆ ಬರಹದ ಮೇಲೆ, ಕೈ ಬರಹದ ಮೂಲಕ, ನಂತರ ಅಚ್ಚುಮೊಳೆ ಜೋಡಿಸಿ ಪತ್ರಿಕೆ ಮುದ್ರಣ ಮಾಡುತ್ತಿದ್ದ ಕಾಲ ಸರಿದು, ಗಣಕೀಕೃತ ಪತ್ರಿಕೆ ದಶಕಗಳ ಕಾಲ ಆಕ್ರಮಣ ಮಾಡಿಕೊಂಡಿತ್ತು. ತಂತ್ರಜ್ಞಾನ ಬದಲಾವಣೆಯಾದಂತೆ ಮಾಧ್ಯಮಗಳು ಬದಲಾವಣೆಯಾಗುತ್ತಾ ಮುದ್ರಣ ಮಾಧ್ಯಮವನ್ನ ಹಿಂದಿಕ್ಕೂವ ಭರದಲ್ಲಿ ದೃಶ್ಯ ಮಾಧ್ಯಮ ಕಾಲಿಟ್ಟರೂ ಅದಕ್ಕೂ ಮೀರಿದ ತಂತ್ರಜ್ಞಾನ ಬದಲಾಗಿ ಮುದ್ರಣ ಮಾಧ್ಯಮ ಮತ್ತು ದೃಶ್ಯಮಾಧ್ಯಮಗಳನ್ನ ಸರಿಸುತ್ತ ಮತ್ತೊಂದು ಮಾಧ್ಯಮ ಸಾಗಿದೆ. ಮಾಧ್ಯಮದ ತಂತ್ರಜ್ಞಾನ ಬದಲಾದಂತೆ, ಅದೇ ರೀತಿ ಜನರ ಸುದ್ದಿ ಓದುವ ವಿಧಾನವೂ ಕೂಡ ಬದಲಾಗಿದೆ. ಇಂದು ಲಕ್ಷಾಂತರ ಜನ ತಮ್ಮ ಅಂಗೈಯಲ್ಲೇ ಸುದ್ದಿ ಓದುತ್ತಿದ್ದಾರೆ. ಹಾಗಂತ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿದೆ ಎಂದಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಾರಣ ಬದಲಾವಣೆ ಜಗದ ನಿಯಮ. ಇದಕ್ಕೆ ಸಾಕ್ಷಿಯೆಂಬಂತೆ ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಕೊಂಡಿನ್ಯೂಸ್ 6 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೊರೆಗೊಂಡಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. 5ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ "ಹಾಸನಾಂಬ ವಿಶೇಷಾಂಕ" ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನ ಹೊರತಂದು ಮೆಚ್ಚುಗೆಗೆ ಪಾತ್ರವಾಗಿದ್ದನ್ನ ತಮಗೆ ಹೇಳಬೇಕಿಲ್ಲ ಎಂದುಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ಜನರ ಅಭಿಲಾಷೆಯಂತೆ ಕೊಂಡಿ ನ್ಯೂಸ್ ಹಾಸನ ಮಾತ್ರವಲ್ಲದೇ ಇಂದಿನಿಂದ ತುಮಕೂರು, ಬೆಂಗಳೂರು ಚಾಮರಾಜನಗರ, ಕೋಲಾರ, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಅಂತರ್ಜಾಲ ವಾಹಿನಿಯಾಗಿ ಹೊರಹೊಮ್ಮುತ್ತಿದೆ. ವಿವಿಧ ಜಿಲ್ಲೆಗಳ ಪತ್ರಕರ್ತರೇ ಕಟ್ಟಿರುವ ಸುದ್ದಿ ವಾಹಿನಿಯು ತಮಗೆ ಖಂಡಿತ ಸನಿಹವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನಿಮ್ಮ ನಂಬಿಕೆಯನ್ನ ನಾವು ಉಳಿಸಿಕೊಂಡು ತಮ್ಮ ಅಭಿರುಚಿಗೆ ತಕ್ಕ ಸುದ್ದಿಗಳನ್ನ ಕೊಡುವಲ್ಲಿ ಖಂಡಿತ ಸಫಲತೆ ಕಾಣುತ್ತೇವೆ. ತಮ್ಮ ಬೆಂಬಲ, ಸಹಕಾರ ಸದಾ ಹೀಗೆ ಇರಲಿ....ಎಂಬ ಆಶಯ ನಮ್ಮದು.   www.kondinews.com 

  • ಸಂಪಾದಕ, ಕೊಂಡಿನ್ಯೂಸ್. 

Visitors Counter

01055474
Today
This Month
Last Month
All days
156
795
2198
1055474
Your IP: 34.231.21.83
2020-06-04 16:51

Newsletter

Subscribe with us your email
Top