ಕೋಲಾರ: ಜಿಲ್ಲೆಯಲ್ಲಿ ಕೋವಿಡ್ ...
ಕೋಲಾರ : ಇಡೀ ಜಗತ್ತನ್ನೇ ...
ಹಾಸನ: ಕೋವಿಡ್-19 ತಡೆಗಟ್ಟುವ ...
ಹಾಸನ: ಕೋವಿಡ್-19 ಬಗ್ಗೆ ಯಾವುದೇ
ಅರಸೀಕೆರೆ: ಸಂಕಷ್ಟದಲ್ಲಿರುವ ...
ಹಾಸನ:ಜಿಲ್ಲೆಯಲ್ಲಿ ಹೊಸದಾಗಿ 15
ಹಾಸನ: ಕೋವಿಡ್-19 ಸೋಂಕು ...
ಹಾಸನ.ಮೇ.30.(ಕರ್ನಾಟಕ ವಾರ್ತೆ):-
ಹಾಸನ: ಉದ್ಯೋಗ ಖಾತರಿ ಯೋಜನೆಯಡಿ
ಹಾಸನ: ಮುಂಬೈನಿಂದ ಹಾಸನಕ್ಕೆ ...
ಹಾಸನ: ಈಯಮ್ಮನ ಹತ್ರ ಮತ್ತು ...
ಸೋಮವಾರಪೇಟೆ: ತಾಲ್ಲೂಕಿನ ಯಡವನಾಡು
ಹಾಸನ: ಹೊರಗಡೆಯಿಂದ ಬಂದವರನ್ನು ...
ಹಾಸವ: ಹಾಸನದಲ್ಲಿ ದಿನದಿಂದ ...
ಹಾಸನ: ಹಾಸನದಲ್ಲಿ ಬೆಳಗ್ಗೆ ...
ಹಾಸನ: ಒಂದು ಕಡೆ ಲಾಕ್ಡೌನ್ ಓಪನ್
ಮಂಡ್ಯ:ರಾತ್ರಿ ವೇಳೆ ದಿಢೀರ್ ...
ತುಮಕೂರು : ಸಾರ್ವಜನಿಕರಿಗೆ ಭೀತಿ
×

Warning

JUser: :_load: Unable to load user with ID: 240
ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವುದಾದರೆ ಅದನ್ನು ನಾನು ಸ್ವಾಗತಿಸುತ್ತೇನೆ :ಶಾಸಕ ಪ್ರೀತಂ ಜೆ ಗೌಡ

ಹಾಸನ:ಸರ್ಕಾರ ರಚನೆಯಾಗಿ ನೂರುದಿನದ ಸಂಭ್ರಮ ಹಿನ್ನೆಲೆ ,ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಸುದ್ದಿಗೋಷ್ಠಿ ನಡೆಸಿದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದೆ ಎಂಬ ರೇವಣ್ಣನವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರೀತಮ್ ಗೌಡ, ಹಾಸನದ ಅಭಿವೃದ್ಧಿ ಕಾಮಗಾರಿಗಳಿಗೆ ಯಡಿಯೂರಪ್ಪನವರ ಸರ್ಕಾರ ಹಣ ಮಂಜೂರು ಮಾಡಿದೆ, ಸದ್ಯದಲ್ಲಿಯೇ ಎಲ್ಲಾ ಕಾಮಗಾರಿಗಳ ಕೆಲಸ ಆರಂಭವಾಗುತ್ತದೆ ಮತ್ತು ರಾಜ್ಯದಲ್ಲಿಯೆ ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸೊಣ ಎಂದರು.

ಇನ್ನು ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕುಮಾರಸ್ವಾಮಿಯವರು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರೆ ನಾನು ಅದನ್ನು ಸ್ವಾಗತಿಸುತ್ತೇನೆ ಮತ್ತು ಅವರಿಗೆ ಈಗಲಾದರೂ ಯಾವುದು ಸರಿ ಯಾವುದು ತಪ್ಪು ಎಂದು ಅರ್ಥವಾಗಿದೆ ಎಂದರು.

ಉಪ ಚುನಾವಣೆ ನಡೆದ ಬಳಿಕ ನಮ್ಮ ಪಕ್ಷ 120 ರ ಗಡಿ ದಾಟುತ್ತದೆ ಆದ್ದರಿಂದ ನಮಗೆ ಬೇರೆ ಪಕ್ಷದವರ ಬೆಂಬಲ ಅಗತ್ಯವಿರುವುದಿಲ್ಲ ಎಂದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ RCEP ಒಪ್ಪಂದಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಆರ್ . ಸಿ. ಇ. ಪಿ. ಜನಸಾಮಾನ್ಯರಿಗೆ ಒಳ್ಳೆಯದಾಗಲಿ ಎಂದು ಮಾಡಿದ್ದಾರೆ ,ರೈತರಿಗೆ ತೊಂದರೆ ಆಗುವಂತಿದ್ದರೆ ಯೋಜನೆಯನ್ನು ಮಾರ್ಪಾಡು ಮಾಡಿ ಸರಿಪಡಿಸಲು ಕೇಂದ್ರ ಸರ್ಕಾರ ಬದ್ಧವಾಗಿರುತ್ತದೆ ಎಂದರು.

ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರ್ಕಾರ ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದೆ. ಅಕ್ರಮವಾಗಿ ಯಾರನ್ನು ವರ್ಗಾವಣೆ ಮಾಡಿಲ್ಲ ಈ ಬಗ್ಗೆ ವಿರೋಧ ಪಕ್ಷದವರ ಕೊಂಕು ಮಾತನಾಡುವುದನ್ನು ಬಿಡಬೇಕು.ಕಳೆದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ನಡೆದಿಲ್ಲವೇ ಮೈತ್ರಿ ಸರ್ಕಾರದಲ್ಲಿ ಸಾಕಷ್ಟು ವರ್ಗಾವಣೆ ಪ್ರಕ್ರಿಯೆ ಆಗಿಲ್ಲವೇ. . . ? ಇವರೆಲ್ಲರೂ ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದರೆ ಬಿಜೆಪಿ ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದೆ ಎಂದರು.
ಉಪವಿಭಾಗಾಧಿಕಾರಿ ಎಚ್.ಎಲ್ ನಾಗರಾಜು ವರ್ಗಾವಣೆ ಆಡಳಿತಾತ್ಮಕವಾಗಿದೆ. ಅವರು ಈಗಾಗಲೇ 3ವರ್ಷ 7ತಿಂಗಳು ಸೇವೆಸಲ್ಲಿಸಿದ್ದಾರೆ ಇದು ಆಡಳಿತಾತ್ಮಕ ವರ್ಗಾವಣೆ ಅಲ್ಲವೇ ? ಎಂದು ಪ್ರಶ್ನಿಸಿದರು.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Jun 02, 2020
ಕೋಲಾರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ...
Post by Kondi News
- Dec 20, 2019
ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ...
Post by Kondi News
- Nov 04, 2019
ಹಾಸನ:ಸರ್ಕಾರ ರಚನೆಯಾಗಿ ನೂರುದಿನದ ಸಂಭ್ರಮ ಹಿನ್ನೆಲೆ ...
Has no content to show!

About Us

ಕನ್ನಡ ಪತ್ರಿಕೋದ್ಯಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಿಂದೆ ಗೋಡೆ ಬರಹದ ಮೇಲೆ, ಕೈ ಬರಹದ ಮೂಲಕ, ನಂತರ ಅಚ್ಚುಮೊಳೆ ಜೋಡಿಸಿ ಪತ್ರಿಕೆ ಮುದ್ರಣ ಮಾಡುತ್ತಿದ್ದ ಕಾಲ ಸರಿದು, ಗಣಕೀಕೃತ ಪತ್ರಿಕೆ ದಶಕಗಳ ಕಾಲ ಆಕ್ರಮಣ ಮಾಡಿಕೊಂಡಿತ್ತು. ತಂತ್ರಜ್ಞಾನ ಬದಲಾವಣೆಯಾದಂತೆ ಮಾಧ್ಯಮಗಳು ಬದಲಾವಣೆಯಾಗುತ್ತಾ ಮುದ್ರಣ ಮಾಧ್ಯಮವನ್ನ ಹಿಂದಿಕ್ಕೂವ ಭರದಲ್ಲಿ ದೃಶ್ಯ ಮಾಧ್ಯಮ ಕಾಲಿಟ್ಟರೂ ಅದಕ್ಕೂ ಮೀರಿದ ತಂತ್ರಜ್ಞಾನ ಬದಲಾಗಿ ಮುದ್ರಣ ಮಾಧ್ಯಮ ಮತ್ತು ದೃಶ್ಯಮಾಧ್ಯಮಗಳನ್ನ ಸರಿಸುತ್ತ ಮತ್ತೊಂದು ಮಾಧ್ಯಮ ಸಾಗಿದೆ. ಮಾಧ್ಯಮದ ತಂತ್ರಜ್ಞಾನ ಬದಲಾದಂತೆ, ಅದೇ ರೀತಿ ಜನರ ಸುದ್ದಿ ಓದುವ ವಿಧಾನವೂ ಕೂಡ ಬದಲಾಗಿದೆ. ಇಂದು ಲಕ್ಷಾಂತರ ಜನ ತಮ್ಮ ಅಂಗೈಯಲ್ಲೇ ಸುದ್ದಿ ಓದುತ್ತಿದ್ದಾರೆ. ಹಾಗಂತ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿದೆ ಎಂದಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಾರಣ ಬದಲಾವಣೆ ಜಗದ ನಿಯಮ. ಇದಕ್ಕೆ ಸಾಕ್ಷಿಯೆಂಬಂತೆ ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಕೊಂಡಿನ್ಯೂಸ್ 6 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೊರೆಗೊಂಡಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. 5ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ "ಹಾಸನಾಂಬ ವಿಶೇಷಾಂಕ" ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನ ಹೊರತಂದು ಮೆಚ್ಚುಗೆಗೆ ಪಾತ್ರವಾಗಿದ್ದನ್ನ ತಮಗೆ ಹೇಳಬೇಕಿಲ್ಲ ಎಂದುಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ಜನರ ಅಭಿಲಾಷೆಯಂತೆ ಕೊಂಡಿ ನ್ಯೂಸ್ ಹಾಸನ ಮಾತ್ರವಲ್ಲದೇ ಇಂದಿನಿಂದ ತುಮಕೂರು, ಬೆಂಗಳೂರು ಚಾಮರಾಜನಗರ, ಕೋಲಾರ, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಅಂತರ್ಜಾಲ ವಾಹಿನಿಯಾಗಿ ಹೊರಹೊಮ್ಮುತ್ತಿದೆ. ವಿವಿಧ ಜಿಲ್ಲೆಗಳ ಪತ್ರಕರ್ತರೇ ಕಟ್ಟಿರುವ ಸುದ್ದಿ ವಾಹಿನಿಯು ತಮಗೆ ಖಂಡಿತ ಸನಿಹವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನಿಮ್ಮ ನಂಬಿಕೆಯನ್ನ ನಾವು ಉಳಿಸಿಕೊಂಡು ತಮ್ಮ ಅಭಿರುಚಿಗೆ ತಕ್ಕ ಸುದ್ದಿಗಳನ್ನ ಕೊಡುವಲ್ಲಿ ಖಂಡಿತ ಸಫಲತೆ ಕಾಣುತ್ತೇವೆ. ತಮ್ಮ ಬೆಂಬಲ, ಸಹಕಾರ ಸದಾ ಹೀಗೆ ಇರಲಿ....ಎಂಬ ಆಶಯ ನಮ್ಮದು.   www.kondinews.com 

  • ಸಂಪಾದಕ, ಕೊಂಡಿನ್ಯೂಸ್. 

Visitors Counter

01055505
Today
This Month
Last Month
All days
187
826
2198
1055505
Your IP: 34.231.21.83
2020-06-04 18:02

Newsletter

Subscribe with us your email
Top