ಹಾಸನ: ಸುರಕ್ಷಿತ ವಾಹನ ಚಾಲನೆ ...
ಹಾಸನ: ಒಬ್ಬ ಮನುಷ್ಯ ಎಷ್ಟು ...
ಶ್ರವಣಬೆಳಗೊಳ: ಜನವರಿ ತಿಂಗಳಲ್ಲಿ
ತುಮಕೂರು : ಪ್ರತಿಯೊಬ್ಬರು ...
ಶ್ರವಣಬೆಳಗೊಳ: ಯುವ ಜನತೆ ...
ಹಾಸನ: ದೇಶದಲ್ಲಿ ಕೆಲ ನಾಯಕರನ್ನು
ಬೆಂಗಳೂರು: ಯಾವುದೇ ಉತ್ಸವ ...
ಹಾಸನ: ಒಂದು ಫಿಚ್ಚರ್ ತೆರೆಕಂಡರೆ
ಹಾಸನ: ಕೇವಲ ಕಾಮಗಾರಿ ಮಾಡುವ ಮೂಲಕ
ಹಾಸನ/ಬೇಲೂರು: ನೋಟಿಸ್ ಜಾರಿ ...
ಅರಸಿಕೆರೆ: ಶ್ರೀ ಸಚಿದಾನಂದ ...
ಹಾಸನ: ಹಾಸನ ತಾಲೂಕಿನ ಗ್ರಾಮೀಣ ...
ಹಾಸನ: ಎಲ್ಲರನ್ನೂ ಮಂತ್ರಿ ...
ಹಾಸನ: ಅಂತೂ ಇಂತೂ ಕೊನೆಗೂ ಜನರ ...
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ಹೆಣ್ಣು-ಹೊನ್ನು-ಮಣ್ಣು

ಹೆಣ್ಣು-ಹೊನ್ನು-ಮಣ್ಣು ಪುರುಷನನ್ನ ಹುಡುಕಿಕೊಂಡು ಬರಬೇಕು ಎಂಬ ಮಾತಿದೆ. ಸಾಲ ಕೊಟ್ಟ ಮಾತ್ರಕ್ಕೆ ಹಿರಿಯ ಅಧಿಕಾರಿ ಪತ್ನಿ ಮೇಲೆ ಕಣ್ಣು ಹಾಕಿ, ಕೊಟ್ಟ ಹಣವನ್ನ ಕಳೆದುಕೊಂಡು ಅವರೊಂದಿಗಿದ್ದ ಸ್ನೇಹವನ್ನು ಕಳೆದುಕೊಂಡು ಇಂಗು ತಿಂದ ಮಂಗನಂತಾಗಿದ್ದಾನೆ ಇಲ್ಲೊಬ್ಬ ಮಾಜಿ ಸೈನಿಕ. ಅಷ್ಚಕ್ಕೂ ಏನಿದು ಘಟನೆ ಅಂತೀರಾ. . . ಈ ಸ್ಟೋರಿ ನೋಡಿ. . .

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹುರುಡಿ ಗ್ರಾಮದ ಉದಯ್ ಮತ್ತು ಕೇಶವಮೂರ್ತಿ ಎಂಬ ಮಾಜಿ ಸೈನಿಕರುಗಳ ನಡುವೆ ನಡೆದಿರೋ ಇಟ್ರೆಸ್ಟಿಂಗ್ ಸ್ಟೋರಿ. . . .

ಉದಯ್ ಎಂಬ ಸೈನಿಕನ ಪತ್ನಿ ಪದ್ಮಜಾ ಹಣದ ಅವಶ್ಯಕತೆ ಇದೆ ಅಂತ ತನ್ನ ಪತಿಯ ಸ್ನೇಹಿತನಾಗಿರುವ ಮಾಜಿ ಸೈನಿಕ ಕೇಶವಮೂರ್ತಿ ಗೆ ಕರೆ 40 ಸಾವಿರ ಹಣವನ್ನು ಸಾಲವಾಗಿ ಪಡಿತಾಳೆ. ತಿಂಗಳಾದ್ರೂ ಸಾಲ ಕೊಡದ ಪದ್ಮಜಾಗೆ ಪದೇಪದೇ ಫೋನ್ ಮಾಡಿ ಕೇಶವಮೂರ್ತಿ ಕಿರುಕುಳ ನೀಡುತ್ತಾನೆ. ಅಷ್ಟೇ ಅಲ್ಲ ಸಾಲದ ಬದಲಿಗೆ ಆಕೆಯ ಮೇಲೆಯೇ ಆಸೆಪಟ್ಟಾಗ ಪದ್ಮಜಾ ತನ್ನ ಪತಿ ಉದಯ ಗೆ ಎಲ್ಲ ವಿಚಾರವನ್ನು ಹೇಳಿಬಿಡ್ತಾಳೆ.

ಉದಯ ಮತ್ತು ಕೇಶವಮೂರ್ತಿ ನಡುವೆ ಈ ಹಣದ ವಿಚಾರವಾಗಿ ಮನಸ್ತಾಪ ಉಂಟಾಗುತ್ತೆ. ಕೇಶವಮೂರ್ತಿ ಕಿರುಕುಳ ತಾಳಲಾರದೆ ಪದ್ಮಜಾ ದಂಪತಿ ಮತ್ತು ಸಾಲ ಪಡೆದು ನನಗೆ ಮೋಸ ಮಾಡಿದ್ದಾರೆ ಅಂತ ಕೇಶವಮೂರ್ತಿ ಇಬ್ಬರು ಪೊಲೀಸ್ ಠಾಣೆಯಲ್ಲಿ ಒಬ್ಬರ ಮೇಲೊಬ್ಬರು ದೂರು ದಾಖಲು ಮಾಡ್ಕೋತಾರೆ.

ದೂರು ದಾಖಲು ಮಾಡಿಕೊಂಡ ಪೊಲೀಸರಿಗೆ ತನಿಖೆ ವೇಳೆ ಹೊಸದೊಂದು ಟ್ವಿಸ್ಟ್ ಸಿಗುತ್ತೆ. ಶಿಕ್ಷಕಿ ಹೆಸರಲ್ಲಿ ಕೇಶವಮೂರ್ತಿ ಗೆ ಫೋನ್ ಮಾಡಿದ್ದು ಪದ್ಮಜಾ ಅಲ್ಲ. ಕೇಶವಮೂರ್ತಿ ಕೂಡ ಹಣ ಕೊಟ್ಟಿದ್ದು ಪದ್ಮಜಾಗೆ ಅಲ್ಲಾ ಎಂದು. ಹಾಗಾದ್ರೆ ಇವರಿಬ್ಬರ ನಡುವೆ ಮನಸ್ತಾಪ ತಂದು ಹಣವನ್ನ ಪಡೆದವರು ಯಾರು ಎಂಬುದು ಪೊಲೀಸರಿಗೆ ತಲೆ ನೋವಾಗುತ್ತೆ. ತನಿಖೆ ಮುಂದುವರಿಸಿದಾಗ ಗೊತ್ತಾಗಿದ್ದು, ಸತ್ತ ವ್ಯಕ್ತಿಯ ಮೊಬೈಲ್ ಸಿಮ್ ಬಳಸಿ ಓರ್ವ ದಂಪತಿ ಹಣವನ್ನು ಲಪಟಾಯಿಸಿದ್ದಾರೆಂದು.

ಹೌದು ಇವರಿಬ್ಬರ ನಡುವೆ ಮನಸ್ತಾಪ ತಂದು ಹಣವನ್ನು ಲಪಟಾಯಿಸಿದದ್ದು ಬೇರ್ಯಾರು ಅಲ್ಲಾ. ಹುರುಡಿ ಸಮೀಪದ ಹಾದಿಗೆ ಗ್ರಾಮದ ಪೃಥ್ವಿ ಮತ್ತು ಆಕೆಯ ಪತ್ನಿ. 6 ತಿಂಗಳ ಹಿಂದೆ ಸುಧೀರ್ ಎಂಬ ವ್ಯಕ್ತಿ ಅಪಘಾತದಲ್ಲಿ ಸಾವಿಗೀಡಾಗಿದ್ದು, ಅಪಘಾತವಾದ ಸ್ಥಳದಲ್ಲಿ ದೊರೆತ ಮೊಬೈಲನ್ನ ಪೃಥ್ವಿ ಬಳಸುತ್ತಿದ್ದ. ಐಷಾರಾಮಿ ಜೀವನಕ್ಕಾಗಿ ಸತ್ತ ವ್ಯಕ್ತಿಯ ಮೊಬೈಲ್ನಿಂದ ತನ್ನ ಹೆಂಡತಿಯ ಮೂಲಕ ಕೇಶವಮೂರ್ತಿಗೆ ಕರೆ ಮಾಡಿ 40 ಸಾವಿರ ಪಡೆದ ಇವರು ಇದನ್ನೇ ಬಂಡವಾಳ ಮಾಡಿಕೊಂಡ ಇವರು ಇಬ್ಬರು ರಾಜಕೀಯ ಮುಖಂಡರುಗಳ ಕಡೆಯಿಂದಲೂ ತಲಾ 20 ಸಾವಿರದಂತೆ ಹಣ ಪಡೆದು ವಂಚಿಸಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದ್ದು, ಪತಿ ಪೃಥ್ವಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ರು ಎಂಬ ವಿಚಾರ ತಿಳಿಯುತ್ತಿದ್ದಂತೆ ಹೆಂಡತಿ ಊರಿಂದ ಕಾಲ್ಕಿತ್ತಿರೋ ಆಕೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ

ಒಟ್ಟಾರೆ ಐಷಾರಾಮಿ ಜೀವನಕ್ಕಾಗಿ ಸತ್ತ ವ್ಯಕ್ತಿಯ ಸಿಮ್ ಬಳಸಿ, ಇಬ್ಬರು ಮಾಜಿ ಸೈನಿಕರ ನಡುವೆ ಮನಸ್ತಾಪ ತಂದಿಟ್ಟಿದ್ದು ಒಂದು ಕಡೆಯಾದರೆ, ತನ್ನ ಕಿರಿಯ ಸಹದ್ಯೋಗಿ ಹೆಂಡತಿಗೆ ಹಣಕೊಟ್ಟೆ ಎಂದು ಭಾವಿಸಿ ಹಿಂದಿರುಗಿಸದ ಹಣಕ್ಕಾಗಿ ಆಕೆಯ ಮೇಲೆ ಆಸೆಪಟ್ಟಿದ್ದು ಸೈನಿಕ ವೃತ್ತಿಗೆ ಅಪಮಾನ ಮಾಡಿದಂತೆಯೇ ಸರಿ. ಹಣ ಮತ್ತಪ ಹೆಣ್ಣು ಸ್ನೇಹ ಸಂಬಂಧವನ್ನು ಹಾಳು ಮಾಡುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸ್ಪಷ್ಟ ಉದಾಹರಣೆ.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Jan 13, 2020
ಹಾಸನ: ಸುರಕ್ಷಿತ ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Nov 05, 2019
ಹಾಸನ: ಮನೆ ಕಟ್ಟುವ ವಿಚಾರಕ್ಕೆ ಅಣ್ಣ ನೀಡುತ್ತಿದ್ದ ...
Has no content to show!

About

Newsletter

Subscribe with us your email
Top