ಹಾಸನ: ಸುರಕ್ಷಿತ ವಾಹನ ಚಾಲನೆ ...
ಹಾಸನ: ಒಬ್ಬ ಮನುಷ್ಯ ಎಷ್ಟು ...
ಶ್ರವಣಬೆಳಗೊಳ: ಜನವರಿ ತಿಂಗಳಲ್ಲಿ
ತುಮಕೂರು : ಪ್ರತಿಯೊಬ್ಬರು ...
ಶ್ರವಣಬೆಳಗೊಳ: ಯುವ ಜನತೆ ...
ಹಾಸನ: ದೇಶದಲ್ಲಿ ಕೆಲ ನಾಯಕರನ್ನು
ಬೆಂಗಳೂರು: ಯಾವುದೇ ಉತ್ಸವ ...
ಹಾಸನ: ಒಂದು ಫಿಚ್ಚರ್ ತೆರೆಕಂಡರೆ
ಹಾಸನ: ಕೇವಲ ಕಾಮಗಾರಿ ಮಾಡುವ ಮೂಲಕ
ಹಾಸನ/ಬೇಲೂರು: ನೋಟಿಸ್ ಜಾರಿ ...
ಅರಸಿಕೆರೆ: ಶ್ರೀ ಸಚಿದಾನಂದ ...
ಹಾಸನ: ಹಾಸನ ತಾಲೂಕಿನ ಗ್ರಾಮೀಣ ...
ಹಾಸನ: ಎಲ್ಲರನ್ನೂ ಮಂತ್ರಿ ...
ಹಾಸನ: ಅಂತೂ ಇಂತೂ ಕೊನೆಗೂ ಜನರ ...
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ಬಂಧನದಲ್ಲಿದ್ದ ಜಿಂಕೆಗಳಿಗೆ ಕಡೆಗೂ ಸಿಕ್ಕಿತು ಬಿಡುಗಡೆಯ ಭಾಗ್ಯ.

ಆಹಾರ ಅರಸಿ ಅವುಗಳು ಅಲ್ಲಿಗೆ ಬಂದಿದ್ದವು ಆದರೆ ಅಲ್ಲಿಂದ ವಾಪಸ್ ಹೋಗಲಾರದೆ ಸುಮಾರು 7-8 ವರ್ಷಗಳಿಂದ ಅಲ್ಲಿಯೇ ಬಂಧನಕ್ಕೊಳಗಾಗಿದ್ದವು. ಚಿಕ್ಕ ಪ್ರಪಂಚದಲ್ಲಿಯೇ ಇಷ್ಟು ದಿನ ವಾಸಮಾಡುತ್ತಾ, ತಮ್ಮ ನೋವನ್ನ ಯಾರಿಗೂ ಹೇಳಿಕೊಳ್ಳಲಾಗದೇ ಮೂಕ ಯಾತನೆ ಅನುಭವಿಸುತ್ತಿದ್ದವು. ಆದರೆ ಈಗ ಅವುಗಳಿಗೆ ಕೆಲವರುಗಳ ಕಾಳಜಿಯಿಂದ ಮತ್ತೆ ತಮ್ಮದೇ ಪ್ರಪಂಚಕ್ಕೆ ಮರಳಲು ಮುಂದಾಗಿವೆ. ಅಷ್ಟಕ್ಕೂ ಏನಿದು ಯಾರು ಬಂಧಿಯಾಗಿದ್ದರು ಎಂಬ ಕುತೂಹಲ ನಿಮಗಿದ್ದರೆ ಈ ಸ್ಟೋರಿ ನೋಡಿ. . .

ಹೌದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಖಾಸಗಿ ಎಸ್ಟೇಟ್ ಒಂದರಲ್ಲಿ ಅಕ್ರಮವಾಗಿ ಬಂಧಿಯಾಗಿದ್ದ ಜಿಂಕೆಗಳನ್ನು ಅರಣ್ಯ ಅಧಿಕಾರಿಗಳು ಬಂಧಮುಕ್ತ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ನಡುವಿನ ಹೊಸ್ಸೂರು ಎಸ್ಟೇಟ್ ನಲ್ಲಿದ್ದ ಸುಮಾರು 22 ಜಿಂಕೆಗಳನ್ನು ಕಳೆದ 2ದಿನದಿಂದ ತಲಾ ಮೂರು ಜಿಂಕೆಗಳಂತೆ ಸ್ಥಳಾಂತರಿಸುವ ಕಾರ್ಯವಾಗುತ್ತಿದೆ.

ಆಹಾರ ಅರಸಿ ಬಂದ ಜಿಂಕೆ ಮರಿಗಳನ್ನು ಸಾಕುವ ಉದ್ದೇಶದಿಂದ ಎಸ್ಟೇಟ್ ಮಾಲೀಕ ಅವುಗಳು ಹೊರ ಹೋಗದಂತೆ ಬೇಲಿ ನಿರ್ಮಿಸಿ ಬಂಧನ ಮಾಡಿದ್ರು. ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಎಸ್ಟೇಟ್ ಮಾಲೀಕರ ವಿರುದ್ಧ ದೂರು ದಾಖಲಿಸಿ, ಜಿಂಕೆ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಹೀಗಾಗಿ ದಿನಕ್ಕೆ ಮೂರು ಜಿಂಕೆ ಗಳಂತೆ ಹೊಸ್ಸೂರ್ ಎಸ್ಟೇಟ್ ನಿಂದ ಹಾಸನದ ಗೆಂಡೆಕಟ್ಟೆ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.

ಆ ಎಸ್ಟೇಟ್ ನಿಂದ ಜಿಂಕೆಗಳು ಜಿಗಿದು ಹಾರಿ ಹೋಗದಂತೆ ಸಣ್ಣ ಬೇಲಿಯಿಂದ ಅವುಗಳನ್ನು ಕೂಡಿಹಾಕಿದ್ದರಿಂದ. ಇಷ್ಟು ವರ್ಷಗಳ ಕಾಲ ವರ್ಷಗಳಿಂದ ಬಂಧಿಯಾಗಿದ್ದ ಜಿಂಕೆ ಮರಿಗಳಿಗೆ ಅರಣ್ಯ ಇಲಾಖೆ ಮತ್ತೆ ಹೊಸಜೀವನ ಕೊಡಲು ಮುಂದಾಗಿದೆ. ವನ್ಯಜೀವಿ ವೈದ್ಯರ ಸಲಹೆ ಮೇರೆಗೆ ಅವುಗಳಿಗೆ ಅರವಳಿಕೆ ಮದ್ದು ನೀಡಿ ಬಳಿಕ ಅವುಗಳನ್ನು ವಾಹನದ ಮೂಲಕ ಸಾಗಿಸಲಾಗುತ್ತಿದ್ದು, ಅವುಗಳನ್ನ ಹಾಸನದ ಗೆಂಡೆಕಟ್ಟೆ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.

ಜಿಂಕೆಗಳು ಅತಿಸೂಕ್ಷ್ಮ ಪ್ರಾಣಿ ಕೆಲವೊಮ್ಮೆ ಅವುಗಳನ್ನು ಮುಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ ಜೊತೆಗೆ ಕೆಲವೊಂದು ವಾತಾವರಣಕ್ಕೆ ಅವು ಹೊಂದಿಕೊಳ್ಳುವುದು ಬಹಳ ಕಷ್ಟ. ಹಾಗಾಗಿ ಅರವಳಿಕೆ ನೀಡುವ ಮುನ್ನ ನಾವು ವಾತಾವರಣ ವನ್ನು ನೋಡಿಕೊಂಡು ನೀಡಬೇಕಾಗುತ್ತದೆ. ಜೊತೆಗೆ ಆರೋಗ್ಯದ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆಕೂಡಾ ಇರುವುದರಿಂದ ಅವುಗಳ ರಕ್ಷಣಾಕಾರ್ಯ ತುಂಬಾ ಕಷ್ಟ.

ಒಟ್ಟಾರೆ ಸ್ವಚ್ಛಂದವಾಗಿ ಯಾರ ಹಂಗಿಲ್ಲದೆ ಕಾಡುಗಳಲ್ಲಿ ನಲಿದಾಡುತ್ತಾ, ಕುಣಿದಾಡುತ್ತಾ, ಇದ್ದ ಜಿಂಕೆ ಮರಿಗಳು ಆಹಾರವನ್ನು ಅರಸಿ ಬಂದು ಬಂಧಿಯಾಗಿದ್ದವು. ಈಗ ಸಾರ್ವಜನಿಕರ ಕಾಳಜಿಯಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದವರು ಅವುಗಳಿಗೆ ಮತ್ತೆ ತಮ್ಮದೇ ಪ್ರಪಂಚಕ್ಕೆ ಕಳುಹಿಸಿ ಕೊಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Jan 13, 2020
ಹಾಸನ: ಸುರಕ್ಷಿತ ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Nov 05, 2019
ಹಾಸನ: ಮನೆ ಕಟ್ಟುವ ವಿಚಾರಕ್ಕೆ ಅಣ್ಣ ನೀಡುತ್ತಿದ್ದ ...
Has no content to show!

About

Newsletter

Subscribe with us your email
Top