ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ಹಾಸನ: ಜೆಡಿಎಸ್ ನವರಿಗೆ ರಾಜಕೀಯ
ಹಾಸನ:ಚನ್ನರಾಯಪಟ್ಟಣ ತಾಲೂಕು ...
ಹಾಸನ:ನಮ್ಮ ಮಕ್ಕಳು ಓದಿ ...
ಹಾಸನ:ಅ.27ರಂದು ಅಮೃತ್ ಮಹಲ್ ರಾಸು
ಇವರ್ಯಾರು ಇವರಿಗೆ ಹೆತ್ತವರಲ್ಲ.
ಆಹಾರ ಅರಸಿ ಅವುಗಳು ಅಲ್ಲಿಗೆ ...
ಹೆಣ್ಣು-ಹೊನ್ನು-ಮಣ್ಣು ಪುರುಷನನ್ನ
ಹಾಸನ:ಸಾರ್ವಜನಿಕರ ದೂರಿನ ...
ಹಾಸನ: ಹಣ, ಚಿನ್ನ ಎಲ್ಲವನ್ನ ...
ಹಾಸನ:ಕನ್ನಡಿಗರಿಗೆ ಉದ್ಯೋಗವನ್ನು
ಹಾಸನ: ಹಾಸನದಲ್ಲಿ ಮಾಜಿ ಸಚಿವ ಎ
ಹಾಸನ: ಮನೆ ಕಟ್ಟುವ ವಿಚಾರಕ್ಕೆ ...
ಹಾಸನ: ಕುಡಿದ ಅಮಲಿನಲ್ಲಿ ತಂದೆಯೇ
ಹಾಸನ:ಸರ್ಕಾರ ರಚನೆಯಾಗಿ ನೂರುದಿನದ
ಹಾಸನ:ಹೇಮಾವತಿ ಕಾಲುವೆಯಲ್ಲಿ ...
ದಕ್ಷಿಣ ಜೈನಕಾಶಿ ಶ್ರವಣಬೆಳಗೊಳದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ.

ಇವರ್ಯಾರು ಇವರಿಗೆ ಹೆತ್ತವರಲ್ಲ. ಬಂಧು-ಬಾಂಧವರಲ್ಲ. ಆದ್ರೆ ಇವರಿಗೆ ಇಲ್ಲಿ ನೆರದಿದ್ದವರೇ ಇವರಿಗೆ ಹೆತ್ತವರಾಗಿದ್ರು. ಅಣ್ಣನ ಸ್ಥಾನದಲ್ಲಿ ನಿಂತು ಕೈಗಳಿಗೆ ಬಳೆ ತೊಡಿಸಿ, ತಲೆಗೆ ಹೂ ಮುಡಿಸಿ, ಸೆರಗಿಗಿ ಉಡಿ ತುಂಬಿ ನೂರ್ಕಾಲ ಮುತ್ತೈದೆಯಾಗಿ ಬಾಳಮ್ಮ ಎಂದು ಸಾವಿರಾರು ಮಂದಿ ಅರಸಿ, ಹಾರೈಸಿ, ಉಡಿತುಂಬಿ ಮನಸಾರ ಹಾರೈಸಿದ್ರು. ಅಷ್ಟಕ್ಕೂ ಏನ್ ಹೇಳೋದಿಕ್ಕೆ ಹೊರಟಿದ್ದೀರಾ ಎಂದ್ರಾ...ಈ ಸ್ಟೋರಿ ನೋಡಿ...

ಮಂಗಳ ಗೌರಿಗೆ ಮಂಗಳ ಸೀಮಂತ... ತಿಂಗಳು ತುಂಬ್ಯಾವೆ ಜೀವ ಜೀವಂತ.... 19ನೇ ಶತಮಾನದ ಹಾಡು ಬಹುತೇಕ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಈ ಹಾಡ ಹೇಳುವ ಮೂಲಕ ಕೈಗಳಿಗೆ ಹಸಿರು ಗಾಜಿನ ಬಳೆ ತೊಡಿಸಿ, ತಲೆಗೆ ಹೂವು ಮುಡಿಸಿ, ಹಣೆಗೆ ಅರಿಶಿನ-ಕುಂಕುಮ ಇಟ್ಟು, ತಟ್ಟೆಯಲ್ಲಿ ಸೀರೆ, ಹಣ್ಣು, ಗಾಜಿನ ಬಳೆ, ಎಲೆ, ಅಡಿಕೆ ಇಟ್ಟು ಆಕೆಗೆ ಆರತಿ ಎತ್ತಿ, ಉಡಿ ತುಂಬಿಸುವಾಗ ಊರ ಮಹಿಳೆಯರು ಹಾಡ್ತಿದ್ರು. ಇವತ್ತು ಅಂತಹ ಉಡಿ ತುಂಬುವ ಶಾಸ್ತ್ರವನ್ನ ಸರ್ಕಾರಿ ಅಧಿಕಾರಿಗಳು ಮತ್ತು ಸ್ಥಳೀಯರು ಈ ಮಹಿಳೆಯರಿಗೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರವಾದ್ರು.

ಹೌದು ಇಂತಹದೊಂದು ಸಾಮೂಹಿಕ ಸೀಮಂತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ಹಾಸನ ಜಿಲ್ಲೆಯ ದಕ್ಷಿಣ ಜೈನಕಾಶಿ ಶ್ರವಣಬೆಳಗೊಳದ ನಾಗಯ್ಯನಕೊಪ್ಪಲು. ಗ್ರಾಮದ ವಾಸು ಎಂಬುವರ ಪರಿಶ್ರಮದಿಂದ ಗ್ರಾಮಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಸ್ತ್ರೀ ಶಕ್ತಿ ಸಂಘ ಮುಂತಾದವರುಗಳ ನೆರವಿನ ಮೂಲಕ ತುಂಬು ಗಂರ್ಭಿಣಿಯರಿಗೆ ತವರು ಮನೆಯಂತೆಯೇ ಶಾಸ್ತ್ರೋಕ್ತವಾಗಿ ಉಡಿ ತುಂಬಿಸುವ ಮೂಲಕ ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡಿದ್ರು.

ನಾಗಯ್ಯನಕೊಪ್ಪಲಿನ ಕುಂಬಾರ ಕಾಲೋನಿಯಲ್ಲಿ ಹಬ್ಬದ ವಾತಾವರಣವೇ ಸೃಷ್ಠಿಯಾಗಿತ್ತು. ತವರು ಮನೆಯವರು ಮಗಳಿಗೆ ಅಥವಾ ಗಂಡನ ಮನೆಯವರು ಸೊಸೆಗೆ ಮಾಡಬೇಕಾದ ಶಾಸ್ತ್ರವನ್ನ ಇಲಾಖೆಗಳ ಸಹಯೋಗದಲ್ಲಿ ಅಧಿಕಾರಿ ವರ್ಗದವರು ಮಾಡಿದ್ದು ವಿಶೇಷ. ಈ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಸುಮಾರು 11 ಮಂದಿ ಗರ್ಭಿಣಿ ಮಹಿಳೆಯರಿಗೆ ವಿವಿಧ ಕ್ಷೇತ್ರದ ಮಹಿಳಾ ಸದಸ್ಯರುಗಳು ಉಡಿ ತುಂಬಿ ಅರಸಿ ಹಾರೈಸಿದ್ರು. ಅದ್ರಲ್ಲಿ ಆರೋಗ್ಯ ಇಲಾಖೆಯ ಇಬ್ಬರಿಗೆ ಉಡಿ ತುಂಬಿದ್ದು ವಿಶೇಷವಾಗಿದ್ರೆ, ಅದ್ರಲ್ಲೂ ಜೋಪಡಿಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬಳಿಗೆ ಸೀಮಂತ ಮಾಡಿದ್ದು, ವಿಶೇಷತೆಗಳಲ್ಲಿ ವಿಶೇಷ ಎಂದ್ರೆ ತಪ್ಪಾಗಲ್ಲ. ತಾಯ್ತನ ಏನೆಂಬುದು ಮಹಿಳೆಯರಿಗೆ ಮಾತ್ರವೇ ತಿಳಿದಿರುತ್ತೆ. ಬಸರಿ ಬಯಕೆಯಲ್ಲಿ ಸೀಮಂತ ಕಾರ್ಯವೂ ಕೂಡಾ ಒಂದು ಎನ್ನುವುದು ಇವರ ಮಾತು.

ಮಾನವ ಜನ್ಮ ದೊಡ್ಡದು. ಅದನ್ನು ಕಡೆಗಣಿಸಬೇಡಿರೋ ಹುಚ್ಚಪ್ಪಗಳಿರಾ ಎಂಬ ಪುರಂದರದಾಸರ ಮಾತನ್ನ ಇಲ್ಲಿ ನೆನೆಪಿಸಿಕೊಳ್ಳಲೇ ಬೇಕು. ಹುಟ್ಟು-ಸಾವಿನ ನಡುವೆ ಮಾನವ ಕೆಲವು ಸಂಸ್ಕಾರಗಳನ್ನು ಮಾಡಬೇಕು ಎಂದು ಧರ್ಮಶಾಸ್ತ್ರ ಹೇಳುತ್ತೆ. ಎಲ್ಲಾ ಸಂಸ್ಕಾರಗಳನ್ನು ಮಾಡಲು ಸಾಧ್ಯವಾಗದಿದ್ರು, ನಾಮಕರಣ, ಉಪನಯನ ಮತ್ತು ಸೀಮಂತ ಮೂರನ್ನಾದ್ರು ಮಾಡಲೇಬೇಕಂತೆ. ಆದ್ರೆ ಅಂತಹ ಕೆಲವು ಶಾಸ್ತ್ರಗಳನ್ನ ಮಾಡಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಅದನ್ನ ಅರಿತ ನಾನು ನಮ್ಮ ನಾಗಯ್ಯನಕೊಪ್ಪಲಿನಲ್ಲಿ ಮಾಡಬೇಕೆಂದು ಹಿರಿಯ ಮಹಿಳೆಯೊಬ್ಬರ ಮಾತಿನಂತೆ ಇಂದು ಇವರುಗಳ ಸಹಕಾರದಿಂದ 11 ಮಂದಿಗೆ ಸೀಮಂತ ಕಾರ್ಯ ಮಾಡಿದ್ದೇವೆ. ಇಂತಹ ಒಂದು ಕಾರ್ಯಕ್ಕೆ ಈಟಿವಿ ವಾಹಿನಿ ಸಹಕಾರ ನೀಡಿದ್ದು ನಮಗೆ ಹೆಮ್ಮೆ ವಿಷಯ ಎನ್ನುತ್ತಾರೆ ಆಯೋಜಕರು.

ತನ್ನ ಚೊಚ್ಚಲ ಕರುಳ ಕುಡಿಯನ್ನು ಗರ್ಭದಲ್ಲಿ ಹೊತ್ತ ಒಂದು ಹೆಣ್ಣು ಅದರ ಆಗಮನದ ನಿರೀಕ್ಷೆಯಲ್ಲಿ ಪುಳಕಿತವಾದಾಗ ನಡೆಯುವ ಕಾರ್ಯಕ್ರಮವೇ ಸೀಮಂತ ಶಾಸ್ತ್ರ. ನಾವು ನಮ್ಮ ಇಲಾಖೆಯಿಂದ ನಡೆಯುತ್ತಿರುವ ಕಾರ್ಯಕ್ರಮವೆಂದು ಬಂದೆವು. ನಮಗೂ ಸೀಮಂತ ನಡೆಯುತ್ತೆ ಎಂದು ನಾವು ಭಾವಿಸಿರಲಿಲ್ಲ. ಆದ್ರೆ ನಮ್ಮ ಹಿರಿಯ ವೈದ್ಯರು ಕಾರ್ಯಕ್ರಮದಲ್ಲಿಯೇ ನಮ್ಮನ್ನ ಕರೆದು ಸೀಮಂತ ಮಾಡಿದ್ದು ನಿಜಕ್ಕೂ ಒಂದು ಕ್ಷಣ ಭಾವುಕರಾದೆವು. ತಾಯ್ತನದ ಮಹತ್ವ ಏನೆಂಬುದು ಈ ಕಾರ್ಯಕ್ರಮದಿಂದ ಅರಿತುಕೊಂಡೆವು ಎಂಬುದು ಗರ್ಭಿಣಿ ದಾದಿಯೊಬ್ಬರ ಮಾತು.
ಶ್ರವಣಬೆಳಗೊಳದ ಸರ್ಕಾರಿ ಆಸ್ಪತ್ರೆಯ ವೈದ್ಯ ಯುವರಾಜ್ ಮೊದಲಿನಿಂದಲೂ ಸಾಮಾಜಿಕ ಕಾರ್ಯಗಳನ್ನ ಮಾಡುತ್ತಲೇ ಬಂದಿದ್ದಾರೆ. ಹಿಂದೆ ಕೂಡಾ ನುಗ್ಗೇಹಳ್ಳಿಯಲ್ಲಿದ್ದಾಗ, ಸುಮಾರು 35 ಮಂದಿ ತುಂಬು ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯ ಮಾಡಿದ್ರು. ಶ್ರವಣಬೆಳಗೊಳಕ್ಕೆ ವರ್ಗಾವಣೆಯಾದ ಬಳಿಕ ಮತ್ತೆ ಇಂತಹದೊಂದು ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ವೈದ್ಯ ವೃತ್ತಿಗೆ ಮತ್ತಷ್ಟು ಗೌರವ ತಂದುಕೊಟ್ಟಿದ್ದಾರೆ. ಹಣ ಇದ್ದವರು ತಮ್ಮ ಹೆಣ್ಣುಮಕ್ಕಳಿಗೆ ಬಯಕೆಯನ್ನ ಈಡೇರಿಸ್ತಾರೆ. ಆದ್ರೆ ಬಡ ಕುಟುಂಬದ ಹೆಣ್ಣುಮಕ್ಕಳ ಬಯಕೆಯನ್ನ ಈಡೇರಿಸುವಂತಹ ಕಾರ್ಯವನ್ನ ಮಾಡಿದ್ದು ನಮಗೂ ಖುಷಿ ತಂದಿದೆ.
ಒಟ್ಟಾರೆ, ಅಣ್ಣ ತಂಗಿಯರ ಬಂಧ. ಜನುಮ ಜನುಮದ ಅನುಬಂಧ ಎನ್ನುತ್ತಾರೆ. ಅಂತಹ ಸಂಬಂಧವನ್ನ ಸರ್ಕಾರಿ ಅಧಿಕಾರಿಗಳು ಬಡ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಬಾಂಧವ್ಯ ಬೆಸೆಯುವ ಸಾಮೂಹಿಕ ಸೀಮಂತ ಕಾರ್ಯ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು. ವಿಶೇಷವಾಗಿ ಕೊಬ್ಬರಿ ಮತ್ತು ತೆಂಗಿನತುರಿಯಿಂದ ಜೊತೆಗೆ ಸಕ್ಕರೆಯಿಂದ ಮಾಡಿದ ಪೂರಿ ಜೊತೆಗೆ ಜಿಲೆಬಿ, ಬಾದುಶಾ, ಮಸಾಲೆದೋಸೆ ಸೇರಿದಂತೆ ಸಿಹಿ ತಿನಿಸುಗಳ ಸ್ವಾದಿಷ್ಟ ಊಟವನ್ನ ಉಣಬಡಿಸಿ ಅವರುಗಳ ಬಯಕೆಗಳನ್ನ ಬಸುರಿಯ ಬಯಕೆಗಳನ್ನ ಈಡೇರಿಸಿದ್ದು, ಶ್ಲಾಘನೀಯವೇ ಸರಿ.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Nov 11, 2019
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ಹೆಚ್ಚು ಜನರು ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Aug 31, 2019
ಹಾಸನ: ಅನೈತಿಕ ಸಂಬಂಧ ಮತ್ತು ಹಣದ ವಿಚಾರಕ್ಕಾಗಿ ಮಗಳೇ ...
Has no content to show!

Visitors Counter

00552034
Today
This Month
Last Month
All days
9
1142
2268
552034
Your IP: 35.171.45.91
2019-11-15 09:06

About

Newsletter

Subscribe with us your email
Top