ಹಾಸನ: ಸುರಕ್ಷಿತ ವಾಹನ ಚಾಲನೆ ...
ಹಾಸನ: ಒಬ್ಬ ಮನುಷ್ಯ ಎಷ್ಟು ...
ಶ್ರವಣಬೆಳಗೊಳ: ಜನವರಿ ತಿಂಗಳಲ್ಲಿ
ತುಮಕೂರು : ಪ್ರತಿಯೊಬ್ಬರು ...
ಶ್ರವಣಬೆಳಗೊಳ: ಯುವ ಜನತೆ ...
ಹಾಸನ: ದೇಶದಲ್ಲಿ ಕೆಲ ನಾಯಕರನ್ನು
ಬೆಂಗಳೂರು: ಯಾವುದೇ ಉತ್ಸವ ...
ಹಾಸನ: ಒಂದು ಫಿಚ್ಚರ್ ತೆರೆಕಂಡರೆ
ಹಾಸನ: ಕೇವಲ ಕಾಮಗಾರಿ ಮಾಡುವ ಮೂಲಕ
ಹಾಸನ/ಬೇಲೂರು: ನೋಟಿಸ್ ಜಾರಿ ...
ಅರಸಿಕೆರೆ: ಶ್ರೀ ಸಚಿದಾನಂದ ...
ಹಾಸನ: ಹಾಸನ ತಾಲೂಕಿನ ಗ್ರಾಮೀಣ ...
ಹಾಸನ: ಎಲ್ಲರನ್ನೂ ಮಂತ್ರಿ ...
ಹಾಸನ: ಅಂತೂ ಇಂತೂ ಕೊನೆಗೂ ಜನರ ...
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ರಾಯಸಂದ್ರದಲ್ಲಿರುವ ಅಮೃತಮಹಲ್ ಜಾನುವಾರುಗಳ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್.

ಹಾಸನ:ಅ.27ರಂದು ಅಮೃತ್ ಮಹಲ್ ರಾಸು ತಳಿ ಸಂವರ್ಧನ ಉಪ ಕೇಂದ್ರದಲ್ಲಿ ನೀರು, ಆಹಾರವಿಲ್ಲದೆ 230 ರಾಸುಗಳು ನಾಲ್ಕು ಅಡಿ ಕೆಸರಿನಲ್ಲಿ ನಿಂತು ನರಳುತ್ತಿದ್ದ ಬಗ್ಗೆ ಜಾನುವಾರುಗಳ ಮೂಕರೋಧನೆ ಎಂಬ ಸುದ್ದಿಯನ್ನ ವರದಿ ಹಿನ್ನೆಲೆ.
ಇವತ್ತು ಪಶುಸಂಗೋಪನಾ ಸಚಿವ ಪ್ರಭು ಚೌಹ್ಹಾನ್ ಬೆಳ್ಳಂಬೆಳಗ್ಗೆಯೇ ರಾಯಸಂದ್ರದಲ್ಲಿರುವ ಅಮೃತಮಹಲ್ ಜಾನುವಾರುಗಳ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಅವ್ಯವಸ್ಥೆಗೆ ಕಾರಣವಾಗಿದ್ದ ಇಬ್ಬರು ಅಧಿಕಾರಿಗಳಾದ ಮಂಜುಳ ಮತ್ತು ಸೋಮಶೇಖರ್ ಎಂಬುವರನ್ನ ಅಮಾನತ್ತು ಮಾಡಿದರು.
ಪಶುಸಂಗೋಪನಾ ಇಲಾಖೆಯ ಹೆಚ್ಚುವರಿ ನಿರ್ಧೇಶಕ ಹಲಗಪ್ಪ, ಜಂಟಿ ನಿರ್ದೇಶಕರು, ಜಯಣ್ಣ, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರದ ಉಪನಿರ್ದೇಶಕ ರಮೇಶ್ ಕುಮಾರ್, ಸೇರಿದಂತೆ ಕೇಂದ್ರದ ನಿರೀಕ್ಷಕರಿಗೂ ನೋಟಿಸ್ ನೀಡಿ ತಪ್ಪು ಕಂಡುಬಂದಲ್ಲಿ ಅವರನ್ನ ಅಮಾನತ್ತು ಮಾಡುವುದಾಗಿ ತಿಳಿಸಿದ್ರು.
ಚನ್ನರಾಯಪಟ್ಟಣ ತಾಲೂಕಿನ ರಾಯಪುರ ಅಮೃತ್ ಮಹಲ್ ಕಾವಲ್ ಗೆ ಇಂದು ಭೇಟಿ ನೀಡಿದ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಅಲ್ಲಿನ ಅವ್ಯವಸ್ಥೆಯನ್ನ ಕಂಡು ಗರಂ ಆಗಿದ್ರು.
ನಾನು ಮಾಧ್ಯಮಗಳಲ್ಲಿ ನೋಡಿ ನನಗೂ ತುಂಬಾ ಬೇಸರವಾಯ್ತು. ಹಸುಗಳೆಂದ್ರ ನನಗೆ ಗೋಮಾತೆಯಿದ್ದ ಹಾಗೇ. ಅವುಗಳನ್ನ ನಾವು ರಕ್ಷಿಸಬೇಕೋ ಹೊರತು ಅವುಗಳನ್ನ ಹಿಂಸಿಸಬಾರದು.
ಸರ್ಕಾರ ಅಮೃತಮಹಲ್ ಕಾವಲಿಗೆ ಕೋಟಿ ಕೋಟಿ ಹಣ ಬಿಡುಗಡೆಗೊಳಿಸಿದ್ರು, ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಕ ಪ್ರಾಣಿಗಳು 3-4ದಿನ ಮೂಕರೋಧನೆ ಅನುಭವಿಸಿವೆ. ಹಾಗಾಗಿ ಸದ್ಯ ಇಬ್ಬರನ್ನನಾನು ಅಮಾನತ್ತು ಮಾಡಿದ್ದು, ಮುಂದೆ ಬೆಂಗಳೂರಿಗೆ ಹೋಗಿ ಮತ್ತೊಮ್ಮೆ ಕೂಲಂಕುಶವಾಗಿ ವರದಿ ಪರಿಶೀಲಿಸಿ ಮತ್ಯಾರ್ಯಾರು ಅಧಿಕಾರಿಗಳು ಈ ಅವ್ಯವಸ್ಥೆಗೆ ಕಾರಣವಾಗಿದ್ದಾರೆ ಅವರಗೆ ನೋಟೀಸ್ ನೀಡಿ ಕ್ರಮಜರುಗಿಸುತ್ತೇನೆ ಎಂದ್ರು.
ಇನ್ನು ಇದೇ ವೇಳೆ ಮಾತನಾಡಿದ ಸಿ.ಎನ್.ಬಾಲಕೃಷ್ಣ, ರಾಯಸಂದ್ರ ಅಮೃತ ಮಹಲ್ ಕೇಂದ್ರದಲ್ಲಿ ಅಧಿಕಾರಿಗಳು ಮತ್ತು ಕೆಲವು ಸಿಬ್ಬಂದಿ ವರ್ಗದವರು ನಿರ್ವಹಣೆ ಮಾಡುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ.
ಈ ಕೇಂದ್ರ ನಾಲ್ಕು ಕಾವಲಿಗೆ ಅನ್ವಯಿಸುತ್ತದೆ. ಡಿಸೆಂಬರ್ ನಲ್ಲಿ ಬರಬೇಕಾದ ಜಾನುವಾರುಗಳು ಮಳೆಯ ಹಿನ್ನಲೆಯಲ್ಲಿ ಬೇಗನೇ ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಹಾಗಾಗಿ ಸರಿಯಾದ ನಿರ್ವಹಣೆ ಮಾಡದೇ ಮತ್ತು ಅಲ್ಲಿನ ಸಗಣಿಯನ್ನ ತೆಗೆಯದೇ ಇದ್ದುದ್ದರಿಂದ ಈ ರೀತಿಯಾಗಿದೆ
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗಳಿಗೆ ಬೆಂಗಳೂರಿನ ಏಜೆನ್ಸಿಯವರು ಸರಿಯಾದ ಸಂಬಳ ನೀಡದೇ ಇರುವುದರಿಂದ ಈ ಎಲ್ಲಾ ಅವ್ಯವಸ್ಥೆಗೆ ಕಾರಣವಾಗಿದ್ದು, ಮುಂದೆ ಈಗಾಗದಂತೆ ನಿಗಾ ವಹಿಸಬೇಕೆಂದು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾಧಿಕಾರಿಗಳ ಸಭೆಯನ್ನ ಕರೆದು ಅವರಿಗೆ ಸೂಚನೆ ನೀಡಲಾಗುವುದು ಎಂದ್ರು.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Jan 13, 2020
ಹಾಸನ: ಸುರಕ್ಷಿತ ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Nov 05, 2019
ಹಾಸನ: ಮನೆ ಕಟ್ಟುವ ವಿಚಾರಕ್ಕೆ ಅಣ್ಣ ನೀಡುತ್ತಿದ್ದ ...
Has no content to show!

About

Newsletter

Subscribe with us your email
Top