ಹಾಸನ: ಸುರಕ್ಷಿತ ವಾಹನ ಚಾಲನೆ ...
ಹಾಸನ: ಒಬ್ಬ ಮನುಷ್ಯ ಎಷ್ಟು ...
ಶ್ರವಣಬೆಳಗೊಳ: ಜನವರಿ ತಿಂಗಳಲ್ಲಿ
ತುಮಕೂರು : ಪ್ರತಿಯೊಬ್ಬರು ...
ಶ್ರವಣಬೆಳಗೊಳ: ಯುವ ಜನತೆ ...
ಹಾಸನ: ದೇಶದಲ್ಲಿ ಕೆಲ ನಾಯಕರನ್ನು
ಬೆಂಗಳೂರು: ಯಾವುದೇ ಉತ್ಸವ ...
ಹಾಸನ: ಒಂದು ಫಿಚ್ಚರ್ ತೆರೆಕಂಡರೆ
ಹಾಸನ: ಕೇವಲ ಕಾಮಗಾರಿ ಮಾಡುವ ಮೂಲಕ
ಹಾಸನ/ಬೇಲೂರು: ನೋಟಿಸ್ ಜಾರಿ ...
ಅರಸಿಕೆರೆ: ಶ್ರೀ ಸಚಿದಾನಂದ ...
ಹಾಸನ: ಹಾಸನ ತಾಲೂಕಿನ ಗ್ರಾಮೀಣ ...
ಹಾಸನ: ಎಲ್ಲರನ್ನೂ ಮಂತ್ರಿ ...
ಹಾಸನ: ಅಂತೂ ಇಂತೂ ಕೊನೆಗೂ ಜನರ ...
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
Kondi News

Kondi News

Email: This email address is being protected from spambots. You need JavaScript enabled to view it.

ಹಾಸನ: ಸುರಕ್ಷಿತ ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಎನ್. ನಂದಿನಿ ತಿಳಿಸಿದ್ರು. 

ಹಾಸನ ನಗರದ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಜ.11 ರಿಂದ 17 ರವರಗೆ ಆಯೋಜಿಸಿರುವ 31 ನೇ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಜಾಥಾಕ್ಕೆ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ್ರು. 

ಅಫಘಾತಗಳು ದಿನೇ-ದಿನೇ ಹೆಚ್ಚಾಗುತ್ತಿದ್ದು ಯುವಕರು ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದ ಸವಾರರಿಗೆ ದಂಡ ವಿಧಿಸುವುದರ ಬದಲಾಗಿ ಗುಲಾಬಿ ಹೂ ಕೊಡುವುದರ ಮೂಲಕ ಹೆಲ್ಮೆಟ್ ಧರಿಸಿ ಸುರಕ್ಷತೆಯಿಂದ ವಾಹನ ಚಾಲನೆ ಮಾಡುವಂತೆ ಸೂಚಿಸಿದ ಅವರು 2019 ನೇ ಸಾಲಿನಲ್ಲಿ ರಸ್ತೆ ಸುರಕ್ಷತೆಯನ್ನು ಪಾಲಿಸದೆ 1500 ಮಂದಿ ಅಪಘಾತದಲ್ಲಿ ಗಾಯಗೊಂಡರೆ 451 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 

ಇನ್ನು ಚಾಲಕರ ಬೇಜವಾಬ್ದಾರಿಯಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿರೋ ಉದಾಹರಣೆಗಳನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಹಾಗಾಗಿ ಚಾಲಕರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಿವುದರ ಜೊತೆಗೆ ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು ಎಂದರು. 

ಪೊಲೀಸ್ ವೃತ್ತ ನಿರೀಕ್ಷಕರಾದ ಕೃಷ್ಣರಾಜು ಅವರು ಮಾತನಾಡಿ ರಸ್ತೆ ಸುರಕ್ಷಾ ಸಪ್ತಾಹವು ಒಂದು ವಾರಗಳ ಕಾಲ ನಡೆಯಲಿದ್ದು ವಾಹನ ಚಾಲಕರಿಗೆ ಅಪಘಾತಗಳು ತಡೆಗಳ ಬಗ್ಗೆ ಅರಿವನ್ನು ಮೂಡಿಸಲಾಗುವುದು. ಕ್ಷಣಿಕವಾದ ನಿರ್ಲಕ್ಷೆತೆಯಿಂದ ತಮ್ಮ ಜೀವನವನ್ನು ಬಲಿಕೊಟ್ಟು ಜೊತೆಗೆ ತಮ್ಮ ಅವಲಂಬಿತರನ್ನೂ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಟುಂಬದವರನ್ನ ತೊಂದರೆಗೀಡು ಮಾಡುತ್ತಿರುವುದರ ಹಿನ್ನಲೆಯಲ್ಲಿ ಜಾಗೃತಿಯ ಮೂಲಕ ಅಪಘಾತ ತಪ್ಪಿಸುವ ಕಾರ್ಯವಾಗಬೇಕಿದೆ ಎಂದ್ರು.  

ರಸ್ತೆ ಸುರಕ್ಷತೆ ಜೀವನ ರಕ್ಷೆ ಎಂಬ ಘೋಷಣೆಯೊಂದಿಗೆ ಪೊಲೀಸರು ನೀಡಿದ ಕೆಲವು ಸೂಚನೆಗಳು:

 • ವಾಹನ ಚಾಲನೆ ಮಾಡುವಾಗ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ವಾಹನ ಚಲಾಯಿಸಬೇಕು.
 • ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ.
 • ಕಾರು, ಜೀಪಿನಂತಹ ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಿ.
 • ಚಾಲನೆ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಸಬೇಡಿ.
 • ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಅಫಘಾತಗಳನ್ನು ತಪ್ಪಿಸಿ.
 • ಸಂಚಾರದ ವೇಳೆ ಪಥ ನಿಯಮಗಳ ಪಾಲಿಸಿ.
 • ಸಿಗ್ನಲ್‍ಗಳಲ್ಲಿ ಜೀಬ್ರಾ ಕ್ರಾಸಿಂಗ್ ಮೇಲೆ ವಾಹನಗಳನ್ನು ನಿಲ್ಲಿಸಬೇಡಿ.
 • ವಾಹನಗಳ ನಡುವೆ ಸುರಕ್ಷಿತ ಅಂತರವಿರಲಿ. ರಾತ್ರಿ ವೇಳೆ ಪ್ರಖರ ದೀಪಗಳನ್ನು ಬಳಸಬೇಡಿ.
 • ಸಂಚಾರ ದೀಪಗಳನ್ನು ಉಲ್ಲಂಘಿಸಬೇಡಿ.
 • ಹಳದಿ ದೀಪ ದಾಟಬೇಡಿ-ಎಡಭಾಗದಿಂದ ಮುನ್ನುಗ್ಗಬೇಡಿ.
 • ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಕೊಡಬೇಡಿ.
 • ವಾಹನ ಚಲಾಯಿಸುವವರು ಚಾಲನಾ ಪರವಾನಗಿ, ವಾಹನ ವಿಮೆ, ವಾಹನದ ದಾಖಲಾತಿಗಳನ್ನು ಹೊಂದಿರಬೇಕು.
 • ವಾಹನದ ನೊಂದಣಿ ಫಲಕದ ಮೇಲೆ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಸಂಘ, ಸಂಸ್ಥೆಗಳಂತಹ ಹೆಸರನ್ನ ವಾರದೊಳಗೆ ತೆಗೆಯಬೇಕು.

ಎಂಬ ಸೂಚನೆಗಳ ಫಲಕಗಳನ್ನ ಹಿಡಿದು ನಗರದ ಹೇಮಾವತಿ ಪ್ರತಿಮೆಯಿಂದ ಹೊರಟು ಆರ್.ಸಿ.ರಸ್ತೆ, ಬಿಗ್ ಬಜಾರ್, ಬಿ.ಎಂ.ರಸ್ತೆ ಮೂಲಕ ಎನ್.ಆರ್.ವೃತ್ತದಲ್ಲಿ ಜಾಥಾ ಅಂತ್ಯಗೊಂಡಿತು. ಐ.ಪಿ.ಎಸ್. ಅಧಿಕಾರಿ ಅಂಶುಕುಮಾರ್, ನಗರ ಸಂಚಾರಿ ಸಹಾಯಕ ಆರಕ್ಷಕರಾದ ಪ್ರಮೋದ್ ಕುಮಾರ್, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಕೊಂಡಿನ್ಯೂಸ್, ಹಾಸನ.

ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ಎಂಬುದು ಮುಖ್ಯವಲ್ಲ. ಅವರು ಹೇಗೆ ಬದುಕಿದ್ದರು ಎಂಬುದು ಮುಖ್ಯ.  ಕೇವಲ ತನಗೆ ಹಾಗೂ ತನ್ನ ಕುಟುಂಬಕ್ಕೆ ಬಾಳುವುದು ಸಾಮಾನ್ಯ. ಆದ್ರೆ ತನ್ನ ಸುತ್ತ ಮುತ್ತಲ ಸಮಾಜ, ಹಳ್ಳಿ, ದೇಶಕ್ಕೆ ಒಳಿತು ಮಾಡಬೇಕೆಂಬ ಹಂಬಲ ಎಲ್ಲರಿಗೂ ಇರುವುದಿಲ್ಲ. ಅಂತಹವರಲ್ಲಿ ನಮ್ಮ ಸಿ.ಎಸ್.ಕೃಷ್ಣಸ್ವಾಮಿ (90) ಕೂಡಾ ಒಬ್ಬರು ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ. ಅಂತಹ ಮಹಾನ್  ಚೇತನ ಕಣ್ಮರೆಯಾಗಿದ್ದು, ಹಾಸನದ ಪತ್ರಿಕಾಲೋಕದ ಶಿಕ್ಷಣಲೋಕದ ಸಮಾಜದ ಬಹುದೊಡ್ಡ ಕೊಂಡಿ ಕಳಚಿತು ಎನ್ನುವುದನ್ನ ಹೇಳುವುದಕ್ಕೆ ವಿಷಾಧ ವ್ಯಕ್ತಪಡಿಸುತ್ತೇವೆ.

ಜನನ: 28.03.1929

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಿ.ಎಸ್.ನರಸಿಂಹಮೂರ್ತಿ ಮತ್ತು ಭಾಗೀರಥಮ್ಮ ದಂಪತಿಗಳ 3ನೇ ಮಗನಾಗಿ 28.03.1929 ರಲ್ಲಿ ಜನಿಸಿದ್ರು. ಪ್ರಾಥಮಿಕ ಶಿಕ್ಷಣವನ್ನ ಶ್ರವಣಬೆಳಗೊಳ ಮತ್ತು ಚನ್ನರಾಯಪಟ್ಟಣದಲ್ಲಿ ಮುಗಿಸಿ ಪ್ರೌಢಶಾಲೆ ಶಿಕ್ಷಣವನ್ನ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಮಗಿಸಿದ್ರು. 1946ರಲ್ಲಿ ಎಸ್.ಎಸ್.ಎಲ್.ಸಿ. ಪ್ರಥಮ ಶ್ರೇಣಿಯಲ್ಲಿ ಉತೀರ್ಣರಾಗಿದ್ದು, ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಪಾಸ್ ಮಾಡಿದ್ರು. ಇನ್ನು ಮೈಸೂರಿನಲ್ಲಿಯೇ ಬಿಎಸ್ಸಿ, ಬಿ.ಇಡ್, ಮತ್ತು ಪತ್ರಿಕೋದ್ಯಮ ಡಿಪ್ಲೋಮಾ ಶಿಕ್ಷಣ  ಪೂರೈಸಿದ್ರು.

 

ಸಿ.ಎಸ್.ಕೆ.ಅವರ ದಾಂಪತ್ಯ ಜೀವನ : 

ಚಿಕ್ಕ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿ ಹೊತ್ತಿದ್ದ ಸಿ.ಎಸ್.ಕೆ. ಕಷ್ಟದ ದಿನದಲ್ಲಿ ಸ್ನೇಹಿತರ ಆರ್ಥಿಕ ಸಹಾಯ ಪಡೆದು 1964ರಲ್ಲಿ ಅಂದ್ರೆ ತಮ್ಮ 34ನೇ ವಯಸ್ಸಿನಲ್ಲಿ ಬಿ.ಎಸ್ಸಿ ಪಧವಿದರೆಯಾದ ಸುಧಾರವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ರು. ಪಾಪ್ಯುಲರ್ ಏಜೆನ್ಸಿಯ ನಾಗರಾಜ, ಪಾಪಣ್ಣ ಮುಂತಾದವರನ್ನ ಅವರು ಬದುಕಿನ ದಿನದಲ್ಲಿ ಸದಾ ನೆನಪಿಸಿಕೊಳ್ಳುತ್ತಿದ್ದರು. ಸಿ.ಎಸ್.ಕೆ.ದಂಪತಿಗೆ ಲಕ್ಷ್ಮಿ ಮತ್ತು ವೀಣಾ ಇಬ್ಬರು ಹೆಣ್ಣುಮಕ್ಕಳು. ಬೆಂಗಳೂರಿನಲ್ಲಿ ಲಕ್ಷ್ಮಿ ಮತ್ತು ವೀಣಾ ಅಮೇರಿಕಾದಲ್ಲಿ ನೆಲೆಸಿದ್ದಾರೆ.

  

ರಾಮಕೃಷ್ಣ ವಿದ್ಯಾಲಯ ಉಗಮ :

ಹಾಸನದಲ್ಲಿ ಆಗಿನ ಕಾಲಕ್ಕೆ ಖಾಸಗಿ ಶಾಲೆ ಎಂದರೆ ಸಂತ ಫಿಲೋಮಿನಾ ಒಂದು. ಅದರಲ್ಲಿ ಅಲ್ಲಿನ ಪ್ರತಿಯೊಂದು ರೀತಿ-ನೀತಿ-ಪದ್ದತಿಗಳು ಪಾಶ್ಚಾತ್ಯ ಕ್ರಿಶ್ಚಿಯನ್ ಮಿಷನರಿಗಳನ್ನು ಆದರಿಸಿದ್ಧವಾಗಿತ್ತು. ಅವುಗಳ ಮಧ್ಯೆ 1963 ರಲ್ಲಿ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು 1952ರಲ್ಲಿ ಹಾಸನಕ್ಕೆ ಬಂದು ನೆಲ ಕಂಡು ಶ್ರೀ ರಾಮಕೃಷ್ಣ ಟ್ಯುಟೋರಿಯಲ್ಸ್ ಮೂಲಕ ಶಿಕ್ಷಣ ನೀಡುತ್ತಾ, ನಂತರದಲ್ಲಿ ಕೆ. ಆರ್. ಪುರಂನಲ್ಲಿ ಶ್ರೀ ರಾಮಕೃಷ್ಣ ವಿದ್ಯಾಲಯ, ಹೋಲಿಮದರ್‌ ಎಂಬ ಪ್ರಾಥಮಿಕ / ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ವತಂತ್ರವಾಗಿ ಸಿ.ಎಸ್.ಕೆ. ಸ್ಥಾಪಿಸಿದರು. ಕಳೆದ 5 ದಶಕಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದು ಹಾಸನ ಈ ಹೆಸರು ನೀಡಲು ಸಿ.ಎಸ್.ಕೆಯವರು ತಂದೆ ಸಲಹೆ ಹಾಗೂ ರಾಮಕೃಷ್ಣಾಶ್ರಮದ ಬಗ್ಗೆ ಇವರಿಗೆ ಚಿಕ್ಕಂದಿನಿಂದಲೂ ಇದ್ದ ಶ್ರದ್ಧಾ ಭಕ್ತಿಗಳು ಇದಕ್ಕೆ ಕಾರಣವಂತೆ. ನಿರಂತರವಾಗಿ ಶ್ರೀ ಶಾರದಾ ಮಾತೆ, ಶ್ರೀ ರಾಮಕೃಷ್ಣ, ಶ್ರೀ ವಿವೇಕಾನಂದ ಸರಳ ಜೀವನ, ಆದರ್ಶ, ಅನುಕರಣೀಯ ತತ್ವಗಳ ಪ್ರಭಾವಕ್ಕೆ ಸಿ.ಎಸ್.ಕೆ.ಯವರು ಒಳಗಾಗಿದ್ದರು. ಅವರ ಆದರ್ಶಗಳು ಅನುಸರಣೆಯನ್ನು ತಮ್ಮಲ್ಲಿ ಮತ್ತು ಶಿಕ್ಷಕ ವರ್ಗದಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಕಾಣುವುದೇ ಅವರ ಮಹತ್ತರ ಆಶಯವಾಗಿತ್ತು. ಹಾಗೆಯೇ ಅದರಂತೆ ಮಾಡಿ ತೋರಿಸಿದ್ದ ಮಹಾಂತ ಚೇತನಾ.

 

ಹಾಸನ ಜಿಲ್ಲೆಯ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ 36 ವರ್ಷಗಳ ಕಾಲ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಖಜಾಂಚಿಯಾಗಿ ಸೇವೆ ಸಲ್ಲಿಸುವುದು ಮತ್ತೊಂದು ವಿಶೇಷ. ಮೊನ್ನೆ ನಡೆದ ಶಿಕ್ಷಣ ಸಂಸ್ಥೆಯ ಚುನಾವಣೆಯಲ್ಲಿ ಭಾಗವಹಿಸಿದ್ದರು. ಜೊತೆ ಹಾಸನ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾಗಿ, ಸಪ್ತರ್ಷಿ ಫೌಂಡೇಷನ್ ಟ್ರಸ್ಟಿಯಾಗಿ ಅನೇಕ ಸೇವಾ ಸಂಸ್ಥೆಗಳ ರೂವಾರಿಯಾಗಿ, ಸಾಧಿಸಿರುವುದು ಯುವ ಜನರಿಗೆ ಆದರ್ಶಪ್ರಾಯವಾಗಿದ್ರು.

   

ಪುಸ್ತಕ ಪ್ರಿಯರಾಗಿದ್ದ ಸಿ.ಎಸ್.ಕೆ.    

ಪುಸ್ತಕ ಪ್ರಿಯ ಸಿ.ಎಸ್.ಕೆ.ಯವರು ಅಧ್ಯಯನಶೀಲರು. ಅವರ ಮನೆಯ ಹಾಲಿನಲ್ಲಿ, ರೂಮುಗಳಲ್ಲಿ ಅನೇಕ ಕಪಾಟುಗಳಿದ್ದು ಅದರಲ್ಲಿ ಪುಸ್ತಕ ರಾಶಿಯೇ ಇದೆ. ಅಲ್ಲಿರುವ ಗ್ರಂಥಗಳನ್ನು ಅವಲೋಕಿಸಿದಾಗ ನಮಗೆ ಕಾಣುವುದು ರಾಮಕೃಷ್ಣಾಶ್ರಮದ ಎಲ್ಲ ಪ್ರಕಟಣೆಗಳು, ರಾಷ್ಟ್ರೋತ್ಥಾನ ಸಾಹಿತ್ಯ ವಿಚಾರಾತ್ಮಕ ಗ್ರಂಥಗಳು, ಶ್ರೇಷ್ಠ ಕವಿ ಪುಂಗವ, ದಾರ್ಶನಿಕರ ಪುಸ್ತಕಗಳಲ್ಲದೆ ರಾಮಾಯಣ, ಮಹಾಭಾರತ, ಭಗವದ್ಗೀತೆ, ಉಪನಿಷತ್, ವೇದಗಳ ಅನೇಕ ಸಂಪುಟಗಳು, ಹೀಗೆ ಪುಸ್ತಕಗಳ ಪಟ್ಟಿ ಸಾಗುತ್ತದೆ. ಅನೇಕರು ಅವರನ್ನು ಭೇಟಿಯಾಗಲೆಂದು ಹೋದಾಗ ಗಮನಿಸುವುದು ಅವರ ಕೈಯಲ್ಲಿ ಒಂದಲ್ಲ ಒಂದು ಪುಸ್ತಕ.  ಯಾವಾಗಲೂ ಇರುವುದನ್ನು, ಅನೇಕ ಪುಸ್ತಕ-ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಬಂದಿರುವ ಶ್ರೀಯುತರು ಮನುಷ್ಯನನ್ನು ಉತ್ತಮನಾಗಿ ಮಾಡಲು ಇಂತಹ ಪುಸ್ತಕಗಳು ಅತ್ಯಗತ್ಯ. ಹಾಗಾಗಿ ಎಲ್ಲರೂ ಈ ಪುಸ್ತಕಗಳನ್ನು ಕೊಂಡು ಓದಿ, ಜೀವನದಲ್ಲಿ ಅದರ ತಿರುಳನ್ನು ಅನುಸರಿಸಿ ಜೀವನೋದ್ದಾರ ಮಾಡಿಕೊಳ್ಳಿ ಎಂದು ಸಮಾರಂಭದಲ್ಲಿ ಹೇಳುತ್ತಿದ್ದರು. 

ಪತ್ರಕರ್ತರಾಗಿ ಸಿ.ಎಸ್.ಕೆ. 

ಸಿಎಸ್ಕೆ ಎಂದೆ ಖ್ಯಾತನಾಮರಾಗಿದ್ದವರು ಕೃಷ್ಣಸ್ವಾಮಿಯವರು. ಪಿಟಿಐ ಸುದ್ದಿ ಸಂಸ್ಥೆಯ ಹಿರಿಯ ವರದಿಗಾರರಾಗಿ, ಅಂದಿನ ಜನಮಿತ್ರ ಸಂಪಾದಕರಾಗಿದ್ದ ಕೃ.ನ.ಮೂರ್ತಿಯವರಿಗೆ ಸಲಹೆ ಸೂಚನೆಗಳನ್ನ ನೀಡುತ್ತಾ ಆ ಪತ್ರಿಕೆಗೆ ವಿಶೇಷ ವರದಿಗಾರರಾಗಿ ಸೇವೆಸಲ್ಲಿಸಿದ್ದ ಇವರು, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಗೌರವ ಸಂಪಾದಕತ್ವದಲ್ಲಿ ಅನೇಕ ಸ್ಥಳೀಯ ದಿನಪತ್ರಿಕೆ ಮತ್ತು ವಾರಪತ್ರಿಕೆಗಳು ಹೊರಬಂದಿದ್ದು, ಅವರೆಲ್ಲರು ಇಂದು ಅವರ ಸಹಕಾರವನ್ನ ಮರೆಯದೇ ನೆನಪಿಸಿಕೊಳ್ಳುತ್ತಾರೆ. 1970ರ ದಶಕದಲ್ಲಿ ಮುದ್ರಾಸ್ ನಲ್ಲಿ ಪ್ರಕಟಗೊಳ್ಳುತ್ತಿದ್ದ ಯುವಭಾರತೀ ಎಂಬ ಮಾಸಿಕ ಪತ್ರಿಕೆಗೆ ಹಾಸನ ಜಿಲ್ಲಾ ಅಧಿಕೃತ ಏಜೆಂಟ್ ರಾಗಿ ಮತ್ತು ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.

   

ಅದ್ರಲ್ಲೂ 2015ರಲ್ಲಿ ಪ್ರಾರಂಭಿಸಿದ ಹಾಸನದ ಮೊಟ್ಟಮೊದಲ ವೆಬ್ ನ್ಯೂಸ್ ಪೋರ್ಟಲ್ "ಕೊಂಡಿ ನ್ಯೂಸ್". ಮೊದಲು ಬ್ಲಾಕ್ ಸ್ಪಾಟ್ ನಲ್ಲಿ ಸುದ್ದಿ ಬಿತ್ತರಿಸುತ್ತಿದ್ದ ನನಗೆ ಅಧಿಕೃತವಾಗಿ ಅಂತರ್ಜಾಲ ಸುದ್ದಿ ಮಾಧ್ಯಮ ತೆರೆಯಲು ಆರ್ಥಿಕ ನೆರವನ್ನ ನೀಡಿ 'ಕೊಂಡಿನ್ಯೂಸ್' ಪ್ರಾರಂಭಕ್ಕೆ ಬೆಂಬಲಿಸಿ ಪ್ರೋತ್ಸಾಹಿಸಿದವರಲ್ಲಿ ಪ್ರಮುಖರು ಸಿ.ಎಸ್.ಕೆ.ಎಂದರೆ ತಪ್ಪಾಗದು. 5 ವರ್ಷಗಳಲ್ಲಿ 8ಲಕ್ಷಕ್ಕೂ ಅಧಿಕ ವೀಕ್ಷಕರನ್ನ ಹೊಂದಿದ್ದ, ಅವರ ಮಾರ್ಗದರ್ಶನದಲ್ಲಿಯೇ ಸಾಗುತ್ತಾ ಬಂದಿದ್ದ ಕೊಂಡಿನ್ಯೂಸ್ ನ್ಯೂಸ್ ಪೋರ್ಟಲ್ ನ್ನ ಕಾರಣಾಂತರದಿಂದ ನಾನು ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಬದಲಿಗೆ ನನ್ನ ಸ್ನೇಹಿತ ಶಶಿಕುಮಾರ್ ಮತ್ತು ಅವರ ಸ್ನೇಹಿತರು ಹೊಣೆಹೊತ್ತುಕೊಂಡು ಮುನ್ನೆಡೆಸುತ್ತಿದ್ದು, ಇಂದು 9ಲಕ್ಷಕ್ಕೂ ಅಧಿಕ ವೀಕ್ಷಕರನ್ನ ಸಂಪಾದಿಸಿದ್ದಾರೆ. ಈ ಬಾರಿಯ ಹಾಸನಾಂಬೆ ದರ್ಶನದ ವೇಳೆ ಹಾಸನಾಂಬೆ ವಿಶೇಷಾಂಕ ಎಂಬ ವಿಶೇಷ ಸಂಚಿಕೆಯೊಂದನ್ನ ಹೊರತಂದು ಪರೋಕ್ಷವಾಗಿ ಅವರಿಗೆ ಸಮರ್ಪಿಸಿದ್ದರು. ಇನ್ನು ಮುಂದಿನ ತಿಂಗಳು ಕೊಂಡಿನ್ಯೂಸ್ ಪ್ರಾದೇಶಿಕ ನ್ಯೂಸ್ ಪೋರ್ಟಲ್ ಆಗಿ ಹೊರಹೊಮ್ಮುತ್ತಿದ್ದು, ಅವರಿಂದಲೇ ಚಾಲನೆ ಮಾಡಿಸಬೇಕೆಂದುಕೊಂಡಿದ್ದರು. ಆದ್ರೆ ಅದಕ್ಕೂ ಮೊದಲೇ ಅಗಲಿದ್ದು ಕೊಂಡಿನ್ಯೂಸ್ ನ-ಕೊಂಡಿ ಕಳಚಿದ್ದು ನೋವಿನ ಸಂಗತಿ. 

"ಕುಂಭೇನಹಳ್ಳಿ" ಎಂದೇ ಮೂದಲಿಸುತ್ತಿದ್ದರು: 

ಅಲ್ಲದೇ ನಾನು ರಾಜ್ ನ್ಯೂಸ್ ವಾಹಿನಿಯಲ್ಲಿದ್ದಾಗಲೂ ನನಗೆ ಜಿಲ್ಲೆಯ ಅನೇಕ ವಿಚಾರಗಳನ್ನ ತಿಳಿಸುತ್ತ, ವಿಶೇಷ ವರದಿಗಳನ್ನ ಮಾಡಲು ಸಹಕಾರ ನೀಡಿದಷ್ಟೆಯಲ್ಲದೇ, ಸುದ್ದಿಟಿವಿಯಲ್ಲಿದ್ದಾಗಲೂ ಮಾರ್ಗದರ್ಶಕರಾಗಿದ್ದರು. ಅನೇಕ ಬಾರಿ ನನ್ನ ಮತ್ತು ಅಂಬಿಕಾ ಪ್ರಸಾದ್ ರನ್ನ ಮನೆಗೆ ಕರೆಸಿಕೊಂಡು ಸಾಕಷ್ಟು ವಿಚಾರಗಳನ್ನ ಹಂಚಿಕೊಳ್ಳುತ್ತಿದ್ದರು. ಹೋದಾಗಲೆಲ್ಲಾ ಕುಂಭೇನಹಳ್ಳಿ ಎಂದು ಮೂದಲಿಸಿ ಆತ್ಮಿಯತೆಯಿಂದ ಮಾತನಾಡುತ್ತಿದ್ದರು. ನನ್ನ ಹಾಸನದ ಪತ್ರಿಕೋದ್ಯಮದ ಗುರುಗಳಾಗಿ ಮಾರ್ಗದರ್ಶಕರಾಗಿ ಇದ್ದ ಇವರು ಇಂದು ಕೊನೆಯುಸಿರೆಳೆದರು ಎಂಬ ಮಾತು ಕೇಳಿ ಮನಸ್ಸಿಗೆ ಬಹಳ ನೋವುಂಟಾಯಿತು. 

ಅನಾರೋಗ್ಯದ ನಡುವೆಯೂ ಸಾಮಾಜಿಕ ಕಾರ್ಯದಲ್ಲಿ ತೊಡಗುತ್ತಿದ್ದರು. ನರೇಂದ್ರ ಮೋದಿ ಅಭಿಮಾನಗಳ ಸಂಘದ ಜಿಲ್ಲಾಧ್ಯಕ್ಷರಾಗಿ ಸಲ್ಲಿಸಿದ್ದಾರೆ. ಹಾಸನ ದುದ್ದ ಮಾರ್ಗದ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಾಕಷ್ಟು ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದ್ರು. ಇದಲ್ಲದೇ ರುದ್ರಭೂಮಿ ಅಭಿವೃದ್ದಿ ಮಂಡಳಿ, ವೈದಿಕ ಮಂಡಳಿ,ರಾಷ್ಟ್ರ ಹಿತರಕ್ಷಣಾ ವೇದಿಕೆ, ಶನೈಶ್ಚರ ದೇವಾಲಯ, ಶಂಕರ ಜಯಂತೋತ್ಸವ, ವಿರೂಪಾಕ್ಷೇಶ್ವರ ದೇವಾಲಯಕ್ಕೆ ಸಾಕಷ್ಟು ಅಭಿವೃದ್ದಿ ಕಾರ್ಯವನ್ನ ಮಾಡಿದವರಲ್ಲಿ ಇವರು ಮೊದಲಿಗರು. ಇದಲ್ಲದೇ ವಿಪ್ರ ಪಾಕತಜ್ಞ ತಜ್ಞರನ್ನ ಒಗ್ಗೂಡಿಸಿ ಸಂಘ ಸ್ಥಾಪನೆ ಮಾಡಿ ಅವರಿಗೆ ಮಾರ್ಗದರ್ಶಕರಾಗಿದ್ದವರು ಸಿ.ಎಸ್.ಕೆ.

  

ಎಲ್ಲರನ್ನ ಅಗಲಿದ ಮಹಾ ಚೇತನ: (ನಿಧನ: 20.12.2019)

ಹೌದು ಕಳೆದ ವಾರದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು,ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅವರ ಮಗಳು ಲಕ್ಷ್ಮಿ ಮನೆಯಲ್ಲಿ ನಿಧನರಾಗಿದ್ದು, ಅವರ ಸಾವಿನ ದುಃಖವನ್ನ ಭರಿಸುವ ಶಕ್ತಿಯನ್ನ ಆ ಕುಟುಂಬಕ್ಕೆ ದೇವರು ನೀಡಲಿ. ಅವರ ಆತ್ಮಕ್ಕೆ ಶಾಂತಿ ನೀಡಲಿ. ಅಂತಹ ಮಹಾನ್ ಚೇತನಕ್ಕೆ ಕೊಂಡಿನ್ಯೂಸ್ ಪರವಾಗಿಯೂ ಭಾವಪೂರ್ಣ ಶ್ರದ್ದಾಂಜಲಿ... 

 • ಸುನೀಲ್ ಕುಂಭೇನಹಳ್ಳಿ, ವಿಷಯ ಸಂಪಾದಕ, ಈಟಿವಿ ನ್ಯೂಸ್, ಹಾಸನ.

ಶ್ರವಣಬೆಳಗೊಳ: ಜನವರಿ ತಿಂಗಳಲ್ಲಿ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಶಿವರಾತ್ರಿಶ್ವರ ಶಿವಯೋಗಿಗಳ ಪ್ರಚಾರರಥಕ್ಕೆ ಇವತ್ತು ಶ್ರವಣಬೆಳಗೊಳಕ್ಕೆ ಆಗಮಿಸಿತು. ಪುಷ್ಪಾಲಂಕೃತಗೊಂಡ ಪ್ರಚಾರ ರಥಕ್ಕೆ ಶ್ರವಣಬೆಳಗೊಳದ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಭಕ್ತಿ ಪೂರ್ವಕ ನಮನ ಸಲ್ಲಿಸಿ ಭವ್ಯವಾಗಿ ಬರಮಾಡಿಕೊಂಡರು.

ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜನವರಿ ತಿಂಗಳಲ್ಲಿ ಜರುಗಲಿದ್ದು ಪೂರ್ವಭಾವಿಯಾಗಿ ಸಂಚಾರಿ ರಥ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಭಕ್ತಾದಿಗಳಿಗೆ ಆಹ್ವಾನ ಮಾಡಲಾಗುತ್ತಿದೆ. ರಥವನ್ನ ಬರಮಾಡಿಕೊಂಡ ಬಳಿಕ ಸಂಚಾರಿ ರಥ ಶ್ರವಣಬೆಳಗೊಳದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ಭಾಗ್ಯ ನೀಡಿತು. 

ಸುತ್ತೂರು ಮಠದಲ್ಲಿ ಪ್ರತಿವರ್ಷ ನಡೆಯುವ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಅಷ್ಟೇ ಅಲ್ಲದೆ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬಂದು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸಂಚಾರಿ ರಥ ಶ್ರವಣಬೆಳಗೊಳದ ಮೂಲಕ ಕಿಕ್ಕೇರಿ ಮಾರ್ಗವಾಗಿ ಕೆಆರ್ ಪೇಟೆ ತಲುಪಲಿದ್ದು ಬಳಿಕ ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರು ತಲುಪಲಿದೆ.

 • ಗೀತ ಪ್ರದೀಪ್ ಶ್ರವಣಬೆಳಗೊಳ

ತುಮಕೂರು : ಪ್ರತಿಯೊಬ್ಬರು ಪ್ರತ್ಯೇಕ ಬ್ರಷ್‌ನಲ್ಲಿ ಹಲ್ಲು ಉಜ್ಜುವು ಅಭ್ಯಾಸ ಇಟ್ಟಿಕೊಳ್ಳಬೇಕು. ಯಾವುದೇ ಆಹಾರ ಪದಾರ್ಥ ಸೇವಿಸಿದ ಮೇಲೆ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಸಿದ್ದಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯದ ಡಾ.ಅರವಿಂದ್ ಮಕ್ಕಳಿಗೆ ತಿಳಿ ಹೇಳಿದ್ರು. 

ನಗರದ ಹೊರವಲಯದ ಗೂಳೂರಿನಲ್ಲಿರುವ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ನ ಮಕ್ಕಳಿಗೆ ಸಿದ್ದಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ದಂತ ತಪಾಸಣಾ ಶಿಬಿರದ ವೇಳೆ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿದ ಬಳಿಕ ಮಾತನಾಡಿದ್ರು. ಪ್ರತಿನಿತ್ಯ ಬೆಳಗ್ಗೆ ಮತ್ತು ರಾತ್ರಿ ತಪ್ಪದೆ ಬ್ರಷ್ ಮಾಡಬೇಕು ಎಂದು ಪುಟ್ಟಮಕ್ಕಳಿಗೆ ಕಿವಿಮಾತು ಹೇಳಿದರಷ್ಟೆರಯಲ್ಲದೇ ಮಕ್ಕಳಿಗೆ ದಂತಗಳ ರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. 70ಕ್ಕೂ ಹೆಚ್ಚು ಮಕ್ಕಳಿಗೆ ದಂತ ತಪಾಸಣೆ ನಡೆಸಿ ಅವರ ಪಾಲಕರಿಗೆ ಸಲಹೆ ಸೂಚನೆಯನ್ನು ನೀಡಿದರು. 

ಇದೇ ವೇಳೆ ಮಾತನಾಡಿದ ಡಾ. ಅಶ್ವಿತಾ ಮಾತನಾಡಿ ಮೂರು ಮಕ್ಕಳಲ್ಲಿ ಒಂದು ಮಕ್ಕಳಿಗೆ ಹುಳುಕು ಹಲ್ಲಿನ ಸಮಸ್ಯೆಯಿದೆ. ಮಕ್ಕಳ ಚಿಕ್ಕವಯಸ್ಸಿನಿಂದಲೇ ಹಲ್ಲುಗಳ ಆರೋಗ್ಯದ ಬಗ್ಗೆ ಕಾಳಚಿ ವಹಿಸಬೇಕು.ಈಗಿನ ಜೀವನ ಶೈಲಿ ಬದಲಾವಣೆಯಿಂದ ಮಕ್ಕಳು ಸಿಹಿತಿನಿಸುಗಳು, ಬೇಕರಿ ತಿನಿಸು ಮುಂತಾದ ಜಂಕ್ ಫುಡ್‌ಗಳನ್ನು ಹೆಚ್ಚಾಗಿ ಸೇವಿಸುತ್ತಿರುವುದರಿಂದ ಬೇಗ ಹಲ್ಲುಗಳು ಹಾಳಾಗುತ್ತಿವೆ ಎಂದ್ರು. 

ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿರುವ ಪೋದರ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಮಕ್ಕಳಿಗಾಗಿ ಉಚಿತ ದಂತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ವೇಳೆ ಶಾಲೆಯ ಪ್ರಾಂಶುಪಾಲರಾದ ರಾಜ್‌ ಹುಲಿಮನಿ, ಮುಖ್ಯೋಪಾಧ್ಯಾಯರಾದ ಯಲ್ಲಮ್ಮ ಉಪ್ಪಿನ್ ಸೇರಿದಂತೆ ಶಾಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. 

 • ಶಂಕರೇಗೌಡ, ಕೊಂಡಿನ್ಯೂಸ್, ತುಮಕೂರು

ಶ್ರವಣಬೆಳಗೊಳ: ಯುವ ಜನತೆ ಹೆಚ್ಚಾಗಿ ಎಚ್ಐವಿ ಮತ್ತು ಏಡ್ಸ್ಗೆ ಸೋಂಕಿಗೆ ತುತ್ತಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ರೋಗದ ಬಗ್ಗೆ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಬಿ.ಆರ್.ಯುವರಾಜ್ ಹೇಳಿದರು.

ಪಟ್ಟಣದ ಸಮುಧಾಯ ಆರೋಗ್ಯ ಕೇಂದ್ರ ಹಾಗೂ ವಿವಿಧ ಶಾಲಾ-ಕಾಲೇಜುಗಳ ವತಿಯಿಂದ ಆಯೋಜಿಸಿದ್ದ ಏಡ್ಸ್ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿ, ’ಸಮುದಾಯಗಳಲ್ಲಿ ಬದಲಾವಣೆಯುಂಟು ಮಾಡುವುದು ಎಂಬ ವರ್ಷ ವಿಶ್ವಸಂಸ್ಥೆಯ ಘೋಷವಾಕ್ಯದಂತೆ ಅರಿವು ಮೂಡಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ಎಚ್ಐವಿ ಏಡ್ಸ್ ಬಗ್ಗೆ ಯುವ ಜನತೆ ಅರಿವು ಮೂಡಿಸಿಕೊಳ್ಳುಬೇಕು. ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಕೇವಲ ಉಪನ್ಯಾಸಗಳ ಮೂಲಕ ಸೋಂಕನ್ನು ತಡೆಯಲು ಸಾಧ್ಯವಿಲ್ಲ. ಅಸುರಕ್ಷಿತ ಲೈಂಗಿಕ ಕ್ರಿಯೆ, ಎಚ್ಐವಿ ಸೋಂಕಿರುವ ಗರ್ಭಿಣಿಯರಿಗೆ ಜನಿಸುವ ಮಕ್ಕಳಿಗೆ ಏಡ್ಸ್ ರೋಗ ಹರಡುವ ಸಾಧ್ಯತೆಯಿದ್ದು ಇವುಗಳ ಬಗ್ಗೆ ಎಚ್ಚರವಹಿಸಬೇಕು ಎಂದರು.

ಆಪ್ತ ಸಮಾಲೋಚಕ ಎಸ್.ಮಹಾದೇವ್ ಹೆಚ್..ವಿ. ಸೋಂಕಿನ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸಹಾಯಕ ಚನ್ನೇಗೌಡ, ಶಶಿರೇಖಾ ಹಾಗೂ ಬಾಹುಬಲಿ ನರ್ಸಿಂಗ್ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

 • ಗೀತಾ ಪ್ರದೀಪ್, ಶ್ರವಣಬೆಳಗೊಳ
Page 1 of 40

Media News

 • Latest
 • Most popular
 • Trending
 • Most commented
Post by Kondi News
- Jan 13, 2020
ಹಾಸನ: ಸುರಕ್ಷಿತ ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Nov 05, 2019
ಹಾಸನ: ಮನೆ ಕಟ್ಟುವ ವಿಚಾರಕ್ಕೆ ಅಣ್ಣ ನೀಡುತ್ತಿದ್ದ ...
Has no content to show!

About

Newsletter

Subscribe with us your email
Top