ಕೋಲಾರ : ಮಾರಕಾಸ್ತ್ರಗಳಿಂದ ಯುವಕನ
ಹಾಸನ: ಜಮೀನಿನ ವಿಚಾರಕ್ಕೆ ...
ತುಮಕೂರು:ಪರಿಸರ ಸಂರಕ್ಷಣೆ ಬಗ್ಗೆ
ಚನ್ನರಾಯಪಟ್ಟಣ: ಪಟ್ಟಣದ ...
ಹಾಸನ: ವಿದ್ಯುತ್ ತಂತಿ ತಗಲಿ ...
ಕೋಲಾರ: ಸಾಲಭಾದೆ ತಾಳಲಾರದೆ ...
ಹಾಸನ: ಚಿರತೆಯೊಂದು ಕರುವಿನ ಮೇಲೆ
ಕೊಡಗು: ಈಗ ಬೇಸಿಗೆ ಕಾಲ ಎಲ್ಲರೂ
ಹಾಸನ: ಪುಲ್ವಾಮಾದಲ್ಲಿ ಭಾರತೀಯ ...
ಸಕಲೇಶಪುರ: ಗ್ಯಾಸ್ ಸಿಲಿಂಡರ್ ...
ಕೊಡಗು: ಜಿಲ್ಲೆಯಲ್ಲಿ ಹುಲಿ ದಾಳಿ
ಕೊಡಗು: ಅಪರೂಪದ ಎರಡು ತಲೆಯ ...
ತುಮಕೂರು: ಹಲವು ದಿನಗಳಿಂದ ...
ತುಮಕೂರು/ಗುಬ್ಬಿ: ಚಿರತೆ ದಾಳಿಗೆ
ತುಮಕೂರು/ಹೆಬ್ಬೂರು:
ಹಾಸನ: ಅಪಘಾತ ಪ್ರಕರಣಗಳು ...
ಕೋಲಾರ: ಖಚಿತ ‌ಮಾಹಿತಿ ಮೇರೆಗೆ ...
ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ
ಎತ್ತಿನ ಹೊಳೆ ಯೋಜನೆಯಲ್ಲಿ ಅಕ್ರಮ;ಕ್ರಿಮಿನಲ್ ಕೇಸ್,ನಷ್ಟದ ಹಣ ವಸೂಲಿಗೆ ಪತ್ರ.

ಕೋಲಾರ: ಎತ್ತಿನಹೊಳೆ ಕಾಮಗಾರಿಯಲ್ಲಿ ಅಕ್ರಮವೆಸಗಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ನಷ್ಟದ ಹಣವನ್ನ ವಸೂಲಿ ಮಾಡುವಂತೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯ್ಕ್ ಆದೇಶಿಸಿದ್ದಾರೆ. 

ಕೋಲಾರ ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಿಗೆ 2017-2018 ನೇ ಸಾಲಿನಲ್ಲಿ ಬಾರಿ ನೀರಾವರಿ ಇಲಾಖೆಯು ಎತ್ತಿನಹೊಳೆ ನೀರಾವರಿ ನಿಗಮದ ಮೂಲಕ ಕೆಎಲ್ಆರ್ ಡಿ ಸಂಸ್ಥೆಯು ಪ.ಜಾ.ಪ.ಪಂ.ಜನರ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಹೆಚ್ಚಿಸಲು 41 ಕೋಟಿ ರೂ. ಬಿಡುಗಡೆ ಮಾಡಿದ್ದು, ಆ ಕಾಮಗಾರಿಗಳು ಕಳಪೆಯಾಗಿದ್ದು, ಪಲಾನುಭವಿಗಳಿಗೆ ಅನುಕೂಲವಾಗದ ಕಡೆಗಳಲ್ಲಿ ಚೆಕ್ಡ್ಯಾಂ ನಿರ್ಮಾಣ ಮಾಡಿದ ಇಂಜಿನಿಯರ್ ಗಳ ಮೇಲೆ ಎಸ್ಸಿ-ಎಸ್ಟಿ ಕಾಯ್ದೆ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸರ್ಕಾರಕ್ಕೆ ಆದ ನಷ್ಟವನ್ನು ವಸೂಲಿ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಫೆ.6 ರಂದು ಆದೇಶ ಹೊರಡಿಸಿದ್ದು, ಭಾರಿ ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ರವರಿಗೆ ಸರ್ಕಾರಿ ಪತ್ರದಲ್ಲಿ ಕೋರಿದ್ದಾರೆ. 

2019 ರಲ್ಲಿ ಕೋಲಾರದ ಸಾಮಾಜಿಕ ಕಾರ್ಯಕರ್ತ ಹಾಗೂ ಕರ್ನಾಟಕ ಜನಾದಿಕಾರ ಪರಿಷತ್ ರಾಜ್ಯ ಸಂಚಾಲಕ ಕೆ.ಸಿ.ರಾಜಣ್ಣ ಎಂಬುವರು ಸರ್ಕಾರಕ್ಕೆ ದೂರು ನೀಡಿದ್ದರು. ಅದರನ್ವಯ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕಿ ಶ್ರೀಮತಿ ಊರ್ಮಿಳಾ ನೇತೃತ್ವದ ಉನ್ನತ ತಂಡ ಕೋಲಾರ ಜಿಲ್ಲೆಯ ವಿವಿಧೆಡೆ ಕಾಮಗಾರಿ ನಡೆದು ಸ್ಥಳಗಳಿಗೆ ಭೇಟಿಯಾಗಿ ನೀಡಿ ಪರಿಶೀಲನೆ ನಡೆಸಿತ್ತು. 

ಅಕ್ರಮಗಳ ಕುರಿತಂತೆ ವಿವರವಾದ ವರದಿಯನ್ನು ಸಲ್ಲಿಸಲಾಗಿದ್ದು, ಹಾಗಾಗಿ ಕೋಲಾರದ ಕೆ.ಎಲ್.ಆರ್.ಡಿ ಸಂಸ್ಥೆಯ ತಪ್ಪಿತಸ್ಥ ಅಧಿಕಾರಿ ಇಂಜಿನಿಯರ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಭಾರಿ ನೀರಾವರಿ ಇಲಾಖೆಗೆ ಈ ಪತ್ರವನ್ನು ಬರೆಯಲಾಗಿದೆ. 

  • ಕೊಂಡಿನ್ಯೂಸ್, ಕೋಲಾರ
Last modified on Tuesday, 11 February 2020 19:19
Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Feb 17, 2020
ಕೋಲಾರ : ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ...
Post by Kondi News
- Dec 20, 2019
ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ...
Post by Kondi News
- Sep 09, 2019
ಹಾಸನ: ಕೋಮುವಾದಿ ಪಕ್ಷದ ವಿಷಜಂತುವಾಗಿರುವ ...
Has no content to show!

About Us

ಕನ್ನಡ ಪತ್ರಿಕೋದ್ಯಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಿಂದೆ ಗೋಡೆ ಬರಹದ ಮೇಲೆ, ಕೈ ಬರಹದ ಪತ್ರಿಕೆ, ಅಚ್ಚುಮೊಳೆ ಜೋಡಿಸಿ ಮುದ್ರಣ, ಗಣಕೀಕೃತ ಪತ್ರಿಕೆ, ಮುದ್ರಣ ಮಾಧ್ಯಮ ಬದಲಾದಂತೆ, ಅದೇ ರೀತಿ ಜನರ ಸುದ್ದಿ ಓದುವ ವಿಧಾನವೂ ಕೂಡ ಬದಲಾಗಿದೆ. ಇಂದು ಲಕ್ಷಾಂತರ ಜನ ತಮ್ಮ ಅಂಗೈಯಲ್ಲೇ ಸುದ್ದಿ ಓದುತ್ತಿದ್ದಾರೆ. ಹಾಗಂತ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿದೆ ಎಂಬಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಾರಣ ಬದಲಾವಣೆ ಜಗದ ನಿಯಮ. ಇದಕ್ಕೆ ಸಾಕ್ಷಿಯೆಂಬಂತೆ ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಕೊಂಡಿನ್ಯೂಸ್ 6 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೊರೆಗೊಂಡಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. 5ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ "ಹಾಸನಾಂಬ ವಿಶೇಷಾಂಕ" ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನ ಹೊರತಂದು ಮೆಚ್ಚುಗೆಗೆ ಪಾತ್ರವಾಗಿದ್ದನ್ನ ತಮಗೆ ಹೇಳಬೇಕಿಲ್ಲ ಎಂದುಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ಜನರ ಅಭಿಲಾಷೆಯಂತೆ ಕೊಂಡಿ ನ್ಯೂಸ್ ಹಾಸನ ಮಾತ್ರವಲ್ಲದೇ ಇಂದಿನಿಂದ ತುಮಕೂರು, ಬೆಂಗಳೂರು ಚಾಮರಾಜನಗರ, ಕೋಲಾರ, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಅಂತರ್ಜಾಲ ವಾಹಿನಿಯಾಗಿ ಹೊರಹೊಮ್ಮುತ್ತಿದೆ. ಪತ್ರಕರ್ತರೇ ಕಟ್ಟಿರುವ ಈ ಸುದ್ದಿ ವಾಹಿನಿಯನ್ನು ತಾವು ಬೆಳೆಸುತ್ತಿರಾ. . ? ಹರಸುತ್ತಿರಾ. . . ? ಕೈ ಹಿಡಿಯುತ್ತೀರಾ. . ? ಎಂಬ ನಂಬಿಕೆ ನಮ್ಮದು. www.kondinews.com ಕ್ಲಿಕ್ ಮಾಡಿ, ಲೈಕ್ ಮಾಡಿ. . .  ಶೇರ್ ಮಾಡಿ. . . ಸಬ್ಸ್ಕ್ರೈಬ್ ಮಾಡಿರಿ.. . 

ಸಂಪಾದಕ, ಕೊಂಡಿನ್ಯೂಸ್.

Newsletter

Subscribe with us your email
Top