ಕೋಲಾರ : ಮಾರಕಾಸ್ತ್ರಗಳಿಂದ ಯುವಕನ
ಹಾಸನ: ಜಮೀನಿನ ವಿಚಾರಕ್ಕೆ ...
ತುಮಕೂರು:ಪರಿಸರ ಸಂರಕ್ಷಣೆ ಬಗ್ಗೆ
ಚನ್ನರಾಯಪಟ್ಟಣ: ಪಟ್ಟಣದ ...
ಹಾಸನ: ವಿದ್ಯುತ್ ತಂತಿ ತಗಲಿ ...
ಕೋಲಾರ: ಸಾಲಭಾದೆ ತಾಳಲಾರದೆ ...
ಹಾಸನ: ಚಿರತೆಯೊಂದು ಕರುವಿನ ಮೇಲೆ
ಕೊಡಗು: ಈಗ ಬೇಸಿಗೆ ಕಾಲ ಎಲ್ಲರೂ
ಹಾಸನ: ಪುಲ್ವಾಮಾದಲ್ಲಿ ಭಾರತೀಯ ...
ಸಕಲೇಶಪುರ: ಗ್ಯಾಸ್ ಸಿಲಿಂಡರ್ ...
ಕೊಡಗು: ಜಿಲ್ಲೆಯಲ್ಲಿ ಹುಲಿ ದಾಳಿ
ಕೊಡಗು: ಅಪರೂಪದ ಎರಡು ತಲೆಯ ...
ತುಮಕೂರು: ಹಲವು ದಿನಗಳಿಂದ ...
ತುಮಕೂರು/ಗುಬ್ಬಿ: ಚಿರತೆ ದಾಳಿಗೆ
ತುಮಕೂರು/ಹೆಬ್ಬೂರು:
ಹಾಸನ: ಅಪಘಾತ ಪ್ರಕರಣಗಳು ...
ಕೋಲಾರ: ಖಚಿತ ‌ಮಾಹಿತಿ ಮೇರೆಗೆ ...
ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ
ತುಮಕೂರಿನಲ್ಲಿ ಸದ್ದು ಮಾಡುತ್ತಿವೆ ಅನಧಿಕೃತ ಶಾಲೆಗಳು
ತುಮಕೂರು:ಶೈಕ್ಷಣಿಕ ನಗರಿ ಎಂದು ಕರೆದುಕೊಳ್ಳುವ ತುಮಕೂರು ನಗರಲ್ಲಿ ಅನಧಿಕೃತ ಶಾಲೆಗಳ ಅಬ್ಬರ ಹದ್ದು ಮೀರಿದೆ. ಒಂದೇ ಪರವಾನಗಿ ಮೇಲೆ ಹಲವು ಶಾಲೆಗಳನ್ನ ಅನಧಿಕೃತವಾಗಿ ತೆರೆದು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ. ಕೆಲವೊಂದು ಶಾಲೆಗಳಿಗೆ ಸಿ.ಬಿ.ಎಸಿ ಸಿಲೆಬಸ್ ಅನುಮತಿ ಇಲ್ಲದೇ ಇದ್ದರೂ ಅನಧಿಕೃತವಾಗಿ ಭೋಧಿಸಿ ವಂಚಿಸಲಾಗುತಿದೆ. ಇವಕ್ಕೆಲ್ಲಾ ಲಗಾಮು ಹಾಕಬೇಕಿದ್ದ ಡಿಡಿಪಿಐ ಕಣ್ಣುಮುಚ್ಚಿ ಕುಳಿತಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇಂಥಹ ಡಿಡಿಪಿಐ ವಿರುದ್ದವೇ ಖಾಸಗಿ ಶಾಲೆಗಳ ಒಕ್ಕೂಟ ರಸ್ತೆಗಿಳಿದು ಹೋರಾಟ ಆರಂಭಿಸಿದೆ.
 
 ತುಮಕೂರು ನಗರದಲ್ಲಿ ಹೈಟೆಕ್ ಕಟ್ಟಡ, ಬಣ್ಣ ಬಣ್ಣದ ಪ್ರಚಾರದ ಮೂಲಕ ಪೋಷಕರನ್ನು, ವಿದ್ಯಾರ್ಥಿಗಳನ್ನ ಹಲವು ಖಾಸಗಿ ಶಾಲೆಗಳು ಮೋಸ ಮಾಡುತ್ತಿದೆ. ಬಣ್ಣದ ಜಾಹಿರಾತಿಗೆ, ಮಾತಿಗೆ ಮರುಳಾಗಿ ಶಾಲೆಗೆ ಮಕ್ಕಳನ್ನ ಸೇರಿಸಿದ್ದ ಪೋಷಕರು ಈಗ ತಲೆತಲೆ ಜಜ್ಜಿಕೊಳ್ಳುತಿದ್ದಾರೆ. ಹೌದು, ಪ್ರಮುಖವಾಗಿ ತುಮಕೂರು ನಗರದಲ್ಲಿ ಒಂದು ಪರವಾನಗಿ ಮೇಲೆ ಹಲವು ಶಾಲೆಗಳನ್ನು ನಡೆಸಿ ಮಕ್ಕಳ ಜೀವನದಲ್ಲಿ ಚೆಲ್ಲಾಟ ಆಡುತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಪ್ರತಿಷ್ಠಿತ ಚೈತನ್ಯ ಟೆಕ್ನೋ ವಿದ್ಯಾ ಸಂಸ್ಥೆ ಕೂಡ ವಿದ್ಯಾರ್ಥಿಗಳನ್ನ ವಂಚಿಸುತ್ತಿದೆ. " ಶ್ರೀ ಚೈತನ್ಯ ಟೆಕ್ನೋ" ಎಂಬ ಹೆಸರಿನಲ್ಲಿ ಕ್ಯಾತಸಂದ್ರದಲ್ಲಿ ಪರವಾನಗಿ ತೆಗೆದುಕೊಳ್ಳಲಾಗಿದೆ. ಆದರೆ ಇದೇ ಪರವಾನಗಿ ಮೇಲೆ ಶಾರದಾ ದೇವಿ ನಗರದಲ್ಲಿ ಅನಧಿಕೃತವಾಗಿ "ಸಾಯಿ ಶಿಕ್ಷಾನಿಕೇತನ ಶಾಲೆ" ಎಂದು ಆರಂಬಿಸಿ ಪೋಷಕರನ್ನು ವಂಚಿಸಿದೆ. ಇಲ್ಲಿ ಓದುವ ವಿದ್ಯಾರ್ಥಿಗಳಿಗೆ ಮುಂದೆ ತೊಂದರೆ ಆಗಬಹುದು. ಇನ್ನೂ ಗೂಳೂರಿನಲ್ಲಿರುವ ಪೋದಾರ್ ಇಂಟರ್‍ನ್ಯಾಷನ್ ಸ್ಕೂಲಲ್ಲಿ ಸಿಬಿಎಎಸ್ಸಿ ಪಠ್ಯಕ್ರಮಕ್ಕೆ ಅನುಮತಿ ಇಲ್ಲ. ಆದರೂ ಈ ಪಠ್ಯಕ್ರಮ ಭೋದಿಸಿ ವಂಚಿಸುತಿದ್ದಾರೆ.
 
 ಬೆಳಗುಂಬದಲ್ಲಿ ನೂತನವಾಗಿ ಆರಂಭವಾಗುತ್ತಿರುವ ರಾಜರಾಜೇಶ್ವರಿ ಶಾಲೆ ಕೂಡ ನಿಯಮಾವಳಿ ಉಲ್ಲಂಘಿಸಿ ಕಟ್ಟಲಾಗಿದೆ. ನಿಯಮದ ಪ್ರಕಾರ ಒಂದು ಕಿಮಿ ವ್ಯಾಪ್ತಿಯಲ್ಲಿ ಯಾವುದೇ ಬೇರೆ ಶಾಲೆ ಇರಬಾರದು. 500 ಮೀಟರ್ ವ್ಯಾಪ್ತಿಯಲ್ಲಿ ಮಾರುತಿ ಇಂಟರ್ ನ್ಯಾಷನಲ್ ಸ್ಕೂಲ್ ಇದ್ದರೂ ರಾಜರಾಜೇಶ್ವರಿ ಶಾಲೆಗೆ ಪರ್ಮಿಷನ್ ಕೊಡಲಾಗಿದೆ. ಇನ್ನು ಗೆದ್ದಲಹಳ್ಳಿಯ ಶೆಷಾದ್ರಿಪುರಂ ಶಾಲೆಯಲ್ಲಿಅನುಮತಿಗಿಂತ ಹೆಚ್ಚಿನ ಕ್ಲಾಸನ್ನು ನಡೆಸಲಾಗುತ್ತಿದೆ. ಅಂತರಸನಹಳ್ಳಿಯ ಚೈತನ್ಯ ವಿದ್ಯಾ ಮಂದಿರದ್ದೂ ಇದೆ ಗೋಳು. ನಿಗದಿತ ಪಠ್ಯಕ್ರಮ ಅನುಸರಿಸದೇ ಇರೋದು, ಹೆಚ್ಚಿನ ವಿಭಾಗಗಳನ್ನ ತೆರೆದು ಪಾಠ ಮಾಡುತ್ತಿದೆ. ಇವೆಲ್ಲದರ ವಿರುದ್ದ ಸ್ವತಃ ಖಾಸಗಿ ಶಾಲೆಗಳ ಒಕ್ಕೂಟವೇ ತಿರುಗಿ ಬಿದ್ದಿದೆ. ಇಂಥಹ ಶಾಲೆಗಳ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಪ್ರತಿಭಟನೆ ಮಾಡುತಿದ್ದಾರೆ. ಈ ಶಾಲೆಗಳು ತಪ್ಪು ಮಾಡಿರೋದು ನಿಜ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ವರದಿ ನೀಡಿದ್ದಾರೆ.ಆದರೂ ಡಿಡಿಪಿಐ ಕಾಮಾಕ್ಷಮ್ಮ ಮಾತ್ರ ಉದ್ದಟತನದ ಮಾತಾಡ್ತಾರೆ. "ಸತ್ಯನೋ ಸುಳ್ಳೋ: ಇಲ್ಲಿ ಡಿಸೈಡ್ ಮಾಡೋಕೋ ಆಗಲ್ಲ. ಪ್ರತಿಭಟನೆ ಮಾಡುತಿದ್ದವರಲ್ಲ ಸಾಚಾಗಳಲ್ಲ ಎಂದು ಬೇಜವಾಬ್ದಾರಿಯಿಂದ ಮಾತಾಡುತ್ತಾರೆ.
 
 ನಗರ ಶಾಸಕ ಜ್ಯೋತಿಗಣೇಶ್ ಕೂಡ ಕೆಲಸ ಖಾಸಗಿ ಶಾಲೆಗಳು ಕಾನೂನು ಉಲ್ಲಂಘಿಸಿರೋದು ನಿಜ. ಅಂಥವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿದ್ದಾರೆ. ಆದರೆ ಡಿಡಿಪಿಐ ಕಾಮಾಕ್ಷಮ್ಮ ಕ್ರಮ ತೆಗೆದುಕೊಳ್ಳುವ ಮಾತೇ ಆಡೋದಿಲ್ಲ. ನೋಡೋಣ, ಮಾಡೋಣ ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಡಿಡಿಪಿಐ ಕಾಮಾಕ್ಷಮ್ಮರ ನಡೆ ಹಲವು ಅನುಮಾನಕ್ಕೆ ಕಾರಣವಾಗಿದಂತೂ ಸತ್ಯ. ಇಂಥಹ ಅನಧಿಕೃತ ಶಾಲೆ ಹಾಗೂ ಅಧಿಕಾರಿಗಳ ವಿರುದ್ದ ಶಿಕ್ಷಣ ಸಚಿವರು ತುರ್ತು ಕ್ರಮ ಕೂಗೊಂಡು ಮಕ್ಕಳ ಭವಿಷ್ಯ ರೂಪಿಸಬೇಕು ಎಂಬುದೇ ವರದಿಯ ಆಶಯ.
 
ಕೊಂಡಿನ್ಯೂಸ್, ತುಮಕೂರು
Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Feb 17, 2020
ಕೋಲಾರ : ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ...
Post by Kondi News
- Dec 20, 2019
ಹಾಸನ: ಒಬ್ಬ ಮನುಷ್ಯ ಎಷ್ಟು ವರ್ಷಗಳು ಬದುಕುತ್ತಾನೆ ...
Post by Kondi News
- Sep 09, 2019
ಹಾಸನ: ಕೋಮುವಾದಿ ಪಕ್ಷದ ವಿಷಜಂತುವಾಗಿರುವ ...
Has no content to show!

About Us

ಕನ್ನಡ ಪತ್ರಿಕೋದ್ಯಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹಿಂದೆ ಗೋಡೆ ಬರಹದ ಮೇಲೆ, ಕೈ ಬರಹದ ಪತ್ರಿಕೆ, ಅಚ್ಚುಮೊಳೆ ಜೋಡಿಸಿ ಮುದ್ರಣ, ಗಣಕೀಕೃತ ಪತ್ರಿಕೆ, ಮುದ್ರಣ ಮಾಧ್ಯಮ ಬದಲಾದಂತೆ, ಅದೇ ರೀತಿ ಜನರ ಸುದ್ದಿ ಓದುವ ವಿಧಾನವೂ ಕೂಡ ಬದಲಾಗಿದೆ. ಇಂದು ಲಕ್ಷಾಂತರ ಜನ ತಮ್ಮ ಅಂಗೈಯಲ್ಲೇ ಸುದ್ದಿ ಓದುತ್ತಿದ್ದಾರೆ. ಹಾಗಂತ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿದೆ ಎಂಬಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಾರಣ ಬದಲಾವಣೆ ಜಗದ ನಿಯಮ. ಇದಕ್ಕೆ ಸಾಕ್ಷಿಯೆಂಬಂತೆ ಕೇವಲ 5 ವರ್ಷಗಳ ಹಿಂದೆ ಪ್ರಾರಂಭವಾದ ಕೊಂಡಿನ್ಯೂಸ್ 6 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೊರೆಗೊಂಡಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. 5ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ "ಹಾಸನಾಂಬ ವಿಶೇಷಾಂಕ" ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನ ಹೊರತಂದು ಮೆಚ್ಚುಗೆಗೆ ಪಾತ್ರವಾಗಿದ್ದನ್ನ ತಮಗೆ ಹೇಳಬೇಕಿಲ್ಲ ಎಂದುಕೊಂಡಿದ್ದೇವೆ. ಅದರ ಮುಂದುವರೆದ ಭಾಗವಾಗಿ ಜನರ ಅಭಿಲಾಷೆಯಂತೆ ಕೊಂಡಿ ನ್ಯೂಸ್ ಹಾಸನ ಮಾತ್ರವಲ್ಲದೇ ಇಂದಿನಿಂದ ತುಮಕೂರು, ಬೆಂಗಳೂರು ಚಾಮರಾಜನಗರ, ಕೋಲಾರ, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಅಂತರ್ಜಾಲ ವಾಹಿನಿಯಾಗಿ ಹೊರಹೊಮ್ಮುತ್ತಿದೆ. ಪತ್ರಕರ್ತರೇ ಕಟ್ಟಿರುವ ಈ ಸುದ್ದಿ ವಾಹಿನಿಯನ್ನು ತಾವು ಬೆಳೆಸುತ್ತಿರಾ. . ? ಹರಸುತ್ತಿರಾ. . . ? ಕೈ ಹಿಡಿಯುತ್ತೀರಾ. . ? ಎಂಬ ನಂಬಿಕೆ ನಮ್ಮದು. www.kondinews.com ಕ್ಲಿಕ್ ಮಾಡಿ, ಲೈಕ್ ಮಾಡಿ. . .  ಶೇರ್ ಮಾಡಿ. . . ಸಬ್ಸ್ಕ್ರೈಬ್ ಮಾಡಿರಿ.. . 

ಸಂಪಾದಕ, ಕೊಂಡಿನ್ಯೂಸ್.

Newsletter

Subscribe with us your email
Top